A+​ ಗ್ರೇಡ್​​ಗೆ KL ರಾಹುಲ್​​ ಮತ್ತು ಪಂತ್​ ಬಡ್ತಿ ಸಾಧ್ಯತೆ.. BCCI ನಿರ್ಧಾರವೇನು?


ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿರುವ ಕೇಂದ್ರಿಯ ಗುತ್ತಿಗೆಯಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಎ ಪ್ಲಸ್‌ ದರ್ಜೆಗೆ ಬಡ್ತಿ ನೀಡುವ ಸಾಧ್ಯತೆ ಇದೆ. ಈಗಾಗಲೇ ರೋಹಿತ್, ಕೊಹ್ಲಿ ಮತ್ತು ಬೂಮ್ರಾ ಎ ಪ್ಲಸ್​ ಗ್ರೇಡ್​​​ನಲ್ಲಿದ್ದಾರೆ. ಇವರ ಸಾಲಿಗೆ ಅಂದರೆ ಅಗ್ರದರ್ಜೆಗೆ ಪಂತ್​​, ರಾಹುಲ್​​ ಸೇರಲಿದ್ದಾರೆ.

ಕೇಂದ್ರ ಗುತ್ತಿಗೆಯಲ್ಲಿ ಎ ಪ್ಲಸ್ ₹ 7ಕೋಟಿ, ಎ ₹ 5 ಕೋಟಿ, ಬಿ ₹ 3 ಕೋಟಿ ಹಾಗೂ ಸಿ ₹ 1 ಕೋಟಿ ಎಂಬ ನಾಲ್ಕು ವಿಭಾಗಗಳಾಗಿವೆ. ಬಿಸಿಸಿಐ ಸೆಲೆಕ್ಷನ್​ ಕಮಿಟೀ ಈ ವಿಭಾಗಗಳಿಗೆ ಆಟಗಾರರನ್ನು ಆಯ್ಕೆ ಮಾಡುತ್ತಾರೆ.

ಬಿ ಗುಂಪಿನ ಇಶಾಂತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸ್ಥಾನದಿಂದ ಕೆಳಗೆ ಜಾರುವ ಸಾಧ್ಯತೆ ಹೆಚ್ಚಿದೆ. ಸಿ ಗುಂಪಿನಲ್ಲಿರೋ ಮೊಹಮ್ಮದ್ ಸಿರಾಜ್, ಬಿ ಗುಂಪಿನ ಶಾರ್ದೂಲ್ ಠಾಕೂರ್ ಈ ವರ್ಷ ಬಡ್ತಿ ಪಡೆಯೋ ಸಾಧ್ಯತೆ ಇದೆ.

The post A+​ ಗ್ರೇಡ್​​ಗೆ KL ರಾಹುಲ್​​ ಮತ್ತು ಪಂತ್​ ಬಡ್ತಿ ಸಾಧ್ಯತೆ.. BCCI ನಿರ್ಧಾರವೇನು? appeared first on News First Kannada.

News First Live Kannada


Leave a Reply

Your email address will not be published. Required fields are marked *