‘A.R. ರೆಹಮಾನ್ ನನಗೆ ಗೊತ್ತೇ ಇಲ್ಲ.. ಭಾರತ ರತ್ನ ಪ್ರಶಸ್ತಿ ನನ್ನ ತಂದೆಯ ಉಗುರಿಗೆ ಸಮ’ ಎಂದ ಬಾಲಕೃಷ್ಣ

‘A.R. ರೆಹಮಾನ್ ನನಗೆ ಗೊತ್ತೇ ಇಲ್ಲ.. ಭಾರತ ರತ್ನ ಪ್ರಶಸ್ತಿ ನನ್ನ ತಂದೆಯ ಉಗುರಿಗೆ ಸಮ’ ಎಂದ ಬಾಲಕೃಷ್ಣ

ಎ.ಆರ್.ರೆಹಮಾನ್ ಯಾರೆಂದು ತನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನಟ ನಂದಮೂರಿ ಬಾಲಕೃಷ್ಣ ಟ್ರೋಲ್​ಗೆ ಗುರಿಯಾಗಿದ್ದಾರೆ.

ತೆಲುಗು ಖಾಸಗಿ ವಾಹಿನಿಯೊಂದರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಂದಮೂರಿ ಬಾಲಕೃಷ್ಣ ಅವರಿಗೆ ಎ.ಆರ್. ರೆಹಮಾನ್ ಬಗ್ಗೆ ಪ್ರಶ್ನೆ ಎದುರಾಗುತ್ತೆ. ಎ.ಆರ್.ರೆಹಮಾನ್ ಯಾರೆಂದು ನನಗೆ ತಿಳಿದಿಲ್ಲ. ಅವರು ಆಸ್ಕರ್ ಪ್ರಶಸ್ತಿ ಪಡೆದವರಾಗಿರಬಹುದು. ಆದರೂ ಅವರು ಯಾರೆಂದು ನನಗೆ ತಿಳಿದಿಲ್ಲ ಎಂದಿದ್ದಾರೆ.

ಇನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಕುರಿತು ಕೇವಲವಾಗಿ ಮಾತನಾಡಿರುವ ನಟ ನಂದಮೂರಿ ಬಾಲಕೃಷ್ಣ.. ಟಾಲಿವುಡ್​ಗೆ ನನ್ನ ಕುಟುಂಬವು ನೀಡಿರುವ ಕೊಡುಗೆಗೆ ಯಾವುದೇ ಪ್ರಶಸ್ತಿಗಳು ಸರಿಸಮ ಅಲ್ಲ. ಭಾರತ ರತ್ನ ಪ್ರಶಸ್ತಿ ನಮ್ಮ ತಂದೆ ಎನ್​ಟಿಆರ್​​ ಅವರ ಬೆರಳ ಉಗುರಿಗೆ ಸಮ ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ 1993ರಲ್ಲಿ ನಂದಮೂರಿ ಬಾಲಕೃಷ್ಣ ಅವರ ನಿಪ್ಪು ರಾವ್ವಾ ಅವರ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದರು.

The post ‘A.R. ರೆಹಮಾನ್ ನನಗೆ ಗೊತ್ತೇ ಇಲ್ಲ.. ಭಾರತ ರತ್ನ ಪ್ರಶಸ್ತಿ ನನ್ನ ತಂದೆಯ ಉಗುರಿಗೆ ಸಮ’ ಎಂದ ಬಾಲಕೃಷ್ಣ appeared first on News First Kannada.

Source: newsfirstlive.com

Source link