Aamir Khan: ಮತ್ತೆ ಸಿಗರೇಟ್​ ಚಟ ಹತ್ತಿಸಿಕೊಂಡ ಆಮಿರ್​ ಖಾನ್​; ಸಾಕ್ಷಿ ಸಮೇತ ಸಿಕ್ಕಿಬಿದ್ದ ನಟ | Aamir khan smoking pipe in Koffee with Karan show set: Photo goes viral


Laal Singh Chaddha | Aamir Khan: ಪುತ್ರ ಆಜಾದ್ ಖಾನ್​ ಸಲುವಾಗಿ ಆಮಿರ್​ ಖಾನ್​ ಅವರು ಸಿಗರೇಟ್​ ಚಟ ಬಿಟ್ಟಿದ್ದಾರೆ ಎಂಬುದನ್ನು ನಿಜ ಎಂದು ಅಭಿಮಾನಿಗಳು ನಂಬಿದ್ದರು. ಆದರೆ ಈಗ ವೈರಲ್​ ಆಗಿರುವ ಫೋಟೋದಿಂದ ಸತ್ಯ ಬಯಲಾಗಿದೆ.

Aamir Khan: ಮತ್ತೆ ಸಿಗರೇಟ್​ ಚಟ ಹತ್ತಿಸಿಕೊಂಡ ಆಮಿರ್​ ಖಾನ್​; ಸಾಕ್ಷಿ ಸಮೇತ ಸಿಕ್ಕಿಬಿದ್ದ ನಟ

ಆಮಿರ್ ಖಾನ್, ಕರೀನಾ ಕಪೂರ್ ಖಾನ್ ವೈರಲ್​ ಫೋಟೋ

ಬಾಲಿವುಡ್​ನ ಖ್ಯಾತ ನಟ ಆಮಿರ್​ ಖಾನ್ (Aamir Khan)​ ಅವರ ಸಂಪೂರ್ಣ ಗಮನ ಈಗ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಮೇಲಿದೆ. ಸಾಕಷ್ಟು ಸಮಯ ತೆಗೆದುಕೊಂಡು ಅವರು ಈ ಸಿನಿಮಾ ಮಾಡಿದ್ದಾರೆ. ಆಗಸ್ಟ್​ 11ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಅವರು ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಚಿತ್ರದಲ್ಲಿ ಆಮಿರ್​ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ಇದರ ಪ್ರಚಾರದ ಸಲುವಾಗಿ ಜನಪ್ರಿಯ ‘ಕಾಫಿ ವಿತ್​ ಕರಣ್​ ಸೀಸನ್​ 7’ (Koffee With Karan 7) ಶೋಗೆ ಹಾಜರಿ ಹಾಕಿದ್ದಾರೆ. ಎಪಿಸೋಡ್​ ಶೂಟಿಂಗ್​ ಸಂದರ್ಭದ ಫೋಟೋ ವೈರಲ್​ ಆಗಿದೆ. ಇದರಲ್ಲಿ ಆಮಿರ್ ಖಾನ್​ ಅವರು ಸಿಗರೇಟ್​ ಸೇದುತ್ತಿರುವುದು ಕಂಡುಬಂದಿದೆ.

ಈ ಮೊದಲು ಆಮಿರ್​ ಖಾನ್​ ಸಿಕ್ಕಾಪಟ್ಟೆ ಸಿಗರೇಟ್​ ಸೇದುತ್ತಿದ್ದರು. ಅದಕ್ಕೆ ಕುಟುಂಬದವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಧೂಮಪಾನದ ಸಹವಾಸ ಬಿಟ್ಟುಬಿಡುವಂತೆ ಮಕ್ಕಳಾದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಅವರು ಒತ್ತಾಯ ಮಾಡಿದ್ದರು. ಹಾಗಿದ್ದರೂ ಸಂಪೂರ್ಣ ತ್ಯಜಿಸಲು ಆಮಿರ್​ ಖಾನ್​ಗೆ ಸಾಧ್ಯವಾಗಿರಲಿಲ್ಲ. ಆದರೆ ಪುತ್ರ ಆಜಾದ್​ ಖಾನ್​ ಜನಿಸಿದ ಬಳಿಕ ಅವರು ಸಿಗರೇಟ್​ ಬಿಟ್ಟಿದ್ದರು ಎಂದು ವರದಿ ಆಗಿತ್ತು.

ಪುತ್ರ ಆಜಾದ್ ಖಾನ್​ ಸಲುವಾಗಿ ಆಮಿರ್​ ಖಾನ್​ ಅವರು ಸಿಗರೇಟ್​ ಚಟ ಬಿಟ್ಟಿದ್ದಾರೆ ಎಂಬುದನ್ನು ನಿಜ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಈಗ ವೈರಲ್​ ಆಗಿರುವ ಈ ಫೋಟೋದಲ್ಲಿ ಅವರು ಪೈಪ್​ ಸೇದುತ್ತಿರುವುದು ಕಾಣಿಸಿದೆ. ‘ಒತ್ತಡದ ಕಾರಣದಿಂದ ಆಮಿರ್​ ಖಾನ್​ ಮತ್ತೆ ಸಿಗರೇಟ್​ ಸೇದಲು ಪ್ರಾರಂಭಿದ್ದಾರೆ..’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗುತ್ತಿದೆ.

TV9 Kannada


Leave a Reply

Your email address will not be published. Required fields are marked *