AAP will contest in as many seats as possible In Nagaland assembly polls | ನಾಗಾಲ್ಯಾಂಡ್‌ನಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ: ಎಎಪಿ


60 ಸದಸ್ಯರ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ನಾವು ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ

ನಾಗಾಲ್ಯಾಂಡ್‌ನಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ: ಎಎಪಿ

ಕೇಜ್ರಿವಾಲ್ ಜತೆ ಆಸು ಕೀಹೋ

ಕೊಹಿಮಾ: ಮುಂಬರುವ ನಾಗಾಲ್ಯಾಂಡ್ (Nagaland) ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅದರ ಈಶಾನ್ಯ ಉಸ್ತುವಾರಿ ರಾಜೇಶ್ ಶರ್ಮಾ (Rajesh Sharma) ಹೇಳಿದ್ದಾರೆ. ಮಾಜಿ ಶಾಸಕ ಆಸು ಕೀಹೋ ಅವರನ್ನು ಎಎಪಿಯ ನಾಗಾಲ್ಯಾಂಡ್ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. 60 ಸದಸ್ಯರ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ನಾವು ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ.  ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಉತ್ತಮ ಆಡಳಿತ, ಪ್ರಾಮಾಣಿಕ ರಾಜಕೀಯ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಂದಿಗೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ನಾಗಾಲ್ಯಾಂಡ್ ಜನರು ಮತ ಚಲಾಯಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ನಾಗಾಲ್ಯಾಂಡ್‌ನ ರಾಜಕೀಯ ಸನ್ನಿವೇಶದಲ್ಲಿ ಅಗತ್ಯವಾದ ಬದಲಾವಣೆಯನ್ನು ತರಲು ಪಕ್ಷ ಎಲ್ಲ ಹಂತದವರನ್ನು ತಲುಪುತ್ತದೆ ಎಂದು ಶರ್ಮಾ ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿ

ಈಶಾನ್ಯ ರಾಜ್ಯದ ಜನರು ಎಎಪಿ ಸರ್ಕಾರವನ್ನು ಬಯಸುತ್ತಾರೆ.ದೆಹಲಿಯಲ್ಲಿರುವ ನಾಗಾಗಳು, ಓದುತ್ತಿರಲಿ ಅಥವಾ ಕೆಲಸ ಮಾಡುತ್ತಿರಲಿ, ಅಲ್ಲಿನ ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಡಿಯಲ್ಲಿ ಉತ್ತಮ ಆಡಳಿತ ಮತ್ತು ಭರವಸೆಗಳ ಈಡೇರಿಕೆಗೆ ಸಾಕ್ಷಿಯಾಗಿದ್ದಾರೆ ಎಂದು ಎಂದು ಕೀಹೋ ಹೇಳಿದರು.

TV9 Kannada


Leave a Reply

Your email address will not be published. Required fields are marked *