ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡೋದು ಬಹುತೇಕ ಖಚಿತ ಆಗಿದೆ. ಹೀಗಾಗಿ ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು ಎಂಬ ಚರ್ಚೆ ನಡೆಯುತ್ತಲೇ ಇದೆ. ಮುಂದಿನ ಸೀಸನ್ ವೇಳೆಗೆ ನಾನು ಆರ್ಸಿಬಿ ತಂಡದ ನಾಯಕ ಸ್ಥಾನದಿಂದ ಕೆಳಗಿಳಿಯಲ್ಲಿದ್ದೇನೆ ಎಂದು ವಿರಾಟ್ ಘೋಷಿಸಿದ್ದರು. ಇದರ ಬೆನ್ನಲ್ಲೇ ಆರ್ಸಿಬಿ ತಂಡಕ್ಕೆ ಮುಂದಿನ ನಾಯಕ ರೇಸ್ನಲ್ಲಿ ಹಲವರ ಹೆಸರು ಕೇಳಿ ಬಂದಿದೆ.
ಎಬಿಡಿ, ಗ್ಲೈನ್ ಮ್ಯಾಕ್ಸ್ವೆಲ್, ಕೆ.ಎಲ್ ರಾಹುಲ್, ಕಿರಾನ್ ಪೊಲಾರ್ಡ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಐಪಿಎಲ್ 2022 ರಲ್ಲಿ ಆರ್ಸಿಬಿ ತಂಡವನ್ನು ನಾಯಕರಾಗಿ ಇವರು ಮುನ್ನಡೆಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಸಾಲಿಗೆ ಈಗ ಆರ್ಸಿಬಿ ತಂಡದ ಬೌಲರ್ ಯುಜ್ವೇಂದ್ರ ಚಾಹಲ್ ಸೇರ್ಪಡೆಯಾಗಿದೆ.
ಕಳೆದ 6 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಯುಜ್ವೇಂದ್ರ ಚಾಹಲ್ ಕೂಡ ವಹಿಸಿದ್ದಾರೆ. 106 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಇರುವ ತಂಡದ ಆಟಗಾರರ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಇವರೇ ಆರ್ಸಿಬಿ ತಂಡದ ಮುಂದಿನ ಕ್ಯಾಪ್ಟನ್ ಆಗಲಿ ಎಂಬ ಚರ್ಚೆ ಜೋರಾಗಿದೆ.
ಇದನ್ನೂ ಓದಿ: ಅರೇ ಇದೇನಿದು! ಕಮಲದ ನಾಣ್ಯ ಬಿಡುಗಡೆ ಮಾಡಿದ ಇಂಗ್ಲೆಂಡ್ ಸರ್ಕಾರ