ABD ಬದಲಿಗೆ ಯುವ ಆಟಗಾರನಿಗೆ ಮಣೆ; ಕನ್ನಡಿಗ ಪಡಿಕ್ಕಲ್ ಆಗಲಿದ್ದಾರಾ​​ RCB ಕ್ಯಾಪ್ಟನ್​?


ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳುವುದಾಗಿ ವಿರಾಟ್ ಕೊಹ್ಲಿ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ಈಗ ವಿರಾಟ್ ಬಳಿಕ ಆರ್​ಸಿಬಿ ಮುಂದಿನ ನಾಯಕ ಯಾರು? ಎಂಬ ಚರ್ಚೆ ಜೋರಾಗಿದೆ. ನಾಯಕತ್ವ ರೇಸ್​​ನಲ್ಲಿ ಹಲವು ಆಟಗಾರರ ಹೆಸರು ಕೇಳಿ ಬರುತ್ತಿದೆ.

ಇನ್ನು, ಆರ್​​ಸಿಬಿ ಮುಂದಿನ ನಾಯಕ ಸ್ಥಾನಕ್ಕೆ ಪ್ರಮುಖವಾಗಿ ತಂಡದ ಅನುಭವಿ ಆಟಗಾರ ಮಿಸ್ಟರ್ 360 ಬ್ಯಾಟ್ಸ್‌ಮ್ಯಾನ್‌ ಖ್ಯಾತಿಯ ಎಬಿಡಿ ವಿಲಿಯರ್ಸ್‍ ಹೆಸರು ಕೇಳಿ ಬರುತ್ತಿದೆ. ಇವರೊಂದಿಗೆ ಯಜುವೇಂದ್ರ ಚಹಲ್, ಗ್ಲೇನ್ ಮ್ಯಾಕ್ಸ್​ವೆಲ್ ಹೆಸರು ಕೂಡ ಚಾಲ್ತಿಯಲ್ಲಿದೆ. ಕನ್ನಡಿ ಕೆ.ಎಲ್​​​ ರಾಹುಲ್​​ ಹೆಸರು ಕೂಡ ರೇಸ್​​ನಲ್ಲಿದೆ.

ಈಗ ತಂಡದ ಯುವ ಆಟಗಾರ ಕನ್ನಡಿಗ ದೇವದತ್ ಪಡಿಕ್ಕಲ್‍ಗೆ ನಾಯಕತ್ವ ಪಟ್ಟ ಕಟ್ಟಲು ಆರ್​ಸಿಬಿ ತಂಡ ಚಿಂತಿಸಿದೆ ಎನ್ನಲಾಗುತ್ತಿದೆ. ಆರ್​ಸಿಬಿಯ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಸಣ್ಣ ವಯಸ್ಸು, ಯುವ ಆಟಗಾರರ. ಹಾಗಾಗಿ ಆರ್​ಸಿಬಿಯ ಭವಿಷ್ಯದ ಬಗ್ಗೆ ಗಮನಿಸಿದರೆ ಪಡಿಕ್ಕಲ್ ಉತ್ತಮ ಆಯ್ಕೆ ಎಂಬುದು ಆರ್​​ಸಿಬಿ ಪ್ರಾಂಚೈಸಿ ಆಲೋಚನೆಯಂತೆ.

News First Live Kannada


Leave a Reply

Your email address will not be published. Required fields are marked *