IPLನ ಮೋಸ್ಟ್ ಅತ್ಯುತ್ತಮ ಪ್ಲೇಯರ್ ಎಬಿಡಿ ವಿಲಿಯರ್ಸ್ 360 ಡಿಗ್ರಿ ಆಟಕ್ಕೆ, ಫಿದಾ ಆಗದವರಿಲ್ಲ. ಆದರೆ ಎಬಿಡಿ ಬ್ಯಾಟಿಂಗ್ ನೋಡೋದು, ಇನ್ನು ಕನಸು ಮಾತ್ರ. ಏಕೆಂದ್ರೆ ಎಬಿಡಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಆದರೆ ಐಪಿಎಲ್ನಲ್ಲಿ ಅವರಾಡಿದ ಆ ಅದ್ಭುತ ಇನ್ನಿಂಗ್ಸ್ಗಳನ್ನ ಮಾತ್ರ, ಯಾರೂ ಮರೆಯೋಕೆ ಸಾಧ್ಯವಿಲ್ಲ.
ಇದನ್ನೂ ಓದಿ: ತಮ್ಮ ಕ್ರಿಕೆಟ್ ಬದುಕಿನ ನಿವೃತ್ತಿಗೆ ಎಬಿಡಿ ಕೊಟ್ಟ ಕಾರಣ ಏನು ಗೊತ್ತಾ..?
ಆ್ಯಂಡ್ರ್ಯೂ ಬೆಂಜಮಿನ್ ಡಿ ವಿಲಿಯರ್ಸ್ ವಿದಾಯ.. ಇದು ಕ್ರಿಕೆಟ್ ಲೋಕದ ಅಭಿಮಾನಿಗಳಿಗೆ ತೀವ್ರ ಆಘಾತ ಕೊಟ್ಟ ಸುದ್ದಿ. ಅದ್ರಲ್ಲೂ ಹೆಚ್ಚು ಶಾಕ್ಗೆ ಒಳಗಾಗಿರೋದು, ನಮ್ಮ ಆರ್ಸಿಬಿ ಫ್ಯಾನ್ಸ್. ದಕ್ಷಿಣ ಆಫ್ರಿಕಾದ ಈ ಸೂಪರ್ಸ್ಟಾರ್ಗೆ ಒಂದೂ IPL ಕಿರೀಟ ದಕ್ಕಲಿಲ್ಲ. ಆದರೂ ಶ್ರೀಮಂತ ಲೀಗ್ನಲ್ಲಿ ABD ಇನ್ನಿಂಗ್ಸ್, ಎಲ್ರನ್ನೂ ಮೆಸ್ಮರೈಸ್ ಮಾಡಿವೆ.
CSK ವಿರುದ್ಧ 54 ಎಸೆತಗಳಲ್ಲಿ ಅಜೇಯ 105 ರನ್
IPLನಲ್ಲಿ ABD ಮೊದಲ ಸೆಂಚುರಿ ಸಿಡಿಸಿದ್ದು, 2009ರಲ್ಲಿ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ. ಆಗಿನ್ನೂ ಡೆಲ್ಲಿ ಪರ ಆಡ್ತಿದ್ದ ಈ ಆಪತ್ಬಾಂಧವನ ಶತಕದ ನೆರವಿನಿಂದ, ಡೆಲ್ಲಿ 189 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಆ ಪಂದ್ಯವನ್ನ ಡೆಲ್ಲಿ ಗೆದ್ದು ಬೀಗಿತು.
ಇದನ್ನೂ ಓದಿ: ‘ಕ್ರಿಕೆಟ್ ಅನ್ನೇ ಬದಲಾಯಿಸಿದ ಲೆಜೆಂಡ್ ABD’- RCB ತಂಡದ ಬ್ಯಾಟ್ಸ್ಮನ್ ಮ್ಯಾಕ್ಸ್ವೆಲ್
ಡೆಕ್ಕನ್ ಚಾರ್ಜರ್ಸ್ ವಿರುದ್ಧ 17 ಎಸೆತಗಳಲ್ಲಿ ಅಜೇಯ 47 ರನ್
ವಿಲಿಯರ್ಸ್ರ ಈ ಮಾಸ್ಟರ್ಕ್ಲಾಸ್ ಇನ್ನಿಂಗ್ಸ್, ಬಂದಿದ್ದು 2012ರಲ್ಲಿ. ಡೆಕ್ಕನ್ ಚಾರ್ಜರ್ಸ್, RCBಗೆ 181 ರನ್ಗಳ ಗುರಿ ನೀಡಿತ್ತು. RCBಗೆ ಗೆಲ್ಲಲು ಕೊನೇ 4 ಓವರ್ಗಳಲ್ಲಿ 65 ರನ್ ಬೇಕಿತ್ತು. ಕ್ರೀಸ್ನಲ್ಲಿದ್ದ ಮಿಸ್ಟರ್ 360, ಜಸ್ಟ್ 17 ಬಾಲ್ಗಳಲ್ಲೇ 5 ಫೋರ್, 3 ಸಿಕ್ಸರ್ ಸಿಡಿಸಿ 47ರನ್ ಗಳಿಸಿದ್ರು. ಪಂದ್ಯವನ್ನ ಸಹ ಗೆಲ್ಲಿಸಿಕೊಟ್ರು.
ಮುಂಬೈ ಇಂಡಿಯನ್ಸ್ ವಿರುದ್ಧ 59 ಎಸೆತಗಳಲ್ಲಿ 133 ರನ್
ಎಬಿಡಿ ಈ ಸ್ಫೋಟಕ ಇನ್ನಿಂಗ್ಸ್ ಆಡಿದ್ದು 2015ರಲ್ಲಿ ಮುಂಬೈ ವಿರುದ್ಧ. ಡಿವಿಲಿಯರ್ಸ್ 19 ಬೌಂಡರಿ, 4 ಸಿಕ್ಸರ್ಗಳ ನೆರವಿನಿಂದ 133 ರನ್ ಕಲೆ ಹಾಕಿದ್ರು. ಈ ಪಂದ್ಯವನ್ನ RCB 39 ರನ್ಗಳಿಂದ ಗೆದ್ದು ಸಂಭ್ರಮಿಸಿತು.
ಇದನ್ನೂ ಓದಿ: ‘RCB ಫ್ಯಾನ್ಸ್ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗದು, ನಾನು ಎಂದಿಗೂ ಕೊಹ್ಲಿ ಸಪೋರ್ಟರ್’- ABD
ಗುಜರಾತ್ ಲಯನ್ಸ್ ವಿರುದ್ಧ 47 ಬಾಲ್ಗಳಲ್ಲಿ ಅಜೇಯ 79 ರನ್
ಗುಜರಾಜ್ ನೀಡಿದ್ದ 159ರನ್ಗಳ ಗುರಿ ಬೆನ್ನತ್ತಿದ್ದ RCB, 68 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು. ಆದರೆ ಕ್ರೀಸ್ನಲ್ಲಿದ್ದ ಎಬಿಡಿ, ಇನ್ನೂ 10 ಎಸೆತ ಬಾಕಿ ಇರುವಂತೆಯೇ, ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ರು. ಈ ಗೆಲುವು ಆರ್ಸಿಬಿ ಫೈನಲ್ಗೇರಲು ನೆರವಾಯ್ತು.
ಗುಜರಾತ್ ಲಯನ್ಸ್ ವಿರುದ್ಧ 52 ಎಸೆತಗಳಲ್ಲಿ ಅಜೇಯ 129 ರನ್..!
ಡಿವಿಲಿಯರ್ಸ್ರ ಬೆಸ್ಟ್ ಇನ್ನಿಂಗ್ಸ್ಗಳಲ್ಲಿ, ಇದೂ ಒಂದು. 2016ರಲ್ಲಿ ಗುಜರಾತ್ ವಿರುದ್ಧ ಸಿಡಿಸಿದ ಈ ಶತಕ, ಮತ್ತೊಂದು ದಾಖಲೆಗೆ ಪಾತ್ರವಾಯ್ತು. 52 ಬಾಲ್ಗಳಲ್ಲಿ ಅಜೇಯ 129ರನ್ ಕಲೆ ಹಾಕಿದ್ದ ಎಬಿಡಿ, 12 ಸಿಕ್ಸರ್, 10 ಬೌಂಡರಿಗಳನ್ನ ಸಿಡಿಸಿದ್ರು. ಈ ಪಂದ್ಯದಲ್ಲಿ ಲಯನ್ಸ್ ವಿರುದ್ಧ ಆರ್ಸಿಬಿ 144 ರನ್ಗಳ ಜಯ ಸಾಧಿಸಿತ್ತು.