ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್ಐ ದಯಾನಂದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು, ಈ ವೇಳೆ ಕೇವಲ ಐವತ್ತು ಸಾವಿರ ನಗದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕೋಟಿ ಬೆಲೆ ಬಾಳುವ ಮನೆಯಲ್ಲಿ ಸಿಕ್ಕಿದ್ದು ಕೇವಲ 50 ಸಾವಿರ ನಗದು ಮಾತ್ರ. ಇನ್ನು ದಯಾನಂದ್ ಎಲ್ಲಿದ್ದಾರೆ ಅನ್ನೊ ಮಾಹಿತಿ ಗೊತ್ತಿಲ್ಲ ಎಂದ ಕುಟುಂಬಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಸ್ಪೆಂಡ್ ಆಗ್ತಿದ್ದಂತೆ ದಯಾನಂದ್ ರಜೆ ಮೇಲೆ ತೆರಳಿದ್ದಾರೆ.

ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯಿಂದ ಮತ್ತೆ ಕೊಡಿಗೇಹಳ್ಳಿ ಠಾಣೆಗೆ ದಯಾನಂದ್ ವರ್ಗಾ ಮಾಡಲಾಗಿತ್ತು. ಕಳೆದ ಜೂನ್ 13 ರಂದು ಕೊಡಿಗೇಹಳ್ಳಿ ಠಾಣೆಗೆ ಡ್ಯೂಟಿ ರಿಪೊರ್ಟ್ ಮಾಡ್ಕೊಂಡಿದ್ದರು. ಡ್ಯೂಟಿಗೆ ರಿಪೊರ್ಟ್ ಮಾಡ್ಕೊಂಡ ದಿನವೇ ಐದು ದಿನಗಳ ರಜೆ ಮೇಲೆ ತೆರಳಿದ್ದರು. ಕಳೆದ ತಿಂಗಳು ಎ.ಎಸ್.ಐ ದಯಾನಂದ್ ತಾಯಿ ನಿಧನರಾಗಿದ್ರು. ಈ ಹಿನ್ನೆಲೆಯಲ್ಲಿ ತಿಂಗಳ ಕಾರ್ಯ ಮಾಡಬೇಕು ಎಂದು ದಯಾನಂದ್ ರಜೆ ಮೇಲೆ ತೆರಳಿದ್ದರು.

ಪ್ರಕಟಣೆ ಹೊರಡಿಸಿದ ಎಸಿಬಿ
ಎಸಿಬಿ ದಾಳಿ ವೇಳೆ ದಯಾನಂದ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಎಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಐದು ಲಕ್ಷ ನಗದು ಪಡೆದಿದ್ದ ಆರೋಪ ದಯಾನಂದ್ ಮೇಲಿದೆ. ದಯಾನಂದ್ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಹಿನ್ನೆಲೆ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎಸಿಬಿ ಎಸ್ಪಿ ಯತೀಶ್ ಚಂದ್ರ ಹಾಗೂ ಡಿವೈಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ದಾಳಿ ನಡೆದಿತ್ತು. ಐವತ್ತು ಸಾವಿರ ನಗದು ಹಾಗೂ ಕೆಲ ಮಹತ್ವದ ದಾಖಲೆಗಳನ್ನ ಪಂ‍ಚನಾಮೆ ನಡೆಸಿ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ: ಲಂಚ ಪ್ರಕರಣ: ಕೊಡಿಗೇಹಳ್ಳಿ ASI ದಯಾನಂದ್ ಮನೆ ಮೇಲೆ ಎಸಿಬಿ ದಾಳಿ

The post ACB ಅಧಿಕಾರಿಗಳಿಗೆ ಶಾಕ್! ಕೋಟಿ ಬೆಲೆ ಬಾಳುವ ASI ದಯಾನಂದ್​​ ಮನೆಯಲ್ಲಿ ಸಿಕ್ಕ ಹಣವೆಷ್ಟು? appeared first on News First Kannada.

Source: newsfirstlive.com

Source link