Accident: ಬೈಕ್​ಗೆ ಕ್ಯಾಂಟರ್​ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ | Canter collides with bike: Two riders die on the spot


ಕ್ಯಾಂಟರ್​ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮ ಬಂದರ್ಲಹಳ್ಳಿ ಬಳಿ ನಡೆದಿದೆ.

Accident: ಬೈಕ್​ಗೆ ಕ್ಯಾಂಟರ್​ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ

ಕ್ಯಾಂಟರ್​ ಡಿಕ್ಕಿ, ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರ ದುರ್ಮರಣ

ಚಿಕ್ಕಬಳ್ಳಾಪುರ: ಕ್ಯಾಂಟರ್​ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ ಗೌರಿಬಿದನೂರು ತಾಲೂಕಿನ ಗ್ರಾಮ ಬಂದರ್ಲಹಳ್ಳಿ ಬಳಿ ನಡೆದಿದೆ. ದೊಡ್ಡಬಳ್ಳಾಪುರದ ಮೌಲಾ(20), ಉಮರ್(20) ಮೃತರು.
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು: ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಜು ಸೆಲ್ವರಾಜ್ (36) ಬಂಧಿತ ಆರೋಪಿ. ಗೋವಾ, ಖಾನಾಪುರ, ಯಲ್ಲಾಪುರ ಸೇರಿದಂತೆ ವಿವಿಧೆಡೆ ಆರೋಪಿ ವಿರುದ್ಧ ಪ್ರಕರಣಗಳಿವೆ. ಬಂಧಿತನಿಂದ 3.50 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಬಾಣಸವಾಡಿ ಠಾಣಾ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೋಲೀಸರ ದಾಳಿ:

ಕೋಲಾರ: ರೆಹಮತ್ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್​ ಮಾಡುತ್ತಿದ್ದ ಅಯಾಸ್ ಎಂಬಾತನ ಅಂಗಡಿ ಮೇಲೆ ಆಹಾರ ಇಲಾಖೆ ಉಪ ನಿರ್ದೇಶಕಿ ಶೃತಿ ಹಾಗೂ ಗಲ್​ಪೇಟೆ ಪೊಲೀಸರಿಂದ ದಾಳಿ ಮಾಡಲಾಗಿದೆ. 30ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್​ಗಳು ವಶಕ್ಕೆ ಪಡೆಯಲಾಗಿದೆ.

ಹಿಂದೂ ಯುವತಿ ಮೈಮುಟ್ಟಿ ಕಿರುಕುಳ ಆರೋಪ ಪ್ರಕರಣ

ಮಂಗಳೂರು: ಹಿಂದೂ ಯುವತಿ ಮೈಮುಟ್ಟಿ ಕಿರುಕುಳ ಆರೋಪ ಪ್ರಕರಣ ಹಿನ್ನೆಲೆ ಆರೋಪಿ ಬದ್ರುದ್ದೀನ್​ನ್ನು ಬೆಳ್ಳಾರೆ ಠಾಣೆ ಪೊಲೀಸರು ​ ಬಂಧಿಸಿದ್ದಾರೆ. ತಿಂಗಳಾಡಿಯಲ್ಲಿ ನಿನ್ನೆ ರಾತ್ರಿ ಹಿಂದೂ ಯುವತಿಗೆ ಕಿರುಕುಳ ನೀಡಿದ್ದು, ಘಟನೆ ನಂತರ ಹಿಂದೂ ಕಾರ್ಯಕರ್ತರು ಜಮಾವಣೆ ಆಗಿದ್ದರು. ಆರೋಪಿ ಬಂಧಿಸುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದರು. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕುತ್ತಿಗೆ ಕುಯ್ದು ವಿವಾಹಿತ ಮಹಿಳೆ ಬರ್ಬರ ಹತ್ಯೆ:

ಕೊಡಗು: ಕುತ್ತಿಗೆ ಕುಯ್ದು ವಿವಾಹಿತ ಮಹಿಳೆ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ. ಸಾಹಿರ (38) ಕೊಲೆಯಾದ ಮಹಿಳೆ. ತಂಬುಕುತ್ತೀರ ಪೂವಯ್ಯ (45) ಎಂಬಾತನಿಂದ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಅನೈತಿಕ ಸಂಬಂಧದ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಾದಾಪುರ ಉಪಠಾಣಾ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಪಾದಚಾರಿ ಸಾವು:

ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಪಾದಚಾರಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸರ್ಜಾಪುರದ ಹಂದೇನಹಳ್ಳಿ ನಿವಾಸಿ ನಾಗರಾಜು(64) ಸಾವು. ಅಪಘಾತದ ಬಳಿಕ ಬಸ್ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಕೆಎ 57 ಎಫ್ 4614 ನಂಬರಿನ ಬಿಎಂಟಿಸಿ​ ಬಸ್​ನಿಂದ ಅಪಘಾತ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.