Accident: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಅಪಘಾತದಲ್ಲಿ ಅಕ್ಕ-ತಮ್ಮ ದುರ್ಮರಣ | A car collided with a lorry from behind: sister and brother died in the accident


ಡಾಬಾ ಬಳಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗ್ತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

Accident: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಅಪಘಾತದಲ್ಲಿ ಅಕ್ಕ-ತಮ್ಮ ದುರ್ಮರಣ

ಅಪಘಾತದಲ್ಲಿ ನುಜ್ಜು ಗುಜ್ಜಾದ ಕಾರು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Aug 22, 2022 | 6:48 AM
ಬೆಂಗಳೂರು ಗ್ರಾಮಾಂತರ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ಅಕ್ಕ-ತಮ್ಮ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅಟ್ಟೂರು ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನ ಶಾಜಿಯಾ ಭಾನು(26) ಇಬ್ರಾಹಿಂ ಸಾಬ್(16) ಮೃತರು. ಡಾಬಾ ಬಳಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗ್ತಿದ್ದಂತೆ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮುರುಗಮಲ್ಲ ದರ್ಗಾಗೆ ಹೋಗಿ, ಚಿಂತಾಮಣಿಯಿಂದ ಬೈಲನರಸಾಪುರಕ್ಕೆ ಬಂದು ಟೀ ಕುಡಿದು ನಂತರ ಕೋಲಾರ ಹೆದ್ದಾರಿ ಮೂಲಕ ಕಾರು ವಾಪಸಾಗುತ್ತಿದ್ದಾಗ ಅಪಘಾತ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 9 ಜನರು ಪ್ರಯಾಣಿಸುತ್ತಿದ್ದರು. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.