Ahead of Republic DayArmy busted two hideouts of terrorists in Poonch, Jammu and Kashmir | ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ 2 ಅಡಗುದಾಣ ಪತ್ತೆ ಮಾಡಿದ ಸೇನಾಪಡೆ


ಕಲೈ ಟಾಪ್, ಶೀಂದ್ರಾ, ರಟ್ಟಾ ಜಬ್ಬಾರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸೇನಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆದಿದ್ದು ಪೋಲಿಸ್ ಮತ್ತು ಸಿಆರ್‌ಪಿಎಫ್‌ ಸಹಾಯ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ 2 ಅಡಗುದಾಣ ಪತ್ತೆ ಮಾಡಿದ ಸೇನಾಪಡೆ

ಅಡಗುತಾಣ ಪತ್ತೆ ಮಾಡಿದ ಸೇನಾಪಡೆ

ಗಣರಾಜ್ಯೋತ್ಸವಕ್ಕೆ (Republic Day celebration) ಮುನ್ನ ಬುಧವಾರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್‌ನಲ್ಲಿ (Poonch) ಸೇನಾಪಡೆ ಎರಡು ಉಗ್ರರ ಅಡಗುತಾಣಗಳನ್ನು ಭೇದಿಸಿದೆ. ರಟ್ಟಾ ಜಬರ ಅರಣ್ಯದಲ್ಲಿ ಒಂದು ಅಡಗುತಾಣವನ್ನು ಮತ್ತು ಧೋಬಾ ಅರಣ್ಯದಲ್ಲಿ ಇನ್ನೊಂದು ಅಡಗುತಾಣವನ್ನು ಭೇದಿಸಲಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಲೈ ಟಾಪ್, ಶೀಂದ್ರಾ, ರಟ್ಟಾ ಜಬ್ಬಾರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಸೇನಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆದಿದ್ದು ಪೋಲಿಸ್ ಮತ್ತು ಸಿಆರ್‌ಪಿಎಫ್‌ ಸಹಾಯ ಮಾಡಿದೆ.ಶೋಧ ಕಾರ್ಯಾಚರಣೆಯಲ್ಲಿ ಎರಡು ಎಕೆ ರೈಫಲ್‌ಗಳು, ಮೂರು ಮ್ಯಾಗಜೀನ್‌ಗಳು ಮತ್ತು 35 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಜನವರಿ 15 ರಂದು ಭದ್ರತಾ ಪಡೆಗಳು ಪೂಂಚ್‌ನಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿತ್ತು. ಸುರನ್‌ಕೋಟೆ ತಹಶಿಲ್‌ನ ಬಹಿಯಾನ್ ವಾಲಿ ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಅಡಗುತಾಣವನ್ನು ಭೇದಿಸಲಾಗಿದೆ.

ತಾಜಾ ಸುದ್ದಿ

ಮೂರು ಎಕೆ ಅಸಾಲ್ಟ್ ರೈಫಲ್‌ಗಳು, 10 ಗ್ರೆನೇಡ್‌ಗಳನ್ನು ಒಳಗೊಂಡ ಬಾಕ್ಸ್, ಗ್ರೆನೇಡ್ ಥ್ರೋವರ್ ಮತ್ತು ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *