AICC ಅಧ್ಯಕ್ಷ ಚುನಾವಣೆ: ತ್ರಿಪಾಠಿ ನಾಮಪತ್ರ ರಿಜೆಕ್ಟ್, ಖರ್ಗೆ- ಶಶಿ ತರೂರ್ ನಡುವೆ ಫೈಟ್​ | AICC President Election KN Tripathi nomination rejected By Madhusudan Mistry


AICC ಅಧ್ಯಕ್ಷ ಸ್ಥಾನಕ್ಕೆ ತ್ರಿಪಾಠಿ ಸಲ್ಲಿಸಿದ್ದ ನಾಮಪತ್ರ ತಿರಸ್ಕಾರವಾಗಿದೆ. ಈ ಹಿನ್ನೆಲೆಯಲ್ಲಿ ಕಣದಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ.

ನವದೆಹಲಿ: ತೀವ್ರ ಕುತೂಹಲ ಮೂಡಿಸಿರುವ AICC ಅಧ್ಯಕ್ಷ ಚುನಾವಣೆಯ ಅಖಾಡಕ್ಕಿಳಿದಿದ್ದ K.N.ತ್ರಿಪಾಠಿ ನಾಮಪತ್ರ(Nomination) ತಿರಸ್ಕೃತವಾಗಿದೆ. ಇದರಿಂದ  ಜಾರ್ಖಂಡ್ ಕಾಂಗ್ರೆಸ್ ನಾಯಕತ್ರಿಪಾಠಿಗೆ ಭಾರೀ ನಿರಾಸೆಯಾಗಿದೆ.

ನಿಗದಿಪಡಿಸಿದ ಮಾನದಂಡ ಪೂರೈಸದ ಕಾರಣ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್​ ಮಿಸ್ತ್ರಿ (Madhusudan Mistry)ಅವರು ಇಂದು(ಅ.01)  K.N.ತ್ರಿಪಾಠಿ ನಾಮಪತ್ರ ತಿರಸ್ಕೃತ ಮಾಡಿದ್ದಾರೆ. ಇದರಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಪೈಪೋಟಿ ನಡೆಯಲಿದೆ.

TV9 Kannada


Leave a Reply

Your email address will not be published.