Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸನ್ಸ್​ ಅಧ್ಯಕ್ಷ ರತನ್ ಟಾಟಾ ಭಾವುಕ ಪತ್ರ | Air India Bid Winner Tata Sons President Ratan Tata Emotional Letter Welcomes Air India to group

Air India Bid Winner: ವೆಲ್​ಕಮ್ ಬ್ಯಾಕ್ ಏರ್​ ಇಂಡಿಯಾ: ಬಿಡ್ ವಿಜೇತ ಟಾಟಾ ಸನ್ಸ್​ ಅಧ್ಯಕ್ಷ ರತನ್ ಟಾಟಾ ಭಾವುಕ ಪತ್ರ

ಏರ್​ ಇಂಡಿಯಾ ವಿಮಾನ ಮತ್ತು ರತನ್ ಟಾಟಾ

ಏರ್​ ಇಂಡಿಯಾ ಬಿಡ್​ ಗೆಲುವನ್ನು ಟಾಟಾ ಸನ್ಸ್​ ಕಂಪನಿಯ ಅಧ್ಯಕ್ಷ ರತನ್ ಭಾವುಕ ಪತ್ರವೊಂದನ್ನು ಟ್ವೀಟ್ ಮಾಡಿ ಸ್ವಾಗತಿಸಿದ್ದಾರೆ. ‘Welcome Back, Air India’ (ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ) ಎಂಬ ಆಪ್ತ ಸಾಲುಗಳೊಂದಿಗೆ ಪತ್ರವನ್ನು ಮುಗಿಸಿದ್ದಾರೆ. ಜೆಆರ್​ಡಿ ಟಾಟಾ ಅವರು ವಿಮಾನದ ಮುಂದೆ ನಿಂತಿರುವ ಐತಿಹಾಸಿಕ ಚಿತ್ರವನ್ನು ತಮ್ಮ ಪತ್ರದೊಂದಿಗೆ ಸೇರಿಸಿದ್ದಾರೆ.

ಏರ್​ ಇಂಡಿಯಾ ಸಂಸ್ಥೆಯು ಮತ್ತೆ ಟಾಟಾ ಗ್ರೂಪ್​ ಭಾಗವಾಗುತ್ತಿರುವುದು ದೊಡ್ಡ ಸುದ್ದಿ. ಏರ್​ ಇಂಡಿಯಾ ಸಂಸ್ಥೆಯನ್ನು ಮತ್ತೆ ಕಟ್ಟಲು ಸಾಕಷ್ಟು ಪರಿಶ್ರಮ ಬೇಕು. ವಿಮಾನಯಾನ ಕ್ಷೇತ್ರದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಟಾಟಾ ಗ್ರೂಪ್​ಗೆ ಇದು ಮತ್ತಷ್ಟು ಅವಕಾಶಗಳನ್ನು ವಿಸ್ತರಿಸಲಿದೆ ಎಂದು ರತನ್ ಟಾಟಾ ಹೇಳಿದ್ದಾರೆ.

ಶ್ರೀಯುತ ಜೆಆರ್​ಡಿ ಟಾಟಾ ಅವರ ನಾಯಕತ್ವದಲ್ಲಿ ಏರ್​ ಇಂಡಿಯಾ ವಿಶ್ವದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಒಂದು ಎನಿಸಿತ್ತು. ಇದೇ ಪ್ರತಿಷ್ಠೆಯನ್ನು ಸಂಸ್ಥೆಗೆ ಮರಳಿ ತಂದುಕೊಡಲು ಟಾಟಾ ಗ್ರೂಪ್ ಪ್ರಯತ್ನಿಸಲಿದೆ. ನಮ್ಮ ನಡುವೆ ಜೆಆರ್​ಡಿ ಟಾಟಾ ಇಂದು ಇದ್ದಿದ್ದರೆ ಅವರಿಗೆ ಅತ್ಯಂತ ಸಂತೋಷವಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಕೆಲ ಉದ್ಯಮಗಳನ್ನು ಖಾಸಗಿ ರಂಗಕ್ಕೆ ಮುಕ್ತಗೊಳಿಸುವ ಸರ್ಕಾರದ ಇತ್ತೀಚೆಗಿನ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿರುವ ರತನ್ ಟಾಟಾ, ‘ಏರ್​ ಇಂಡಿಯಾ ನಿನಗೆ ಮತ್ತೆ ಸ್ವಾಗತ’ ಎಂದು ಪತ್ರವನ್ನು ಮುಗಿಸಿದ್ದಾರೆ.

ಇದನ್ನೂ ಓದಿ: Air India: ಟಾಟಾ ಸನ್ಸ್​ ತೆಕ್ಕೆಗೆ ಏರ್​ ಇಂಡಿಯಾ: ಸರ್ಕಾರದಿಂದ ಅಧಿಕೃತ ಘೋಷಣೆ
ಇದನ್ನೂ ಓದಿ: ಏರ್​ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಬಿಡ್: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

TV9 Kannada

Leave a comment

Your email address will not be published. Required fields are marked *