Airtel: ಸದ್ದಿಲ್ಲದೆ ಬಳಕೆದಾರರಿಗೆ ಹೊಸ ಧಮಾಕ ಪ್ಲಾನ್ ಪರಿಚಯಿಸಿದ ಏರ್ಟೆಲ್: ಏನೆಲ್ಲ ಪ್ರಯೋಜನ ನೋಡಿ – Bharti Airtel has launched a new prepaid plan at Rs 199 offering 30 days of validity Kannada Technology News


ಏರ್ಟೆಲ್​ನ 199 ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಹಾಗೂ ದೈನಂದಿನ 100 SMS ಉಚಿತ ಪ್ರಯೋಜನ ಕೂಡ ದೊರೆಯಲಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಎರಡೂ ಕಂಪನಿಗಳು 5ಜಿ ಸೇವೆಯನ್ನು ಕೂಡ ನೀಡುತ್ತಿದೆ. ಜೊತೆಗೆ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಕೂಡ ಯಶಸ್ವಿಯಾಗುತ್ತಿದೆ. ಬೆಲೆ ಹೆಚ್ಚಳ ಮಾಡಿದ್ದರೂ ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಏರ್ಟೆಲ್​ನ ಯೋಜನೆಗಳು ಹೆಚ್ಚಿನವರ ಗಮನ ಸೆಳೆಯುತ್ತಿವೆ. ಇದೀಗ ಸದ್ದಿಲ್ಲದೆ ತನ್ನ ಗ್ರಾಹಕರಿಗೆ ಏರ್ಟೆಲ್ 199ರೂ. ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ (Prepaid Plan) ಅನ್ನು ಬಿಡುಗಡೆ ಮಾಡಿದೆ.

ಏರ್ಟೆಲ್​ನ 199 ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಹಾಗೂ ದೈನಂದಿನ 100 SMS ಉಚಿತ ಪ್ರಯೋಜನ ಕೂಡ ದೊರೆಯಲಿದೆ. ಒಂದು ತಿಂಗಳ ವ್ಯಾಲಿಡಿಟಿಯನ್ನು ಎದುರು ನೋಡುತ್ತಿರುವ ಬಳಕೆದಾರರಿಗಾಗಿ ಈ ಯೋಜನೆ ಸಹಕರಿ ಆಗಲಿದೆ. ಈ ಪ್ಲಾನ್​ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್, ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

ಈ ಹಿಂದೆ ಕೂಡ ಏರ್ಟೆಲ್ 199ರೂ. ಬೆಲೆಯಲ್ಲಿ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿತ್ತು. ಆದರೆ ಅದರಲ್ಲಿ 24 ದಿನಗಳ ವ್ಯಾಲಿಡಿಟಿ ಮಾತ್ರ ಇರುತ್ತಿತ್ತು. ಅತ್ತ ಜಿಯೋದಲ್ಲಿ ಕೂಡ ಇದೇ 199 ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಇದೆ. ಇದು ದೈನಂದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಇದರಲ್ಲಿ ಕೂಡ ಅನಿಯಮಿತ ಕರೆ ಪ್ರಯೋಜನ ಹಾಗೂ ದಿನನಿತ್ಯ 100 ಉಚಿತ ಎಸ್​ಎಮ್​ಎಸ್​ ಸೌಲಭ್ಯ ಲಭ್ಯವಾಗಲಿದೆ.23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

TV9 Kannada


Leave a Reply

Your email address will not be published.