Airtel vs Jio vs Vi: ಕಡಿಮೆ ಬೆಲೆ, 84 ದಿನಗಳ ವ್ಯಾಲಿಡಿಟಿಯ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್: ಇಲ್ಲಿದೆ ನೋಡಿ | Here we list and compare all the 84 days validity prepaid recharge plans of Airtel vs Jio vs Vi


Airtel vs Jio vs Vi: ಕಡಿಮೆ ಬೆಲೆ, 84 ದಿನಗಳ ವ್ಯಾಲಿಡಿಟಿಯ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್: ಇಲ್ಲಿದೆ ನೋಡಿ

Jio Airtel and Vi

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಮತ್ತು ಏರ್ಟೆಲ್ (Airtel vs Jio vs Vi) ಸಂಸ್ಥೆಗಳು ತಮ್ಮ ಚಂದಾದಾರಿಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆದಿವೆ. ಇವಗಳ ನಡುವೆ ಸದ್ದಿಲ್ಲದೆ ವೊಡಾಫೋನ್ ಐಡಿಯಾ ವಿ ಕೂಡ ಆಕರ್ಷಕ ಪ್ರಿಪೇಯ್ಡ್‌ ಯೋಜನೆಗಳಿಂದ (Prepaid Plans) ಗ್ರಾಹಕರನ್ನು ಸೆಳೆಯುತ್ತಿವೆ. ಈಗೀಗ ಗ್ರಾಹಕರು 84 ದಿನಗಳ ಮಾನ್ಯತೆಯೊಂದಿಗೆ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಮಾಸಿಕ ಯೋಜನೆಗಳಿಗಿಂತ (28 ದಿನ) ಮತ್ತು ಎರಡು-ಮಾಸಿಕ (56 ದಿನ) ಯೋಜನೆಗಳಿಗಿಂತ ಸ್ವಲ್ಪ ಅಗ್ಗ ಎಂಬುದು. ಹಾಗಾಗಿ, ದೇಶದ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಪ್ರಿಪೇಡ್ ಯೋಜನೆಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾದ್ರೆ ಏರ್ಟೆಲ್, ಜಿಯೋ, ವೊಡಾಫೋನ್ ಐಡಿಯಾದ (Vodafone Idea) 84 ದಿನಗಳವರೆಗೆ ಕೆಲವು ಉತ್ತಮ ಯೋಜನೆಗಳನ್ನು ನೋಡೋಣ. ಈ ಯೋಜನೆಗಳ ಸ್ಟ್ರೀಮಿಂಗ್ ಪ್ರಯೋಜನಗಳನ್ನು ಸಹ ಪಡೆಯಬಹುದಾಗಿದೆ.

ಏರ್ಟೆಲ್:

ಏರ್ಟೆಲ್ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಏರ್ಟೆಲ್ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯ ದೊರೆಯುತ್ತದೆ.

ಇನ್ನು ಏರ್ಟೆಲ್​ನ 839 ರೂ. ಗಳ ಪ್ರಿಪೇಯ್ಡ್ ಯೋಜನೆಯು 2GB ಡೇಟಾ/ ದಿನ, ಅನಿಯಮಿತ ಕರೆಗಳು, 100 SMS/ ದಿನ ಜೊತೆಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್, ಅಪೋಲೊ 24|7 Circle, ಉಚಿತ ಆನ್‌ಲೈನ್ ಕೋರ್ಸ್‌ಗಳು, ಉಚಿತ ಹೆಲೋ ಟ್ಯೂನ್ಸ್, ಫಾಸ್ಟ್​ಟ್ಯಾಗ್​​ನಲ್ಲಿ ರೂ. 100 ಕ್ಯಾಶ್‌ಬ್ಯಾಕ್ ಮತ್ತು ಉಚಿತ Wynk ಸಂಗೀತ ಚಂದಾದಾರಿಕೆಯಂತಹ ಹೆಚ್ಚುವರಿ ಪ್ರಯೋಜನಗಳು ಸಿಗುತ್ತವೆ.

ಜಿಯೋ:

ಜಿಯೋ ಟೆಲಿಕಾಂನ 719 ರೂ. ಪ್ರಿಪೇಯ್ಡ್‌ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆಪ್‌ಗಳ ಸೌಲಭ್ಯ ದೊರೆಯುತ್ತದೆ.

666 ರೂ. ಪ್ರಿಪೇಯ್ಡ್‌ ಯೋಜನೆ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿ ಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್​​ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ವೊಡಾಫೋನ್ ಐಡಿಯಾ:

ವೊಡಾಫೋನ್ ಐಡಿಯಾ ನೀಡುವ 719 ರೂ. ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5GB ಡೇಟಾ, ಅನಿಯಮಿತ ಕರೆಗಳು, 100 SMS/ ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ನೀಡಲಾಗುವ ಇತರ ಪ್ರಯೋಜನಗಳೆಂದರೆ ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್‌ಗಳು, ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆ ಸಿಗಲಿದೆ.

839 ರೂ. ಪ್ರಿಪೇಯ್ಡ್ ಯೋಜನೆಯು 2 GB ಡೇಟಾ / ದಿನ, ಅನಿಯಮಿತ ಕರೆಗಳು, 100 SMS / ದಿನ ಮತ್ತು 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು Vi ಚಲನಚಿತ್ರಗಳು ಮತ್ತು ಟಿವಿಗೆ ಚಂದಾದಾರಿಕೆಯನ್ನು ನೀಡಲಾಗುವ ಇತರ ಪ್ರಯೋಜನಗಳು ಸಿಗಲಿವೆ.

Best Smartphone: ಕಡಿಮೆ ಬೆಲೆಗೆ ಬಿಗ್ ಬ್ಯಾಟರಿಯ ಬೆಸ್ಟ್ ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ ನೋಡಿ ಲಿಸ್ಟ್

Oppo A76: ಸ್ನಾಪ್‌ಡ್ರಾಗನ್ ಪ್ರೊಸೆಸರ್‌, 5000mAh ಬ್ಯಾಟರಿ: ಅತಿ ಕಡಿಮೆ ಬೆಲೆಯ ಒಪ್ಪೋ A76 ಸ್ಮಾರ್ಟ್‌ಫೋನ್‌ ಬಿಡುಗಡೆ

TV9 Kannada


Leave a Reply

Your email address will not be published. Required fields are marked *