Aishwarya Rai Bachchan: ಮಗಳು ಆರಾಧ್ಯಾ ತುಟಿಗೆ ಮುತ್ತು ನೀಡಿ ಬರ್ತ್​ಡೇ ವಿಶ್​ ಮಾಡಿದ ಐಶ್ವರ್ಯಾ ರೈ​; ನೆಟ್ಟಿಗರ ತಕರಾರು – Aishwarya Rai Bachchan kisses daughter Aaradhya Bachchan lips to wish Happy Birthday: Photo goes viral


Aaradhya Bachchan Birthday: ಕೆಲವೇ ಗಂಟೆಗಳಲ್ಲಿ ಈ ಫೋಟೋ ವೈರಲ್​ ಆಗಿದೆ. ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ಬಗೆಬಗೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Aishwarya Rai Bachchan: ಮಗಳು ಆರಾಧ್ಯಾ ತುಟಿಗೆ ಮುತ್ತು ನೀಡಿ ಬರ್ತ್​ಡೇ ವಿಶ್​ ಮಾಡಿದ ಐಶ್ವರ್ಯಾ ರೈ​; ನೆಟ್ಟಿಗರ ತಕರಾರು

ಆರಾಧ್ಯಾ ಬಚ್ಚನ್, ಐಶ್ವರ್ಯಾ ರೈ ಬಚ್ಚನ್

ನಟಿ ಐಶ್ವರ್ಯಾ ರೈ (Aishwarya Rai Bachchan) ಹಾಗೂ ನಟ ಅಭಿಷೇಕ್​ ಬಚ್ಚನ್​ ದಂಪತಿಯ ಪುತ್ರಿ ಆರಾಧ್ಯಾ ಬಚ್ಚನ್​ (Aaradhya Bachchan) ಇಂದು (ನ.16) 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾಳೆ. ಆಕೆಯ ಜನ್ಮದಿನದ ಪ್ರಯುಕ್ತ ಐಶ್ವರ್ಯಾ ರೈ ಅವರು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಮಗಳ ತುಟಿಗೆ ಸಿಹಿ ಮುತ್ತು ನೀಡುವ ಮೂಲಕ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಭಿಮಾನಿಗಳು ಈ ಫೋಟೋವನ್ನು ಇಷ್ಟಪಟ್ಟಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ತಕರಾರು ತೆಗೆದಿದ್ದಾರೆ. ಈ ರೀತಿ ಕಿಸ್ ಮಾಡುವುದು ಸರಿಯಲ್ಲ ಎಂದು ಒಂದಷ್ಟು ಮಂದಿ ಕೊಂಕು ನುಡಿದಿದ್ದಾರೆ. ಈ ವಿಚಾರದ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಭಿಮಾನಿಗಳು ಐಶ್ವರ್ಯಾ ರೈ (Aishwarya Rai) ಪರ ನಿಂತಿದ್ದಾರೆ.

‘ನನ್ನ ಪ್ರೀತಿ.. ನನ್ನ ಜೀವನ.. ನನ್ನ ಆರಾಧ್ಯ.. ಐ ಲವ್​ ಯೂ’ ಎಂದು ಈ ಫೋಟೋಗೆ ಐಶ್ವರ್ಯಾ ರೈ ಕ್ಯಾಪ್ಷನ್​ ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋ ವೈರಲ್​ ಆಗಿದೆ. ಲಕ್ಷಾಂತರ ಮಂದಿ ಲೈಕ್​ ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ಬಗೆಬಗೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊವಿಡ್​ ಇನ್ನೂ ಪೂರ್ತಿ ಮಾಯವಾಗಿಲ್ಲ. ಆದ್ದರಿಂದ ಈ ರೀತಿ ತುಟಿಗೆ ಮುತ್ತು ಕೊಡುವುದು ಸರಿಯಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ.

ಐಶ್ವರ್ಯಾ ರೈ ಬಚ್ಚನ್​ ಅವರು ಎಲ್ಲೇ ಹೋದರೂ ಪುತ್ರಿ ಆರಾಧ್ಯಾಳನ್ನು ಕರೆದುಕೊಂಡು ಹೋಗುತ್ತಾರೆ. ಯಾವುದೇ ಕಾರ್ಯಕ್ರಮವಿರಲಿ, ಸಿನಿಮಾ-ಜಾಹೀರಾತುಗಳ ಶೂಟಿಂಗ್ ಇರಲಿ, ವಿದೇಶಿ ಪ್ರವಾಸ ಇರಲಿ.. ಐಶ್ವರ್ಯಾ ರೈ ಜೊತೆ ಆರಾಧ್ಯಾ ಇದ್ದೇ ಇರುತ್ತಾಳೆ. ಅಷ್ಟರಮಟ್ಟಿಗೆ ಮಗಳ ಬಗ್ಗೆ ಐಶ್​ ಪ್ರೀತಿ ತೋರುತ್ತಾರೆ. ಮದುವೆ-ಮಗು ಆದ ಬಳಿಕ ಅವರು ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಮದುವೆ ನಡೆಯಿತು. 2011ರ ನವೆಂಬರ್​ 16ರಂದು ಆರಾಧ್ಯಾ ಜನಿಸಿದಳು. ಆಕೆಯ 11ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಆರಾಧ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಐಶ್ವರ್ಯಾ ರೈ ಬಚ್ಚನ್ ಪಾಲಿಗೆ 2022ರ ವರ್ಷ ವಿಶೇಷವಾಗಿದೆ. ಈ ವರ್ಷ ಅವರು ನಟಿಸಿದ ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ರಿಲೀಸ್​ ಆಗಿ ಮೆಚ್ಚುಗೆ ಗಳಿಸಿದೆ. ಬಾಕ್ಸ್​ ಆಫೀಸ್​​ನಲ್ಲಿ ಈ ಚಿತ್ರ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದರಿಂದ ಐಶ್ವರ್ಯಾ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ.

TV9 Kannada


Leave a Reply

Your email address will not be published.