Ajay Devgan: ಅಯ್ಯಪ್ಪ ಮಾಲೆಧಾರಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ಅಜಯ್ ದೇವಗನ್ | Actor Ajay Devgan visits Sabarimala temple after following one month ritual details inside


Ajay Devgan: ಅಯ್ಯಪ್ಪ ಮಾಲೆಧಾರಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ಅಜಯ್ ದೇವಗನ್

ಅಜಯ್ ದೇವಗನ್

ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಶಬರಿಮಲೆ ಯಾತ್ರೆ (Sabarimala Yatra) ಕೈಗೊಂಡಿದ್ದಾರೆ. ಅದಕ್ಕೂ ಮುನ್ನ ಅವರು 41 ದಿನಗಳ ವ್ರತವನ್ನೂ ಪೂರೈಸಿದ್ದು, ಇದೀಗ ದೇವಸ್ಥಾನಕ್ಕೆ ತೆರಳಿದ್ದಾರೆ ಎಂದು ವರದಿಗಳು ಹೇಳಿವೆ. ಅಜಯ್ ದೇವಗನ್ ಮಾಲಾಧಾರಿಯಾಗಿರುವ ಚಿತ್ರಗಳು ಇದೀಗ ವೈರಲ್ ಆಗಿದ್ದು, ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಎಲ್ಲಾ ಯಾತ್ರಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕಾಗಿರುವ ನಿಯಮಗಳನ್ನು ಅಜಯ್ ಕೂಡ ಪಾಲಿಸಿದ್ದಾರೆ. ವ್ರತಾಚರಣೆಯಲ್ಲಿ ಸಾತ್ವಿಕ ಆಹಾರವನ್ನಷ್ಟೇ ಸೇವಿಸಲಾಗುತ್ತದೆ. ಚಪ್ಪಲಿ ಧರಿಸುವುದಿಲ್ಲ. ಮದ್ಯಪಾನ ಮೊದಲಾದವುಗಳಿಂದ ದೂರವಿರಬೇಕು.. ಈ ನಿಯಮಗಳು ಸೇರಿದಂತೆ ವ್ರತಾಚರಣೆಯಲ್ಲಿ ಪಾಲಿಸಲಾಗುವ ಎಲ್ಲಾ ನಿಯಮಗಳನ್ನು ಅಜಯ್ ಅನುಸರಿಸಿದ್ದಾರೆ. ಇತ್ತೀಚೆಗೆ ಮುಂಬೈನ ಸ್ಟುಡಿಯೋ ಎದುರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ತೊಡುವ ಕಪ್ಪು ಬಣ್ಣದ ದಿರಿಸಿನಲ್ಲೇ ಅಜಯ್ ಕಾಣಿಸಿಕೊಂಡಿದ್ದರು. ಇದೀಗ ವ್ರತಾಚರಣೆಯ ಭಾಗವಾಗಿ ನಟ ಶಬರಿಮಲೆಗೆ ತೆರಳಿದ್ದಾರೆ.

ಸಾಮಾನ್ಯವಾಗಿ ದಕ್ಷಿಣ ಭಾರತದ ಜನರು ಹೆಚ್ಚಾಗಿ ಮಾಲಾಧಾರಿಯಾಗಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಡಾ.ರಾಜ್​ಕುಮಾರ್ ಸೇರಿದಂತೆ ಕನ್ನಡದ ಖ್ಯಾತ ತಾರೆಯರು ಕೂಡ ವ್ರತಾಚರಣೆ ಮಾಡಿದ್ದಾರೆ. ಆದರೆ ಬಾಲಿವುಡ್ ತಾರೆಯರು ಶಬರಿಮಲೆ ಯಾತ್ರೆಗೆ ತೆರಳಿದ್ದು ಕಡಿಮೆ. ಇದೀಗ ಅಜಯ್ ದೇವಗನ್ ವ್ರತಾಚರಣೆ ಮಾಡಿದ್ದು, ಎಲ್ಲರ ಗಮನಸೆಳೆದಿದೆ.

ಚಿತ್ರಗಳ ವಿಷಯಕ್ಕೆ ಬಂದರೆ ಅಜಯ್ ದೇವಗನ್ ದಕ್ಷಿಣ ಭಾರತದ ಹಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​​ಆರ್​’ನಲ್ಲಿ ಅಜಯ್ ಬಣ್ಣಹಚ್ಚಿದ್ದಾರೆ. ಇದಲ್ಲದೇ ‘ಗಂಗೂಬಾಯಿ ಕಾಠಿಯಾವಾಡಿ’, ‘ರನ್​ವೇ 34’, ‘ಮೈದಾನ್’, ‘ಸರ್ಕಸ್’, ‘ಥ್ಯಾಂಕ್ ಗಾಡ್’ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ತಮಿಳಿನ ‘ಕೈಥಿ’ ಚಿತ್ರದ ಹಿಂದಿ ರಿಮೇಕ್ ‘ಭೋಲಾ’ದಲ್ಲೂ ಬಣ್ಣಹಚ್ಚುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *