Akshay Kumar: ಮೊದಲ ದಿನ ‘ಸೂರ್ಯವಂಶಿ’ ಚಿತ್ರ ಗಳಿಸಿದ್ದೆಷ್ಟು? ಬಾಕ್ಸ್​ ಆಫೀಸ್​ನಲ್ಲಿ ಅಕ್ಷಯ್​ ಕುಮಾರ್​ ದಾಖಲೆ | Sooryavanshi first day collection: Akshay Kumar Katrina Kaif movie earns 26 Cr at Box office


Akshay Kumar: ಮೊದಲ ದಿನ ‘ಸೂರ್ಯವಂಶಿ’ ಚಿತ್ರ ಗಳಿಸಿದ್ದೆಷ್ಟು? ಬಾಕ್ಸ್​ ಆಫೀಸ್​ನಲ್ಲಿ ಅಕ್ಷಯ್​ ಕುಮಾರ್​ ದಾಖಲೆ

ಅಕ್ಷಯ್​ ಕುಮಾರ್

ಅಕ್ಷಯ್​ ಕುಮಾರ್​, ಕತ್ರಿನಾ ಕೈಫ್​ ನಟನೆಯ ‘ಸೂರ್ಯವಂಶಿ’ ಸಿನಿಮಾ ಶುಕ್ರವಾರ (ನ.5) ಅದ್ದೂರಿಯಾಗಿ ಬಿಡುಗಡೆ ಆಯಿತು. ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡಿರುವ ಈ ಸಿನಿಮಾಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಮೊದಲ ದಿನವೇ ‘ಸೂರ್ಯವಂಶಿ’ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದೆ. ಪರಿಣಾಮವಾಗಿ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಆಗಿದೆ. ಒಂದೇ ದಿನಕ್ಕೆ ಬರೋಬ್ಬರಿ 26 ಕೋಟಿ ರೂ. ಕಮಾಯಿ ಮಾಡಿರುವುದು ಈ ಸಿನಿಮಾದ ಹೆಚ್ಚುಗಾರಿಕೆ.

ದೇಶದ ಬಹುತೇಕ ಕಡೆಗಳಲ್ಲಿ ಇನ್ನೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿಲ್ಲ. ಮಹಾರಾಷ್ಟ್ರ, ಗೋವಾ, ಜಾರ್ಖಾಂಡ್​, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೇ. 50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ಇದೆ. ಈ ಪರಿಸ್ಥಿತಿಯಲ್ಲೂ ಮೊದಲ ದಿನ 26 ಕೋಟಿ ರೂ. ಬಾಚಿಕೊಂಡ ಮೊದಲ ಸಿನಿಮಾ ಎಂಬ ಖ್ಯಾತಿಗೆ ‘ಸೂರ್ಯವಂಶಿ’ ಪಾತ್ರವಾಗಿದೆ. ಆ ಮೂಲಕ ಅಕ್ಷಯ್​ ಕುಮಾರ್​ ಮುಡಿಗೆ ಇನ್ನೊಂದು ಗರಿ ಸೇರಿಕೊಂಡಂತಾಗಿದೆ.

ರೋಹಿತ್​ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳಿವೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದರೆ, ಅವರ ಪತ್ನಿ ಪಾತ್ರದಲ್ಲಿ ಕತ್ರಿನಾ ಕೈಫ್​ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರಗಳಲ್ಲಿ ಅಜಯ್​ ದೇವಗನ್​ ಮತ್ತು ರಣವೀರ್​ ಸಿಂಗ್​ ನಟಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಸೂರ್ಯವಂಶಿ’ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆ ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಮೂಡಿಬಂದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಬೆಳೆ ತೆಗೆಯುತ್ತಿದೆ.

ದೀಪಾವಳಿ ಹಬ್ಬದ ರಜೆಯಲ್ಲಿ ಶುಕ್ರವಾರ ಭಾರಿ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಶನಿವಾರ (ನ.6) ಕೂಡ ಬಹುತೇಕ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ಭಾನುವಾರ ಸಹ ಉತ್ತಮ ಕಲೆಕ್ಷನ್​ ಆಗಲಿದೆ. ಹಾಗಾಗಿ ಅತಿ ಶೀಘ್ರದಲ್ಲೇ ಈ ಸಿನಿಮಾ 100 ಕೋಟಿ ರೂ. ಕ್ಲಬ್​ ಸೇರಲಿದೆ ಎಂದು ಅಂದಾಜಿಸಲಾಗುತ್ತಿದೆ.

ಅಕ್ಷಯ್​ ಕುಮಾರ್​ ಸಿನಿಮಾಗಳು ಮಿನಿಮಮ್​​ ಬ್ಯಸಿನೆಸ್​ ಖಂಡಿತಾ ಮಾಡುತ್ತವೆ. ಅವರ ಚಿತ್ರಗಳಿಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬುದು ಎಲ್ಲ ನಿರ್ಮಾಪಕರಿಗೆ ಚೆನ್ನಾಗಿ ಗೊತ್ತು. ಆ ಮಾತು ‘ಸೂರ್ಯವಂಶಿ’ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ನಿರ್ದೇಶಕ ರೋಹಿತ್​ ಶೆಟ್ಟಿ ಅವರಿಗೆ ಇನ್ನೊಂದು ಗೆಲುವು ಸಿಕ್ಕಂತಾಗಿದೆ.

ಇದನ್ನೂ ಓದಿ:

Sooryavanshi: ಅಕ್ಷಯ್​ ಕುಮಾರ್​ ಫ್ಯಾನ್ಸ್​ ‘ಸೂರ್ಯವಂಶಿ’ ಸಿನಿಮಾ ಯಾಕೆ ನೋಡಬೇಕು? ಇಲ್ಲಿವೆ 5 ಕಾರಣಗಳು

ಅಕ್ಷಯ್​ ಕುಮಾರ್​ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್​ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು

TV9 Kannada


Leave a Reply

Your email address will not be published. Required fields are marked *