Akshay Kumar: ‘ರಾಮ್​ ಸೇತು’ ಬಗ್ಗೆ ಹಬ್ಬಿದ್ದ ಗಾಸಿಪ್​ಗೆ ಕಡೆಗೂ ಸಿಕ್ಕಿತು ಸ್ಪಷ್ಟನೆ; ಅಕ್ಷಯ್​ ಕುಮಾರ್​ ಫ್ಯಾನ್ಸ್​ಗೆ ಸಂತಸ | Akshay Kumar starrer Ram Setu will not go for direct OTT release


Akshay Kumar: ‘ರಾಮ್​ ಸೇತು’ ಬಗ್ಗೆ ಹಬ್ಬಿದ್ದ ಗಾಸಿಪ್​ಗೆ ಕಡೆಗೂ ಸಿಕ್ಕಿತು ಸ್ಪಷ್ಟನೆ; ಅಕ್ಷಯ್​ ಕುಮಾರ್​ ಫ್ಯಾನ್ಸ್​ಗೆ ಸಂತಸ

ಅಕ್ಷಯ್ ಕುಮಾರ್

Ram Setu: ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರಮಂದಿರದಲ್ಲೇ ‘ರಾಮ್​ ಸೇತು’ ಸಿನಿಮಾ ಬಿಡುಗಡೆ ಆಗಲಿದೆ. ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ನೇರವಾಗಿ ರಿಲೀಸ್​ ಮಾಡುವುದಿಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.

ನಟ ಅಕ್ಷಯ್​ ಕುಮಾರ್ (Akshay Kumar)​ ಅವರಿಗೆ ಇತ್ತೀಚಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಗುತ್ತಿಲ್ಲ. ‘ಬಚ್ಚನ್​ ಪಾಂಡೆ’ ಸಿನಿಮಾ ಹೇಳ ಹೆಸರಿಲ್ಲದಂತೆ ಸೋತಿತು. ಬಹಳ ನಿರೀಕ್ಷೆ ಮೂಡಿಸಿದ್ದ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಕಲೆಕ್ಷನ್​ ಮಾಡಲಿಲ್ಲ. ಅಮಿತ್​ ಶಾ, ಯೋಗಿ ಆದಿತ್ಯನಾಥ್​ ಮುಂತಾದವರು ಬೆಂಬಲ ನೀಡಿದರೂ ಕೂಡ ಆ ಸಿನಿಮಾ ಗೆಲ್ಲಲಿಲ್ಲ. ಆ ವಿಚಾರದಲ್ಲಿ ಅಕ್ಷಯ್​ ಕುಮಾರ್​ ಅಭಿಮಾನಿಗಳಿಗೆ ಭಾರಿ ಬೇಸರ ಇದೆ. ಹಾಗಂತ ಹಳೇ ಸೋಲನ್ನೇ ನೆನಪಿಸಿಕೊಂಡು, ಕೊರಗುತ್ತಾ ಕೂರಲು ಸಾಧ್ಯವಿಲ್ಲ. ಅವರ ಮುಂದಿನ ಸಿನಿಮಾ ಬಗ್ಗೆ ಗಮನ ಹರಿಸಬೇಕಿದೆ. ಅಕ್ಷಯ್​ ಕುಮಾರ್​ ನಟಿಸಿರುವ ‘ರಾಮ್​ ಸೇತು’ (Ram Setu) ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರ ಒಟಿಟಿಯಲ್ಲಿ (OTT) ರಿಲೀಸ್​ ಆಗಲಿದೆ ಎಂದು ಗಾಸಿಪ್​ ಹಬ್ಬಿಸಲಾಗಿತ್ತು. ಆದರೆ ಅದನ್ನು ನಿರ್ಮಾಪಕರು ಅಲ್ಲಗಳೆದಿದ್ದಾರೆ.

ಅಕ್ಷಯ್​ ಕುಮಾರ್​ ಅವರು ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿರುವುದರಿಂದ ಈ ರೀತಿಯ ಗಾಸಿಪ್​ ಹಬ್ಬಿತ್ತು. ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್​ ಆಗದಿದ್ದರೆ ನಿರ್ಮಾಪಕರಿಗೆ ನಷ್ಟ ಆಗುತ್ತದೆ. ಹಾಗಾಗಿ ಅವರು ನೇರವಾಗಿ ಒಟಿಟಿ ರಿಲೀಸ್​ಗೆ ಆಲೋಚಿಸುತ್ತಿದ್ದಾರೆ ಎಂದೆಲ್ಲ ಗಾಳಿ ಸುದ್ದಿ ಹರಡಿಸಲಾಗಿತ್ತು. ಆದರೆ ಆ ಸುದ್ದಿಯನ್ನು ನಿರ್ಮಾಪಕರು ಅಲ್ಲಗಳೆದಿದ್ದಾರೆ.

TV9 Kannada


Leave a Reply

Your email address will not be published.