ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಗೆಲುವು ಕಾಣುತ್ತಿಲ್ಲ. ಅಕ್ಷಯ್ ಕುಮಾರ್ ಸಂಭಾವನೆಯನ್ನು ಭರಿಸೋದು ಅನೇಕ ನಿರ್ಮಾಪಕರಿಗೆ ಕಷ್ಟ ಆಗುತ್ತಿದೆ.

ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ (Akshay Kumar) ಅವರು ಬಾಲಿವುಡ್ನ ಬೇಡಿಕೆಯ ನಟ. ಅವರ ಸಿನಿಮಾಗೆ ಬಂಡವಾಳ ಹೂಡಿದರೆ ನಷ್ಟ ಆಗುವುದಿಲ್ಲ ಎಂಬ ಅಭಿಪ್ರಾಯ ಇತ್ತು. ಆದರೆ, ಇತ್ತೀಚೆಗೆ ಈ ಅಭಿಪ್ರಾಯ ಬದಲಾಗಿದೆ. ಅವರ ಸಿನಿಮಾಗಳು ಸತತವಾಗಿ ಸೋಲು ಕಾಣುತ್ತಿವೆ. ಆದರೆ, ಅಕ್ಷಯ್ ಕುಮಾರ್ ಅವರು ಪಡೆಯುವ ಸಂಭಾವನೆ ಕಡಿಮೆ ಆಗಿಲ್ಲ. ಪ್ರತಿ ಚಿತ್ರಕ್ಕೆ ಅವರು 50-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ಸಿನಿಮಾಗಳು ಗೆಲುವು ಕಾಣುತ್ತಿಲ್ಲ. ಅಕ್ಷಯ್ ಕುಮಾರ್ ಸಂಭಾವನೆಯನ್ನು ಭರಿಸೋದು ಅನೇಕ ನಿರ್ಮಾಪಕರಿಗೆ ಕಷ್ಟ ಆಗುತ್ತಿದೆ. ಆದರೆ, ಅಕ್ಷಯ್ ಕುಮಾರ್ ಅವರು ಸಂಭಾವನೆ ಕಡಿಮೆ ಮಾಡಿಕೊಂಡಿಲ್ಲ. ಇದೇ ಕಾರಣಕ್ಕೆ ಅನೇಕ ನಿರ್ಮಾಪಕರು ಅಕ್ಷಯ್ ಜತೆ ಸಿನಿಮಾ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. 100 ಕೋಟಿ ಸಂಭಾವನೆ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.
ತಾಜಾ ಸುದ್ದಿ
ಅಕ್ಷಯ್ ಕುಮಾರ್ ಅವರು ‘ಸೆಲ್ಫಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ಸೂಪರ್ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಮ್ರಾನ್ ಹಶ್ಮಿ ಅವರು ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ಸಂಭಾವನೆ ಬಗ್ಗೆ ಅವರ ಪ್ರತಿಕ್ರಿಯೆ ಕೇಳಲಾಯಿತು. ‘ನನ್ನ ಪ್ರತಿಕ್ರಿಯೆ ಯಾವಾಗಲೂ ಉತ್ತಮವಾಗಿರುತ್ತದೆ’ ಎಂದಷ್ಟೇ ಅಕ್ಷಯ್ ಕುಮಾರ್ ಹೇಳಿದ್ದಾರೆ.