ವಾಂಗ್ಚುಕ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡ 13 ನಿಮಿಷಗಳ ಸುದೀರ್ಘ ವಿಡಿಯೊದಲ್ಲಿ, ಅವರು ‘ತುರ್ತಾಗಿ’ ಲಡಾಖ್ನ “ಪರಿಸರ ಸೂಕ್ಷ್ಮ” ಪ್ರದೇಶವನ್ನು ರಕ್ಷಿಸಲು ಸಹಾಯ ಮಾಡಲು ದೇಶದ ಮತ್ತು ಪ್ರಪಂಚದ ಜನರಿಗೆ ಮನವಿ ಮಾಡಿದರು.

ಸೋನಮ್ ವಾಂಗ್ಚುಕ್
ಲೇಹ್: ಬಾಲಿವುಡ್ ಸಿನಿಮಾ ‘3 ಈಡಿಯಟ್ಸ್’ ಗೆ(3 Idiots) ಸ್ಫೂರ್ತಿಯಾಗಿದ್ದ ಲಡಾಖ್ನ ಸಾಮಾಜಿಕ ಸುಧಾರಣಾವಾದಿ ಸೋನಮ್ ವಾಂಗ್ಚುಕ್ (Sonam Wangchuk) ಸುಮಾರು 2/3 ರಷ್ಟು ಹಿಮಗಡ್ಡೆಗಳು ಅಳಿವಿನಂಚಿನಲ್ಲಿದ್ದು ಕೇಂದ್ರಾಡಳಿತ ಪ್ರದೇಶ ಲಡಾಖ್ನ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಒತ್ತಾಯಿಸಿದ್ದಾರೆ. ಭಾನುವಾರ ಎಎನ್ಐ ಜೊತೆ ಮಾತನಾಡಿದ ಸೋನಮ್ ವಾಂಗ್ಚುಕ್, ಅಜಾಗರೂಕತೆ ಮುಂದುವರಿದರೆ ಮತ್ತು ಲಡಾಖ್ಗೆ ಕೈಗಾರಿಕೆಗಳಿಂದ ರಕ್ಷಣೆ ನೀಡುವುದನ್ನು ತಡೆದರೆ, ಇಲ್ಲಿನ ಹಿಮಗಡ್ಡೆಗಳು ನಶಿಸಿ ಹೋಗುತ್ತವೆ, ಹೀಗಾಗಿ ಭಾರತ ಮತ್ತು ಅದರ ನೆರೆಹೊರೆಯಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಇದು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಒತ್ತಿ ಹೇಳಿದರು.
ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಕೈಗಾರಿಕೆಗಳು, ಪ್ರವಾಸೋದ್ಯಮ ಮತ್ತು ವಾಣಿಜ್ಯವು ಲಡಾಖ್ನಲ್ಲಿ ಕುಸಿಯುತ್ತಾ ಹೋಗಿ ಆಮೇಲೆ ಇಲ್ಲವಾಗುತ್ತದೆ. ಕಾಶ್ಮೀರ ವಿಶ್ವವಿದ್ಯಾಲಯ ಮತ್ತು ಇತರ ಸಂಶೋಧನಾ ಸಂಸ್ಥೆಗಳ ಇತ್ತೀಚಿನ ಅಧ್ಯಯನಗಳ ಪ್ರಕಾರ ಲೇಹ್-ಲಡಾಖ್ನಲ್ಲಿನ ಹಿಮಗಡ್ಡೆಗಳನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಅವುಗಳ 3ನೇ 2ರಷ್ಟು ನಶಿಸಿಹೋಗುತ್ತದೆ. ಕಾಶ್ಮೀರ ವಿಶ್ವವಿದ್ಯಾಲಯದ ಅಧ್ಯಯನವು ಹೆದ್ದಾರಿಗಳು ಮತ್ತು ಮಾನವ ಚಟುವಟಿಕೆಗಳಿಂದಾದಿ ಈ ಹಿಮಗಡ್ಡೆಗಳು ವೇಗವಾಗಿ ಕರಗುತ್ತಿವೆ ಎಂದು ಕಂಡುಹಿಡಿದಿದೆ ಎಂದಿದ್ದಾರೆ ವಾಂಗ್ಚುಕ್.
ತಾಜಾ ಸುದ್ದಿ
ಈ ಹವಾಮಾನ ಬದಲಾವಣೆಗೆ ಅಮೆರಿಕ ಮತ್ತು ಯುರೋಪ್ನ ಜಾಗತಿಕ ತಾಪಮಾನ ಮಾತ್ರ ಕಾರಣವಲ್ಲ, ಆದರೆ ಸ್ಥಳೀಯ ಮಾಲಿನ್ಯ ಮತ್ತು ಹೊರಸೂಸುವಿಕೆ ಕೂಡಾ ಕಾರಣವಾಗಿದೆ. ಲಡಾಖ್ನಂತಹ ಪ್ರದೇಶಗಳಲ್ಲಿ, ಇಲ್ಲಿ ಮತ್ತು ದೇಶದಾದ್ಯಂತ ಇರುವ ಸ್ಥಳೀಯರಿಗೆ ಹಿಮಗಡ್ಡೆಗಳು ಹಾಗೇ ಉಳಿಯಲು ಮಾನವ ಚಟುವಟಿಕೆಗಳು ಕಡಿಮೆಯಾಗಬೇಕು.