ಸಾರ್ವಜನಿಕರೊಂದಿಗೆ ಪೋಲಿಸರು ಸೌಮ್ಯವಾಗಿ, ಸ್ನೇಹಭಾವದಿಂದ ವರ್ತಿಸುವ ಪದ್ಧತಿಗೆ ಮಹತ್ವ ನೀಡಲಾಗುವುದು ಎಂದು ಅಲೋಕ್ ಮೋಹನ್ ಹೇಳಿದರು,
ಬೆಂಗಳೂರು: ರಾಜ್ಯ ಡಿಜಿ-ಐಜಿಪಿಯಾಗಿದ್ದ ಪ್ರವೀಣ್ ಸೂದ್ (Praveen Sood) ಸಿಬಿಐ ನಿರ್ದೇಶಕರಾಗಿ ದೆಹಲಿಗೆ ತೆರಳಿದ ನಂತರ ಅವರ ಸ್ಥಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಮೋಹನ್ (Alok Mohan) ಅವರನ್ನು ರಾಜ್ಯದ ಹೊಸ ಸರ್ಕಾರ ನೇಮಕ ಮಾಡಿದೆ. ಅಧಿಕಾರವಹಿಸಿಕೊಂಡ ಬಳಿಕ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅಲೋಕ್, ಬೆಂಗಳೂರು ನಗರವನ್ನು ಡ್ರಗ್ಸ್, ಗೂಂಡಾಗಿರಿ, ರೌಡಿಸಂ, ಜೂಜು ಸೇರಿದಂತೆ ಎಲ್ಲ ಕಾನೂನುಬಾಹಿರ ಕೃತ್ಯಗಳಿಂದ ಮುಕ್ತಮಾಡುವ ಭರವಸೆ ನೀಡಿದರು. ಸಾರ್ವಜನಿಕರೊಂದಿಗೆ ಪೋಲಿಸರು ಸೌಮ್ಯವಾಗಿ, ಸ್ನೇಹಭಾವದಿಂದ ವರ್ತಿಸುವ ಪದ್ಧತಿಗೆ ಮಹತ್ವ ನೀಡಲಾಗುವುದು ಎಂದು ಹೇಳಿದ ಹಿರಿಯ ಅಧಿಕಾರಿ, ನಗರದಲ್ಲಿ ಶಾಂತಿ ಸುವ್ಯವಸ್ಥೆ (Law and Order) ಹದಗೆಡದಂತೆ ಎಚ್ಚರವಹಿಸಲಾಗುವುದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ