Amit Shah: ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್​ಗೆ ಗೃಹ ಸಚಿವ ಅಮಿತ್ ಶಾ ಚಾಲನೆ | Amit Shah Home Minister Amit Shah to launch Khelo India Youth Games today in Panchkula


ಒಟ್ಟಾರೆಯಾಗಿ, 2,262 ಹುಡುಗಿಯರು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆ ಇಂದು ಆರಂಭವಾಗಲಿದ್ದು, ಜೂನ್ 13ರವರೆಗೆ ನಡೆಯಲಿದೆ.

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು (ಜೂನ್ 4) ಹರಿಯಾಣದ ಪಂಚಕುಲದಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ರ (Khelo India Youth Games 2021) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದ ಅತಿದೊಡ್ಡ ಕ್ರೀಡಾ ಸ್ಪರ್ಧೆ 2018ರಲ್ಲಿ ಕೇಂದ್ರ ಸರ್ಕಾರದಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮದಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ (Anurag Singh Thakur) ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಭಾಗವಹಿಸಲಿದ್ದಾರೆ.

ಹಾಗೇ, ಹರಿಯಾಣ ರಾಜ್ಯ ಕ್ರೀಡಾ ಸಚಿವ ಸಂದೀಪ್ ಸಿಂಗ್ ಸೇರಿದಂತೆ ಹರಿಯಾಣದ ಇತರ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ, 2,262 ಹುಡುಗಿಯರು ಸೇರಿದಂತೆ 4,700 ಅಥ್ಲೀಟ್‌ಗಳು 25 ಕ್ರೀಡೆಗಳಲ್ಲಿ 269 ಚಿನ್ನ, 269 ಬೆಳ್ಳಿ ಮತ್ತು 358 ಕಂಚಿನ ಪದಕಗಳಿಗಾಗಿ ಸ್ಪರ್ಧಿಸಲಿದ್ದಾರೆ. ಈ ಕ್ರೀಡಾ ಸ್ಪರ್ಧೆ ಇಂದು ಆರಂಭವಾಗಲಿದ್ದು, ಜೂನ್ 13ರವರೆಗೆ ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *