Amul: ಪ್ಲಾಸ್ಟಿಕ್ ಸ್ಟ್ರಾ ಬ್ಯಾನ್ ಮಾಡದಂತೆ ಪ್ರಧಾನಿ ಮೋದಿಗೆ ಅಮುಲ್ ಮನವಿ; ಕಾರಣವೇನು? | Amul Urges PM Narendra Modi To Delay Plastic Straw Ban Here is Why


Amul: ಪ್ಲಾಸ್ಟಿಕ್ ಸ್ಟ್ರಾ ಬ್ಯಾನ್ ಮಾಡದಂತೆ ಪ್ರಧಾನಿ ಮೋದಿಗೆ ಅಮುಲ್ ಮನವಿ; ಕಾರಣವೇನು?

ಅಮುಲ್

Image Credit source: NDTV

Plastic Ban: ಜುಲೈ 1ರಂದು ಸಣ್ಣ ಪ್ಯಾಕ್ ಜ್ಯೂಸ್ ಮತ್ತು ಡೈರಿ ಉತ್ಪನ್ನಗಳೊಂದಿಗೆ ಪ್ಯಾಕ್ ಮಾಡಲಾದ ಸ್ಟ್ರಾಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ನವದೆಹಲಿ: ಭಾರತದ ಅತಿದೊಡ್ಡ ಡೈರಿ ಸಮೂಹ ಸಂಸ್ಥೆಯಾದ ಅಮುಲ್ (Amul) ಪ್ಲಾಸ್ಟಿಕ್ ಸ್ಟ್ರಾಗಳನ್ನು ಬ್ಯಾನ್ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆಯನ್ನು ಮುಂದೂಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಕ್ರಮವು ರೈತರು ಮತ್ತು ವಿಶ್ವದ ಅತಿದೊಡ್ಡ ಉತ್ಪನ್ನದ ಉತ್ಪಾದಕರ ಹಾಲಿನ ಬಳಕೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಹೇಳಿದೆ. ಮೇ 28ರಂದು ಬರೆಯಲಾದ ಪತ್ರದಲ್ಲಿ ಅಮುಲ್ ತನ್ನ ಮನವಿಯನ್ನು ಮಾಡಿದೆ.

ಜುಲೈ 1ರಂದು ಸಣ್ಣ ಪ್ಯಾಕ್ ಜ್ಯೂಸ್ ಮತ್ತು ಡೈರಿ ಉತ್ಪನ್ನಗಳೊಂದಿಗೆ ಪ್ಯಾಕ್ ಮಾಡಲಾದ ಸ್ಟ್ರಾಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ಅಮುಲ್ ಈ ಪತ್ರವನ್ನು ಕಳುಹಿಸಿದೆ. ಅಮುಲ್ ಪ್ರತಿ ವರ್ಷ ಪ್ಲಾಸ್ಟಿಕ್ ಸ್ಟ್ರಾಗಳನ್ನು ಜೋಡಿಸಿ ಶತಕೋಟಿ ಸಣ್ಣ ಡೈರಿ ಪೆಟ್ಟಿಗೆಗಳನ್ನು ಮಾರಾಟ ಮಾಡುತ್ತದೆ.

ಆದರೆ, ಸರ್ಕಾರದ ಈ ನಿರ್ಧಾರದಿಂದ ಅಮುಲ್ ಮತ್ತು ಪೆಪ್ಸಿಕೋ ಇಂಕ್ ಮತ್ತು ಕೋಕಾ-ಕೋಲಾ ಸೇರಿದಂತೆ ಜಾಗತಿಕ ಪಾನೀಯಗಳ ಕಂಪನಿಗಳು ಬೆಚ್ಚಿಬಿದ್ದಿದೆ. ಹೀಗಾಗಿ, ಸರ್ಕಾರವು ತನ್ನ ನಿಲುವನ್ನು ಬದಲಾಯಿಸಲು ನಿರಾಕರಿಸಿದ್ದು, ಪ್ಲಾಸ್ಟಿಕ್​ಗೆ ಪರ್ಯಾಯವಾದ ಸ್ಟ್ರಾಗಳನ್ನು ಬಳಸುವಂತೆ ಕಂಪನಿಗಳಿಗೆ ಸೂಚಿಸಿದೆ ಎಂದು ರಾಯಿಟರ್ಸ್ ಈ ಹಿಂದೆ ವರದಿ ಮಾಡಿತ್ತು. ಆದರೆ, ಜುಲೈ 1ರಿಂದ ಸರ್ಕಾರ ಪ್ಲಾಸ್ಟಿಕ್ ಸ್ಟ್ರಾ ನಿಷೇಧ ಮಾಡಿದ ನಂತರ ಅಮುಲ್ ಸ್ಟ್ರಾಗಳಿಲ್ಲದೆ ಪ್ಯಾಕ್‌ಗಳನ್ನು ಮಾರಾಟ ಮಾಡಬೇಕಾಗಬಹುದು ಎನ್ನಲಾಗಿದೆ.

TV9 Kannada


Leave a Reply

Your email address will not be published.