ದೊಡ್ಮನೆಗೆ ರೀ-ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಅವರು ತಮ್ಮ ಕಲೆಯನ್ನು ತೋರಿಸಿದ್ದಾರೆ. ದೀಪಿಕಾ ಹಾಗೂ ಅಮೂಲ್ಯ ಜತೆ ಮಂಜು ಫ್ಲರ್ಟ್ ಮಾಡಿದ್ದಾರೆ.

ಮಂಜು ಪಾವಗಡ-ಅಮೂಲ್ಯ
ಮಂಜು ಪಾವಗಡ (Manju Pavagada) ಅವರು ಬಿಗ್ ಬಾಸ್ನ ಕಳೆದ ಸೀಸನ್ಗೆ ಎಂಟ್ರಿ ಕೊಟ್ಟು ಎಲ್ಲರನ್ನು ರಂಜಿಸಿದ್ದರು. ಅವರು ಕಪ್ ಗೆದ್ದು ಬೀಗಿದ್ದರು. ಈ ಬಾರಿ ಬಿಗ್ ಬಾಸ್ ಮನೆಗೆ ಅವರು ರೀ ಎಂಟ್ರಿ ಕೊಟ್ಟಿದ್ದಾರೆ. ಹಾವು ಏಣಿ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಉಸ್ತುವಾರಿ ಮಂಜು ಅವರಿಗೇ ನೀಡಲಾಗಿತ್ತು. ಅರ್ಥಾತ್ ದಾಳ ಹಾಕುವ ಕೆಲಸ ಮಂಜು ವಹಿಸಿಕೊಂಡಿದ್ದರು. ಅವರು ಬಿಗ್ ಬಾಸ್ (Bigg Boss) ಮನೆ ಒಳಗೆ ಬರುತ್ತಿದ್ದಂತೆ ಸ್ಪರ್ಧಿಗಳೆಲ್ಲ ಸಖತ್ ಖುಷಿಪಟ್ಟರು. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರಿಗೆ ಅಮೂಲ್ಯ ಗೌಡ ಪ್ರಪೋಸ್ ಮಾಡಿದ್ದಾರೆ.
ದಿವ್ಯಾ ಸುರೇಶ್ ಜತೆಗಿನ ಆಪ್ತತೆಯಿಂದ ಮಂಜು ಪಾವಗಡ ಕಳೆದ ಸೀಸನ್ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು. ಅವರು ತುಂಬಾನೇ ಫ್ಲರ್ಟ್ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದವು. ದೊಡ್ಮನೆಗೆ ರೀ-ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಅವರು ತಮ್ಮ ಕಲೆಯನ್ನು ತೋರಿಸಿದ್ದಾರೆ. ದೀಪಿಕಾ ಹಾಗೂ ಅಮೂಲ್ಯ ಜತೆ ಮಂಜು ಫ್ಲರ್ಟ್ ಮಾಡಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಹಾವು ಏಣಿ ಪಟ ಹಾಕಲಾಗಿತ್ತು. ಮಂಜು ಪಾವಗಡ ದಾಳ ಹಾಕುತ್ತಿದ್ದಂತೆ ಸ್ಪರ್ಧಿಗಳು ಕಾಯಿಗಳ ಜಾಗದಲ್ಲಿ ನಿಂತು ಚಲಿಸಬೇಕಿತ್ತು. ರೂಪೇಶ್ ಶೆಟ್ಟಿ ಗುರಿ ತಲುಪುವ ಹಂತದಲ್ಲಿದ್ದರು. ಸಂಖ್ಯೆ 10 ಬಿದ್ದರೆ ಅವರು ಹಾವಿನಿಂದ ಕಚ್ಚಿಸಿಕೊಳ್ಳುತ್ತಿದ್ದರು. ಈ ವೇಳೆ ಅಮೂಲ್ಯ ಅವರು ಒಂದು ಡೀಲ್ ನೀಡಿದರು. ‘10 ಬಿದ್ದರೆ ನಾನು ನಿಮಗೆ ಪ್ರಪೋಸ್ ಮಾಡ್ತೀನಿ’ ಎಂದರು ಅಮೂಲ್ಯ. ಇದೇ ವೇಳೆ ದೀಪಿಕಾ ದಾಸ್ ಕೂಡ ಒಂದು ಡೀಲ್ ಮುಂದಿಟ್ಟರು. ‘10 ಬಿದ್ದರೆ ನೀವು ನನಗೆ ಪ್ರಪೋಸ್ ಮಾಡಿ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದರು.