Anant Ambani Weight Gain: What did Nita Ambani say about son Anant Ambani’s weight gain again? in Kannada News | Anant Ambani Weight Gain: ಮಗ ಅನಂತ್ ಅಂಬಾನಿ ತೂಕ ಮತ್ತೆ ಹೆಚ್ಚಾಗಿರುವ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?


ನಿಶ್ಚಿತಾರ್ಥದ ಸಮಯದ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಮತ್ತೆ ತೂಕ ಹೆಚ್ಚಳಗೊಂಡ ಅನಂತ್ ಅಂಬಾನಿಯವರ ಸಾಕಷ್ಟು ಸುದ್ದಿ ಹರಿದಾಡುತ್ತಿದೆ.

Anant Ambani Weight Gain: ಮಗ ಅನಂತ್ ಅಂಬಾನಿ ತೂಕ ಮತ್ತೆ ಹೆಚ್ಚಾಗಿರುವ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?

ಅನಂತ್ ಅಂಬಾನಿ

ಮುಕೇಶ್ ಅಂಬಾನಿ(Mukesh Ambani) ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ(Anant Ambani) ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆದಿದೆ. ನಿಶ್ಚಿತಾರ್ಥದ ಸಮಯದ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಮತ್ತೆ ತೂಕ ಹೆಚ್ಚಳಗೊಂಡ ಅನಂತ್ ಅಂಬಾನಿಯವರ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. 2016 ರಲ್ಲಿ ಎಲ್ಲರಿಗೆ ಮಾದರಿಯಾಗುವ ರೀತಿಯಲ್ಲಿ 200 ಕೆಜಿಯಿಂದ 100 ಕೆಜಿಯಷ್ಟು ತೂಕ ಕಳೆದುಕೊಂಡಿದ್ದ ಅನಂತ್ ಅಂಬಾನಿ, ಈಗ ಮತ್ತೆ ಅದೇ ರೀತಿ ತೂಕ ಹೆಚ್ಚಾಗಿದೆ. ಎಷ್ಟೇ ದುಡ್ಡಿದ್ದರೂ ಆರೋಗ್ಯವನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿತ್ತು, ಈ ಕಾರಣದಿಂದ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾನೆ ಎಂದು ತಾಯಿ ನೀತಾ ಅಂಬಾನಿ ತಿಳಿಸಿದ್ದಾರೆ.

ಅನಂತ್ ಅವರ ತೂಕ ಹೆಚ್ಚಳದ ಬಗ್ಗೆ ನೀತಾ ಅಂಬಾನಿ ನೀಡಿರುವ ಮಾಹಿತಿ:

2016 ರಲ್ಲಿ ತೂಕ ಇಳಿಸಿ ಸಾಕಷ್ಟು ಜನರಿಗೆ ಮಾದರಿಯಾಗಿದ್ದರು. 2017 ರಲ್ಲಿ, ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಅನಂತ್ ಆರೋಗ್ಯ ಸಮಸ್ಯೆ ಅಂದರೆ ಉಬ್ಬಸದಿಂದ ಬಳಲುತ್ತಿದ್ದರು, ಆ ಸಮಯದಲ್ಲಿ ಸಾಕಷ್ಟು ಔಷದಿಗಳನ್ನು ನೀಡುತ್ತಿದ್ದ ಕಾರಣ, ಈ ಸ್ಟೀರಾಯ್ಡ್ ಗಳ ಅಡ್ಡ ಪರಿಣಾಮದಿಂದಾಗಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಆಸ್ತಮಾ ಚಿಕಿತ್ಸೆಯು ಬಹಳಷ್ಟು ತೂಕವನ್ನು ಹೆಚ್ಚಿಸಿತು ಎಂದು ಮಗನ ಆರೋಗ್ಯದ ಕುರಿತು ನೀತಾ ಅಂಬಾನಿ ಹೇಳಿಕೊಂಡಿದ್ದಾರೆ.ವರದಿಗಳ ಪ್ರಕಾರ, ಅನಂತ್ ಪ್ರತಿದಿನ ಐದು-ಆರು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಾರೆ ಮತ್ತು ಅವರ ವ್ಯಾಯಾಮದ ನಿಯಮವು 21 ಕಿಮೀ ನಡಿಗೆ ನಂತರ ಯೋಗ, ತೂಕ ತರಬೇತಿ, ಕ್ರಿಯಾತ್ಮಕ ತರಬೇತಿ ಮತ್ತು ಹೆಚ್ಚಿನ ತೀವ್ರತೆಯ ಕಾರ್ಡಿಯೋ ವ್ಯಾಯಾಮಗಳನ್ನು ಒಳಗೊಂಡಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *