Andre Russell: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾಗಿ ರನೌಟ್ ಆದ ಆಂಡ್ರೆ ರಸೆಲ್..! | BPL: Andre Russell dismissed in a bizarre run out


Andre Russell: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾಗಿ ರನೌಟ್ ಆದ ಆಂಡ್ರೆ ರಸೆಲ್..!

Andre Russell

ಕ್ರಿಕೆಟ್​ನಲ್ಲಿ ಔಟ್ ಮತ್ತು ರನೌಟ್ ಸಾಮಾನ್ಯ ವಿಷಯ. ಹೀಗೆ ಔಟ್ ಹೇಗೆ ಆಗುತ್ತಾರೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯ. ಇದಾಗ್ಯೂ ಕೆಲವೊಮ್ಮೆ ಔಟ್ ಆದ ರೀತಿ ವಿಚಿತ್ರ ಎನಿಸಿಬಿಡುತ್ತದೆ. ಅದರಲ್ಲೂ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನಲ್ಲಿ ಆಂಡ್ರೆ ರಸೆಲ್ ಔಟಾಗಿರುವ ರೀತಿ ಮಾತ್ರ ಎಂಬಾ ವಿಭಿನ್ನ ಎಂಬುದು ಇಲ್ಲಿ ವಿಶೇಷ. ಬಿಪಿಎಲ್​ನಲ್ಲಿ ಶುಕ್ರವಾರ ಮಿನಿಸ್ಟರ್ ಗ್ರೂಪ್ ಢಾಕಾ ಮತ್ತು ಖುಲ್ನಾ ಟೈಗರ್ಸ್ ಮುಖಾಮುಖಿಯಾಗಿತ್ತು. ಮಿನಿಸ್ಟರ್ ಗ್ರೂಪ್ ಢಾಕಾ (MGD) ತಂಡದ ಪರ ಆಡುತ್ತಿರುವ ರಸೆಲ್ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ಇಡೀ ವಿಶ್ವದ ಗಮನ ಸೆಳೆದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಿನಿಸ್ಟರ್ ಗ್ರೂಪ್ ಢಾಕಾ ತಂಡದ ಪರ ರಸೆಲ್ 15 ನೇ ಓವರ್‌ನಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರು. ಈ ಓವರ್ ಖುಲ್ನಾ ಟೈಗರ್ಸ್‌ ಪರ ಶ್ರೀಲಂಕಾದ ತಿಸಾರ ಪೆರೆರಾ ಬೌಲ್ ಮಾಡಿದ್ದರು. ಪೆರೇರಾ ಅವರ ಈ ಓವರ್‌ನ ಐದನೇ ಎಸೆತದಲ್ಲಿ ರಸೆಲ್ ಪ್ರಬಲ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಸಿಡಿಲಬ್ಬರ ತೋರಿಸುವ ಸೂಚನೆ ನೀಡಿದ್ದರು.

ಆದರೆ ಪೆರೇರಾ ಅವರ ಕೊನೆಯ ಎಸೆತದಲ್ಲಿ ರಸೆಲ್ ಚೆಂಡನ್ನು ಶಾರ್ಟ್ ಥರ್ಡ್ ಮ್ಯಾನ್ ಕಡೆಗೆ ಹೊಡೆದರು. ಅಲ್ಲದೆ ಒಂದು ರನ್​ಗಳಿಸುವ ಪಯತ್ನ ಮಾಡಿದ್ದರು. ಅತ್ತ ನಾನ್​ ಸ್ಟ್ರೈಕ್​ನಲ್ಲಿದ್ದ ತಂಡದ ನಾಯಕ ಮೆಹಮುದುಲ್ಲಾ ಕೂಡ ಓಡಿದರು. ಇದೇ ವೇಳೆ ಶಾರ್ಟ್ ಥರ್ಡ್ ಮ್ಯಾನ್‌ನಲ್ಲಿ ಫೀಲ್ಡಿಂಗ್ ಮಾಡಿದ ಮೆಹದಿ ಹಸನ್ ಸ್ಟ್ರೈಕರ್‌ ಎಂಡ್ ವಿಕೆಟ್​ ಚೆಂಡೆಸೆದರು. ಚೆಂಡು ಸ್ಟಂಪ್‌ಗೆ ಬಡಿಯಿತು. ಫೀಲ್ಡರ್ ಸ್ಟೈಕರ್ ವಿಕೆಟ್ ಟಾರ್ಗೆಟ್ ಮಾಡಿರುವುದನ್ನು ಗಮನಿಸಿದ ರಸೆಲ್ ಕೂಡ ನಿಧಾನಗತಿಯಲ್ಲಿ ಓಡಿದರು.

ಆದರೆ ವಿಕೆಟ್​ಗೆ ಬಡಿದ ಚೆಂಡು ನೇರವಾಗಿ ನಾನ್​ ಸ್ಟ್ರೈಕರ್​ ತುದಿಯ ವಿಕೆಟ್​ಗೆ ಬಂದು ಕೂಡ ಬಡಿಯಿತು. ಇಂತಹದೊಂದು ಟ್ವಿಸ್ಟ್​ ಅನ್ನು ರಸೆಲ್ ಕೂಡ ಊಹಿಸಿರಲಿಲ್ಲ. ಅಂದರೆ ಚೆಂಡು ಎರಡೂ ಕಡೆ ವಿಕೆಟ್​ ಬೇಲ್ಸ್​ ಅನ್ನು ಎಗರಿಸಿತ್ತು. ಖುಲ್ನಾ ಟೈಗರ್ಸ್ ಆಟಗಾರರು ರನೌಟ್​ಗೆ ಮನವಿ ಮಾಡಿದರು. ಆದರೆ ವಿಕೆಟ್​ಗೆ ಚೆಂಡು ತಾಗುವ ಮೊದಲೇ ಮೊಹಮುದುಲ್ಲಾ ಕ್ರೀಸ್​ಗೆ ತಲುಪಿದ್ದರು. ಹೀಗಾಗಿ ಥರ್ಡ್ ಅಂಪೈರ್ 2ನೇ ಬಾರಿ ನಾನ್​ ಸ್ಟೈಕ್​ ವಿಕೆಟ್​ಗೆ ತಾಗಿದ ರನೌಟ್​ ಅನ್ನು ಪರಿಶೀಲಿಸಿದರು. ಅಚ್ಚರಿ ಎಂಬಂತೆ ಆಂಡ್ರೆ ರಸೆಲ್ ಕ್ರೀಸ್ ತಲುಪುವ ಮೊದಲೇ ಚೆಂಡು ವಿಕೆಟ್​ಗೆ ತಾಗಿತ್ತು. ಅದರಂತೆ ಆಂಡ್ರೆ ರಸೆಲ್ ವಿಚಿತ್ರ ರನೌಟ್​ಗೆ ಬಲಿಯಾಗಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಬೇಕಾಯಿತು. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ವಿಚಿತ್ರ ರನೌಟ್ ಎಂದು ವಿಶ್ಲೇಷಿಸಲಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *