
ಆಂಡ್ರಿಯಾ ಕೆವಿಸುಚಾ
Anek Movie | Ayushmann Khurrana: ಅನುಭವ್ ಸಿನ್ಹಾ ನಿರ್ದೇಶನದ ‘ಅನೇಕ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ಆಂಡ್ರಿಯಾ ಕೆವಿಚುಸಾರನ್ನು ಪರಿಚಯಿಸಲಾಗಿದೆ. ಅವರು ಮೂಲತಃ ನಾಗಾಲ್ಯಾಂಡ್ನವರು. ಇದೀಗ ಆಂಡ್ರಿಯಾಗೆ ಬಾಲಿವುಡ್ನಲ್ಲಿ ಪ್ರೀತಿಯ ಸ್ವಾಗತ ಸಿಕ್ಕಿದೆ.
ಬಾಲಿವುಡ್ನಲ್ಲಿ ಈಶಾನ್ಯ ರಾಜ್ಯಗಳ ಕಥಾ ವಸ್ತು ಹೊಂದಿರುವ ಚಿತ್ರಗಳು, ಪಾತ್ರಗಳು ಕಡಿಮೆಯೆಂದೇ ಹೇಳಬೇಕು. ಪ್ರಸ್ತುತ ಈ ಆರೋಪದಿಂದ ಮುಕ್ತವಾಗಲು ಬಾಲಿವುಡ್ ಪ್ರಯತ್ನಿಸುತ್ತಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಈ ಪೈಕಿ ‘ಅನೇಕ್’ (Anek Movie) ಕೂಡ ಒಂದು. ಅನುಭವ್ ಸಿನ್ಹಾ ನಿರ್ದೇಶನದ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ (Ayushmann Khurrana) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ಆಂಡ್ರಿಯಾ ಕೆವಿಚುಸಾರನ್ನು (Andrea Kevichusa) ಪರಿಚಯಿಸಲಾಗಿದೆ. ಅವರು ಮೂಲತಃ ನಾಗಾಲ್ಯಾಂಡ್ನವರು. ಚಿತ್ರದಲ್ಲಿ ಅವರ ಪಾತ್ರ ರಿವೀಲ್ ಆಗುತ್ತಿದ್ದಂತೆ ಬಾಲಿವುಡ್ನಲ್ಲಿ ಈಶಾನ್ಯ ಭಾರತದ ಭರವಸೆಯ ನಟಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ತಮ್ಮ ಮೊದಲ ಚಿತ್ರದಲ್ಲಿ ಅವರು ‘ಐಡೋ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ನಲ್ಲಿ ಈಶಾನ್ಯ ಭಾರತದ ನಟಿಯರಿಗೆ ಅವಕಾಶ ಕಡಿಮೆ ಎಂಬ ಬಗ್ಗೆ ಮೊದಲಿನಿಂದ ದೊಡ್ಡ ಮಟ್ಟದಲ್ಲಿ ಚರ್ಚೆಯ ನಡುವೆ ಇದೀಗ ನಾಗಾಲ್ಯಾಂಡ್‌ನ ಆಂಡ್ರಿಯಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಾರೆಯರಿಗೆ ಖುಷಿ ತಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಂಡ್ರಿಯಾರನ್ನು ಬಾಲಿವುಡ್ಗೆ ಸ್ವಾಗತಿಸಿ ಪ್ರೀತಿಯಿಂದ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಹಿರಿಯ ನಟಿ ನೀನಾ ಗುಪ್ತಾ ಆಂಡ್ರಿಯಾ ಶ್ವೇತ ವರ್ಣದ ಸೀರೆಯಲ್ಲಿ ಮಿಂಚುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡು, ‘‘ಗೆಲ್ಲೋದು ಯಾರು? ಭಾರತ’’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಶೀರ್ಷಿಕೆಯಲ್ಲಿ ‘‘ಭಾರತದ ಜನರೇ ಆಲಿಸಿ, ‘ಅನೇಕ್’ ಚಿತ್ರದ “Aido” ನಿಮ್ಮ ಮುಂದೆ. ನಮ್ಮ ಸುಂದರ ನಾಗಾಲ್ಯಾಂಡ್‌ನ ಆಂಡ್ರಿಯಾ ಕೆವಿಚುಸಾ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ’’ ಎಂದು ಬರೆದಿದ್ದಾರೆ.
ನೀನಾ ಗುಪ್ತಾ ಪೋಸ್ಟ್: