Anekal: ಕ್ರಿಕೆಟ್ ಬಾಲ್ ಎತ್ತಲು ಹೋಗಿ ದುರಂತ; ಕೃಷಿ ಹೊಂಡಕ್ಕೆ ಬಿದ್ದು ಆನೇಕಲ್​ನಲ್ಲಿ ಮೂವರು ಸಾವು | Bengaluru Crime: Two Boys and 3 Other Died after Drown in Agricultural Pond while Playing Cricket


Anekal: ಕ್ರಿಕೆಟ್ ಬಾಲ್ ಎತ್ತಲು ಹೋಗಿ ದುರಂತ; ಕೃಷಿ ಹೊಂಡಕ್ಕೆ ಬಿದ್ದು ಆನೇಕಲ್​ನಲ್ಲಿ ಮೂವರು ಸಾವು

ಸಾಂಕೇತಿಕ ಚಿತ್ರ

ಆನೇಕಲ್: ಕ್ರಿಕೆಟ್ ಆಟವಾಡುತ್ತಿದ್ದಾಗ ಬಾಲ್ ಅನ್ನು ಎತ್ತಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಸೇರಿ ಒಟ್ಟು ಮೂವರು ಸಾವನ್ನಪ್ಪಿರುವ ಘಟನೆ ಆನೇಕಲ್​ನಲ್ಲಿ ನಡೆದಿದೆ. ಆನೇಕಲ್​ನ ಇಗ್ಗಲೂರು ಗ್ರಾಮದ ಬಳಿ ಕೃಷಿ ಹೊಂಡಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಗ್ಗಲೂರು ಬಳಿ ಈ ಘಟನೆ ನಡೆದಿದೆ.

ಕೃಷಿ ಹೊಂಡಕ್ಕೆ ಬಿದ್ದ ಬಾಲ್ ತರಲು ಹೋಗಿ ಈ ದುರ್ಘಟನೆ ನಡೆದಿದೆ. ಕೃಷಿ ಹೊಂಡಕ್ಕೆ ಬಿದ್ದ ಒಬ್ಬನನ್ನು ರಕ್ಷಿಸಲು ಹೋಗಿ ಮೂವರು ಸಾವನ್ನಪ್ಪಿದ್ದಾರೆ. ಧೀಮಂತ ( 13), ಹೃಷಿಕೇಶ್ (9),‌ ಅಮಿತ್ ಕುಮಾರ್ (31) ಮೃತಪಟ್ಟವರಾಗಿದ್ದಾರೆ. ಮಜುಮ್ದಾರ್ ಆಸ್ಪತ್ರೆಗೆ ಮೂವರ ಮೃತದೇಹಗಳನ್ನು ಸ್ಥಳಾಂತರ ಮಾಡಲಾಗಿದೆ. ಸೂರ್ಯನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಕ್ರಿಕೆಟ್ ಬಾಲ್ ತರಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ಸಾವನಪ್ಪಿದ ಇಬ್ಬರು ಬಾಲಕರು, ಓರ್ವ ಯುವಕನ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಶಾಲೆಗೆ ರಜೆಯಿದ್ದ ಕಾರಣದಿಂದ ಕ್ರಿಕೆಟ್ ಆಡುತ್ತಿದ್ದ ಬಾಲಕರು ಕೃಷಿ ಹೊಂಡಕ್ಕೆ ಬಿದ್ದಿದ್ದ ಬಾಲ್ ಅನ್ನು ತೆಗೆಯಲು ಹೋದಾಗ ಈ ಘಟನೆ ನಡೆದಿದೆ. ಒಬ್ಬನನ್ನು ಬಚಾವ್ ಮಾಡಲು ಹೋಗಿ‌ ಮೂರು ಜನರ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Shocking News: ಮೇಕಪ್ ಇಲ್ಲದೆ ಎದುರು ಬಂದ ಹೆಂಡತಿಗೆ ಡೈವೋರ್ಸ್ ನೀಡಿದ ಪತಿರಾಯ!

Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್​ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ

TV9 Kannada


Leave a Reply

Your email address will not be published. Required fields are marked *