Apple iPhone 14 Series: ಬಹುನಿರೀಕ್ಷಿತ ಐಫೋನ್ 14 ಸರಣಿ ಬಿಡುಗಡೆ: ಬೆಲೆ ಎಷ್ಟು?, ಏನು ವಿಶೇಷತೆ? | IPhone 14, iPhone 14 Plus, iPhone 14 Pro and iPhone 14 Pro Max launched check india price and specs


iPhone 14, iPhone 14 Plus, iPhone 14 Pro and iPhone 14 Pro Max: ಬುಧವಾರ ರಾತ್ರಿ ನಡೆದ ‘ಫಾರ್ ಔಟ್’ ಕಾರ್ಯಕ್ರಮದಲ್ಲಿ ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಹೀಗೆ ನಾಲ್ಕು ನೂತನ ಆಕರ್ಷಕ ಫೋನ್​ಗಳು ಲಾಂಚ್ ಆಗಿದೆ. ಐಫೋನ್ 13 ಗೆ ಹೋಲಿಸಿದರೆ ಈ ಬಾರಿಯ ಸರಣಿಯಲ್ಲಿ ಅನೇಕ ವಿಶೇಷವಾದ ಆಯ್ಕೆಗಳನ್ನು ನೀಡಲಾಗಿದೆ.

ಸ್ಮಾರ್ಟ್​​ಫೋನ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಆ್ಯಪಲ್ ಕಂಪನಿ ಇದೀಗ ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯನ್ನು ಅನಾವರಣ ಮಾಡಿದೆ. ಭಾರತೀಯ ಕಾಲಮಾನದ ಪ್ರಕಾರ ಬುಧವಾರ ರಾತ್ರಿ ನಡೆದ ಫಾರ್ ಔಟ್ಕಾರ್ಯಕ್ರಮದಲ್ಲಿ ಐಫೋನ್ 14, ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ (iPhone 14, iPhone 14 Plus, iPhone 14 Pro, iPhone 14 Pro Max) ಹೀಗೆ ನಾಲ್ಕು ನೂತನ ಆಕರ್ಷಕ ಫೋನ್​ಗಳು ಲಾಂಚ್ ಆಗಿದೆ. ಐಫೋನ್ 13 ಗೆ ಹೋಲಿಸಿದರೆ ಈ ಬಾರಿಯ ಸರಣಿಯಲ್ಲಿ ಅನೇಕ ವಿಶೇಷವಾದ ಆಯ್ಕೆಗಳನ್ನು ನೀಡಲಾಗಿದೆ. 14 ಪ್ರೊ ಮಾಡೆಲ್​ನಲ್ಲಿ ಕೊನೆಗೂ ಪಂಚ್ ಹೋಲ್ ಡಿಸ್ ಪ್ಲೇ ಡಿಸೈನ್ ನೀಡಲಾಗಿದ್ದು, ಕ್ಯಾಮೆರಾ ಕೂಡ ಅದ್ಭುತವಾಗಿದೆ. ಈ ಫೋನುಗಳ ಬೆಲೆ ಎಷ್ಟು?, ಏನಲ್ಲ ಫೀಚರ್ಸ್ ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಫೋನ್ 14:

ಐಫೋನ್ 14 ಫೋನ್ ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಪಡೆದುಕೊಂಡಿದೆ. A15 ಬಯೋನಿಕ್ ಚಿಪ್ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳಲ್ಲಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇಸಿಮ್ ಆಯ್ಕೆಯನ್ನು ನೀಡಲಾಗಿದೆ. ಐಫೋನ್ 14 ಆರಂಭಿಕ ಬೆಲೆಯು $799 ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 79,900 ರೂ. ಎನ್ನಬಹುದು. ಈ ಫೋನ್ ಸೆಪ್ಟೆಂಬರ್ 16 ರಿಂದ ಖರೀದಿಗೆ ಲಭ್ಯವಿದೆ.

ಐಫೋನ್ 14 ಪ್ಲಸ್‌:

ಐಫೋನ್ 14 ಪ್ಲಸ್‌ 6.7 ಇಂಚಿನ ಸೂಪರ್ ರೆಟಿನಾ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ನೀಡಲಾಗಿದೆ. ಇದು 1200nits ಬ್ರೈಟ್ನಸ್‌ ಸಪೋರ್ಟ್‌ ಪಡೆದುಕೊಂಡಿದೆ. ಇದುಕೂಡ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಎರಡೂ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ ಕೂಡ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. A15 ಬಯೋನಿಕ್ ಚಿಪ್ಸೆಟ್​ನಿಂದ ಕಾರ್ಯನಿರ್ವಹಿಸುತ್ತದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. 5G ಕನೆಕ್ಟಿವಿಟಿ ಜೊತೆ ಇಸಿಮ್ ಸಪೋರ್ಟ್‌ ಪಡೆದಿದೆ. ಐಫೋನ್ 14 ಪ್ಲಸ್‌ ಬೆಲೆಯು $899, ಭಾರತದಲ್ಲಿ ಆರಂಭಿಕ ಬೆಲೆ 89,900ರೂ. ಇರಬಹುದು. ಇದು ಅಕ್ಟೋಬರ್ 7 ರಂದು ಮಾರುಕಟ್ಟೆಗೆ ಬರಲಿದೆ.

ಐಫೋನ್‌ 14 ಪ್ರೊ, 14 ಪ್ರೊ ಮ್ಯಾಕ್ಸ್‌ :

ಈ ಎರಡು ಫೋನ್‌ಗಳು ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಹಲವು ವಿಭಾಗಗಳಲ್ಲಿ ಅಪ್‌ಡೇಟ್‌ ಪಡೆದಿವೆ. ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇ ನೀಡುತ್ತದೆ. ಅದೇ ರೀತಿ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್‌ ಆನ್ ಕಾರ್ಯವನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್​ನಿಂದ ಕೂಡಿದ್ದು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ.

ವಿಶೇಷವಾಗಿ ಐಫೋನ್ 14 ಪ್ರೊ ಆ್ಯಕ್ಷನ್ ಮೋಡ್ ಅನ್ನು ನೀಡುತ್ತದೆ. ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಪಡೆದುಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಡಿದೆ. ಈ ಎರಡು ಫೋನ್‌ಗಳು A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದಿವೆ. ಆರುಕೋರ್ CPU ಹೊಂದಿದ್ದು. ಅಧಿಕ ಕಾರ್ಯಕ್ಷಮತೆಯ ಕೋರ್‌ಗಳನ್ನು ಒಳಗೊಂಡಿದೆ. A16 ಚಿಪ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್​ನಲ್ಲಿ ಕಂಡುಬರುವ ಮೃದುವಾದ ಅನಿಮೇಷನ್‌ಗಳಿಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ. ಇದು ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

TV9 Kannada


Leave a Reply

Your email address will not be published.