Araga Jnanendra: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ನೆರವು ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ | Karnataka Home Minister Araga Jnanendra helps to accident victims to reach hospital in Shivamogga


Araga Jnanendra: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ನೆರವು ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)

ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅಪಘಾತದಿಂದ ಗಾಯಗೊಂಡಿದ್ದವರಿಗೆ ನೆರವು ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಬೈಕ್ ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿತ್ತು. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಿಸಿದ ಗೃಹ ಸಚಿವರು, ಚಿಕಿತ್ಸೆಗೆ ನೆರವು ನೀಡಿದ್ದಾರೆ. ಅವರ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆಯೇನು?
ಮಂಡಗದ್ದೆ ಸಮೀಪ ಅಪಘಾತದಲ್ಲಿ ತೀರ್ಥಹಳ್ಳಿ ತಾಲೂಕಿನ ಜೇಡಿಕುಣಿ ಗ್ರಾಮಸ್ಥರಾದ ಸುಬ್ರಮಣ್ಯ ಮತ್ತು ಸಂಪತ್ ಎಂಬ ಈರ್ವರು ಮಂಡಗದ್ದೆ ಸಮೀಪ ಪ್ರಯಾಣಿಸುವಾಗ ಅಪಘಾತಕ್ಕೀಡಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸುತ್ತಿತ್ತು. ಅದನ್ನು ಗಮನಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಎಸ್ಕಾರ್ಟ್ ವಾಹನದಲ್ಲಿ ಅಪಘಾತಕ್ಕೆ ಒಳಗಾಗಿದ್ದವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ಧಾರೆ. ಈ ಮೂಲಕ ಗಾಯಾಳುಗಳಿಗೆ ನೆರವು ನೀಡಿದ್ದಾರೆ. ಗೃಹ ಸಚಿವರ ಸಮಯ ಪ್ರಜ್ಞೆ ಹಾಗೂ ಮಾನವೀಯ ಗುಣಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

ನಾನು ಮಂತ್ರಿ ಆಗಿರುವಾಗ ನನ್ನ ಮಗ ಎಂಎಲ್​ಸಿ, ಎಂಎಲ್ಎ ಆಗಬಾರದು; ಇದು ನನ್ನ ವೈಯಕ್ತಿಕ ನಿರ್ಧಾರವೆಂದ ಸಚಿವ ಈಶ್ವರಪ್ಪ

ಹಳೆ ಛಾಪಾಕಾಗದ ಮಾರಾಟ ಮಾಡ್ತಿದ್ದವರ ಮನೆ ಮೇಲೆ ಪೊಲೀಸರ ದಾಳಿ; ಸಾಕಷ್ಟು ಅಪರಾಧ ಕೃತ್ಯ ಬೆಳಕಿಗೆ

TV9 Kannada


Leave a Reply

Your email address will not be published. Required fields are marked *