Arasalu Malgudi Museum: ಆರ್.ಕೆ ನಾರಾಯಣ ಅವರ ಕಾಲ್ಪನಿಕ ಕಥೆ, ಈಗ ನೈಜ ಕಥೆಯ ಮಾಲ್ಗುಡಿ ಮ್ಯೂಸಿಯಂ ನಿರ್ಮಾಣಗೊಂಡಿದೆ | Malgudi Museum ready to recall the malgudi days memories


Arasalu Malgudi Museum: ಆರ್.ಕೆ ನಾರಾಯಣ ಅವರ ಕಾಲ್ಪನಿಕ ಕಥೆ, ಈಗ ನೈಜ ಕಥೆಯ ಮಾಲ್ಗುಡಿ ಮ್ಯೂಸಿಯಂ ನಿರ್ಮಾಣಗೊಂಡಿದೆ

ಮಾಲ್ಗುಡಿ ಮ್ಯೂಸಿಂ

ಆರ್‌ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯನ್ನು ಆಧರಿಸಿದ ವಸ್ತುಸಂಗ್ರಹಾಲಯ ನಿರ್ಮಾಣಗೊಂಡಿದೆ.

ಮಾಲ್ಗುಡಿ ಡೇಸ್ (Malgudi Days) ಆರ್.ಕೆ ನಾರಾಯಣ (R K Narayan)ಅವರು ರಚಿಸಿದ ಕಾಲ್ಪನಿಕ ಸಣ್ಣಕಥೆಗಳ ಸಂಗ್ರಹ. ಇವರ ಕಥೆಯಲ್ಲಿ ಮಾಲ್ಗುಡಿ ಪಟ್ಟಣ ಮತ್ತು ಮಾಲ್ಗುಡಿ ನಿಲ್ದಾಣವು ದಕ್ಷಿಣ ಭಾರತದ ಕಾಲ್ಪನಿಕ ಸ್ಥಳಗಳಾಗಿದೆ. ಇವರ ಕಾಲ್ಪನಿಕ ಪಟ್ಟಣ ಮತ್ತು ನಿಲ್ದಾಣವು 80 ರ ದಶಕದ ಉತ್ತರಾರ್ಧದಲ್ಲಿ ಮತ್ತು 90 ರ ದಶಕದ ಆರಂಭದಲ್ಲಿ ಮನೆಮಾತಾಗಿತ್ತು.

ವಿಶೇಷ ಅಂದರೆ ಮಾಲ್ಗುಡಿ ಡೇಸ್ ಅಂದ ತಕ್ಷಣ ಮೊದಲು ನೆನಪು ಬರುವುದು ನಟ, ನಿರ್ದೇಶಕ ಶಂಕರನಾಗ್ (Shankarnag), ಆರ್.ಕೆ ನಾರಾಯಣ ಅವರ ಮಾಲ್ಗುಡಿ ಡೇಸ್ ಕಥೆಗಳನ್ನು ಇಟ್ಟುಕೊಂಡು, ಅದಕ್ಕೆ ಬೇಕಾದ ಸಂಭಾಷಣೆಗಳನ್ನು ರಚಿಸಿ, ಕಥೆಗಳಲ್ಲಿ ಬರುವ ಪ್ರಾತ್ರಗಳಿಗೆ ಕಲಾವಿದರನ್ನು ಗುರುತಿಸಿ ಅಕ್ಷರ ರೂಪದಲ್ಲಿದ್ದ ಮಾಲ್ಗುಡಿ ಡೇಸ್​ನ್ನು ಪರದೆಯ ಮೇಲೆ ತಂದರು.

ಈ ಮೂಲಕ ಪ್ರೇಕ್ಷಕರಿಗೆ ಇದು ನೈಜವಾಗಿ ನಡೆದ ಘಟನೆ ಎಂದು ಬಿಂಬಿಸಿದರು. ಇನ್ನು ವಾಸ್ತವವಾಗಿ ಮಾಲ್ಗುಡಿ ಅನ್ನುವ ಪಟ್ಟಣ ಇಲ್ಲ. ಆದರೆ ಈ ದಾರವಾಹಿ ಬಂದ ಮೇಲೆ ಮಾಲ್ಗುಡಿ ಎಂಬ ಪಟ್ಟಣ ಸೃಷ್ಟಿಯಾಗಿದೆ. ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗದಲ್ಲಿ ಬರುವ ಅರಸಾಳು ಊರಿನಲ್ಲಿ ದಾರವಾಹಿ ಚಿತ್ರಿಕರಣಗೊಂಡ ಮೇಲೆ ಈ ಊರು ಮಾಲ್ಗುಡಿ ಎಂದು ಬಿಂಬಿತವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ 2019ರಲ್ಲಿ ಕರ್ನಾಟಕ ಸರಕಾರ ಅರಸಾಳು ರೈಲು ನಿಲ್ದಾಣಕ್ಕೆ ಮಾಲ್ಗುಡಿ ರೈರು ನಿಲ್ದಾಣ ಎಂದು ಮರುನಾಮಕರಣ ಮಾಡಿದರು.

ಇದನ್ನು ಓದಿ: ಬೀದರಿನ ಕೋಟೆ ಕಂದಕದಿಂದ ಹಿಮಾಲಯದತನಕ ವಾಜೇಂದ್ರ ಮ್ಯೂಸಿಯಂ ಪಯಣ

ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ಇಲ್ಲಿ ಮಾಲ್ಗುಡಿ ವಸ್ತುಸಂಗ್ರಹಾಲಯ ನಿರ್ಮಾಣವಾಗಬೇಕು ಎಂದು ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಮೂರು ವರ್ಷಗಳ ನಂತರ, ಈಗ ಅದು ಸಾಕಾರಗೊಂಡಿದೆ. ಆರ್‌ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಕಥೆಯನ್ನು ಆಧರಿಸಿದ ವಸ್ತುಸಂಗ್ರಹಾಲಯ ನಿರ್ಮಾಣಗೊಂಡಿದೆ.

https://www.facebook.com/RailMinIndia/posts/370542038439709

ಈ ಕುರಿತು ಮ್ಯೂಸಿಯಂನ ಕಲೆವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೈಲ್ವೆ ರಾಜ್ಯ ಸಚಿವ ದರ್ಶನ ಜರ್ದೋಶ್ಸ್ವಾಮಿ ಮತ್ತು ಸ್ನೇಹಿತರ ನೆನಪುಗಳು ಮ್ಯೂಸಿಯಂನಲ್ಲಿ ಜೀವಂತವಾಗಿವೆ. ಈ ಸ್ಥಳದಲ್ಲಿ ‘ಮಾಲ್ಗುಡಿ ಡೇಸ್’ ಹೆಸರಿನ ಕೆಫೆಯೂ ಇದೆ ಎಂದು ಬರೆದುಕೊಂಡಿದ್ದಾರೆ.

“ಮಾಲ್ಗುಡಿ ಮ್ಯೂಸಿಯಂನಲ್ಲಿ ಮಾಲ್ಗುಡಿ ದಿನಗಳನ್ನು ನೋಡಬಹುದು, ಆ ದಿನಗಳತ್ತ ಮ್ಯೂಸಿಂ ನಿಮ್ಮನ್ನು ಕೊಂಡೊಯ್ಯುತ್ತದೆ. SWR ನ ಮೈಸೂರು ವಿಭಾಗದ ಅಡಿಯಲ್ಲಿ ಅರಸಾಳು ನಿಲ್ದಾಣದಲ್ಲಿ ಹೊಸದಾಗಿ ತೆರೆಯಲಾದ ಮಾಲ್ಗುಡಿ ವಸ್ತುಸಂಗ್ರಹಾಲಯದಲ್ಲಿ ಮಾಲ್ಗುಡಿ ದಿನಗಳ ಸ್ವಾಮಿ ಮತ್ತು ಸ್ನೇಹಿತರ ದಿನಗಳನ್ನು ನೆನಪಿಸಿಕೊಳ್ಳಿ. ಹಾಗೇ ಆ ನೆನಪುಗಳೊಂದಿಗೆ ಮಾಲ್ಗುಡಿ ಚಾಯ್​ನ್ನು ಸೇವಿಸಬಹುದು. ನೈಋತ್ಯ ರೈಲ್ವೆ ವಲಯದ ಪ್ರಕಾರ ಹಳೆ ಅರಸಾಳು ರೈಲು ನಿಲ್ದಾಣವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲು ಅಂದಾಜು 35 ಲಕ್ಷ ರೂ ಖರ್ಚು ಮಾಡಲಾಗಿದೆ. ನಿಲ್ದಾಣದ ಹಳೆಯ ಭಾಗವನ್ನು ಅದರ ಮೂಲ ವಾಸ್ತುಶೈಲಿಯನ್ನು ಬದಲಾಯಿಸದೆ ಸಾರ್ವಜನಿಕ ಸ್ಥಳವಾಗಿ ಪರಿವರ್ತಿಸಲಾಯಿತು.

TV9 Kannada


Leave a Reply

Your email address will not be published. Required fields are marked *