Archery World Cup: ಆರ್ಚರಿ ವಿಶ್ವಕಪ್: ಫೈನಲ್​ನಲ್ಲಿ ಚಿನ್ನ ಗೆದ್ದ ಭಾರತ ಪುರುಷರ ತಂಡ | Archery World Cup 2022 India Mens Compound Archery Team Wins Gold At World Cup


ಆರ್ಚರಿ ವಿಶ್ವಕಪ್‌ನಲ್ಲಿ ಭಾರತ (India) ಪುರುಷರ ತಂಡ ಸ್ಟೇಜ್ 2 ಫೈನಲ್ ಹಂತದಲ್ಲಿ ಚಿನ್ನಕ್ಕೆ (Gold) ಮುತ್ತಿಕ್ಕಿದ್ದಾರೆ. ಫ್ರಾನ್ಸ್​ಗೆ ಆಘಾತ ನೀಡಿದ ಭಾರತ ತಂಡದ ಪುರುಷರಾದ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾನ್ ಚಿನ್ನ ಗೆದ್ದು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

ದಕ್ಷಿಣ ಕೊರಿಯಾದ ಗ್ವಾಂಗ್ಜುನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ 2022ರಲ್ಲಿ (Archery World Cup) ಭಾರತೀಯ ಪುರುಷರ ತಂಡ ಮಹತ್ವದ ಸಾಧನೆ ಮಾಡಿದೆ. ಆರ್ಚರಿ ವಿಶ್ವಕಪ್‌ನಲ್ಲಿ ಭಾರತ (India) ಪುರುಷರ ತಂಡ ಸ್ಟೇಜ್ 2 ಫೈನಲ್ ಹಂತದಲ್ಲಿ ಚಿನ್ನಕ್ಕೆ (Gold) ಮುತ್ತಿಕ್ಕಿದ್ದಾರೆ. ಫ್ರಾನ್ಸ್​ಗೆ ಆಘಾತ ನೀಡಿದ ಭಾರತ ತಂಡದ ಪುರುಷರಾದ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾನ್ ಚಿನ್ನ ಗೆದ್ದು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ಮುಖಾಮುಖಿಯಲ್ಲಿ ಭಾರತ 232-230 ಅಂತರದಿಂದ ಗೆಲುವು ಸಾಧಿಸಿತು. ಕಳೆದ ಏಪ್ರಿಲ್‌ನಲ್ಲಿ ಅಂಟಲ್ಯದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಇದೇ ಭಾರತೀಯ ಮೂವರು ಫ್ರಾನ್ಸ್‌ ಅನ್ನು ಒಂದು ಅಂಕದಿಂದ ಸೋಲಿಸಿದ್ದರು. ಇದಕ್ಕೂ ಮುನ್ನ ಸೆಮಿ ಫೈನಲ್​ಲ್ಲಿ ಆತಿಥೇಯ ದಕ್ಷಿಣ ಕೊರಿಯಾ ತಂಡಕ್ಕೆ ಭಾರತ ತಂಡ ಆಘಾತ ನೀಡಿತ್ತು. ಈ ಪಂದ್ಯದಲ್ಲಿ ಅಭಿಷೇಕ್ ವರ್ಮಾ, ಅಮನ್ ಸೈನಿ ಮತ್ತು ರಜತ್ ಚೌಹಾನ್ ದಕ್ಷಿಣ ಕೊರಿಯಾ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಈ ಮುಖಾಮುಖಿಯಲ್ಲಿ ದಕ್ಷಿಣ ಕೊರಿಯಾ ಡೆನ್ಮಾರ್ಕ್ ತಂಡದ ವಿರುದ್ಧ 238-229 ಅಂತರದಿಂದ ಗೆಲುವು ಸಾಧಿಸಿತ್ತು.

ಇನ್ನು ಭಾರತದ ಮಹಿಳಾ ತಂಡ ಕೂಡ ದೊಡ್ಡ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅವನೀತ್ ಕೌರ್, ಮುಸ್ಕಾನ್ ಕಿರಾರ್ ಮತ್ತು ಪ್ರಿಯಾ ಗುರ್ಜರ್ ಅವರನ್ನೊಳಗೊಂಡ ಭಾರತದ ಮಹಿಳಾ ಕಾಂಪೌಂಡ್ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಕಂಚಿನ ಪದಕಕ್ಕಾಗಿ ಟರ್ಕಿ ತಂಡದ ವಿರುದ್ಧ ರೋಚಕ ಸ್ಪರ್ಧೆ ಎದುರಾಯಿತು. ಅಂತಿಮ ಹಂತದಲ್ಲಿ ತಿರುಗಿಬಿದ್ದ ಭಾರತೀಯ ಆರ್ಚರ್‌ಗಳು 232-231 ಅಂತರದಿಂದ ಗೆದ್ದು ಪದಕಕ್ಕೆ ಮುತ್ತಿಟ್ಟರು.

Uday Chowta: ಏಕಲವ್ಯ ಪ್ರಶಸ್ತಿ ವಿಜೇತ, ಮಾಜಿ ಕಬಡ್ಡಿ ಆಟಗಾರ ಉದಯ ಚೌಟ ನಿಧನ

ಗ್ವಾಂಗ್ಜುನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಎರಡನೇ ಕಂಚಿನ ಪದಕವಾಗಿದೆ. ಇದಕ್ಕೂ ಮುನ್ನ ಬುಧವಾರ ಅವ್ನೀತ್ ಕೌರ್, ಮುಸ್ಕಾನ್ ಕಿರಾರ್ ಮತ್ತು ಪ್ರಿಯಾ ಗುರ್ಜಾರ್ ಅವರಿದ್ದ ಮಹಿಳಾ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇನ್ನು ಒಲಿಂಪಿಯನ್‌ಗಳಾದ ತರುಣ್‌ದೀಪ್ ರೈ ಮತ್ತು ಜಯಂತ್ ತಾಲೂಕ್‌ದಾರ್ ಮತ್ತು ಯುವ ನೀರಜ್ ಚೌಹಾಣ್‌ರ ಭಾರತೀಯ ಪುರುಷರ ರಿಕರ್ವ್ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್‌ ವಿರುದ್ಧ ಸೋಲುಂಡಿದೆ.

TV9 Kannada


Leave a Reply

Your email address will not be published. Required fields are marked *