arsikere BJP Leader beat up His Party Worker In Hassan District | ಸ್ವಪಕ್ಷೀಯ ಕಾರ್ಯಕರ್ತನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಹಾಸನ ಬಿಜೆಪಿ ನಾಯಕ


ಬಿಜೆಪಿ ನಾಯಕನೊಬ್ಬ ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರ್ ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ನಡೆದಿದೆ,

ಸ್ವಪಕ್ಷೀಯ ಕಾರ್ಯಕರ್ತನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಹಾಸನ ಬಿಜೆಪಿ ನಾಯಕ

ಕಾರ್ಯಕರ್ತನನ್ನು ಅಟ್ಟಾಡಿಸಿ ಹಿಗ್ಗಾಮುಗ್ಗಾ ಹೊಡೆದ ಹಾಸನ ಬಿಜೆಪಿ ನಾಯಕ

ಹಾಸನ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ಹಾಸನದಲ್ಲಿ(Hassan) ಬಿಜೆಪಿ ನಾಯಕರೊಬ್ಬರು ಸ್ವಪಕ್ಷೀಯ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಅರಸೀಕೆರೆಯಲ್ಲಿ(arsikere) ನಡೆದಿದೆ. ಬಿಜೆಪಿಯ ಬೂತ್ ವಿಜಯ್ ಅಭಿಯಾನ ಕಾರ್ಯಕಮದಲ್ಲಿ ತಮಗೆ ಅವಮಾನ ಮಾಡಿದ್ದಾನೆಂದು ವಿಜಯ್ ಕುಮಾರ್ ತನ್ನ ಕಾರು ಚಾಲಕನ ಜೊತೆ ಸೇರಿಕೊಂಡು ಕುಮಾರ್​ ಮೇಲೆ ಮಾರಣಾಂತಿಕ ಹಲ್ಲೆ (Asselt) ಮಾಡಿದ್ದಾರೆ.

ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಬಿಜೆಪಿ ಬಿಜೆಪಿ ಅರಸೀಕೆರೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಎನ್.ಆರ್.ಸಂತೋಚ್ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿತ್ತು. ಹಲ್ಲೆಗೊಳಗಾದ ಕುಮಾರ್ ಎನ್.ಆರ್ ಸಂತೋಷ್ ಬಣದಲ್ಲಿ ಗುರ್ತಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿಯ ಬೂತ್​ ವಿಜಯ್ ಅಭಿಯಾನ​ ನಿಮಿತ್ತ ಗ್ರಾಮಗಳಿಗೆ ತೆರಳಿದ್ದ ವೇಳೆ ಕೆಲ ಜನರಿಂದ ವಿಜಯ್ ಕುಮಾರ್​ಗೆ ಅವಮಾನವಾಗಿತ್ತು. ಆ ಘಟನೆ ವೀಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ.

ತಾಜಾ ಸುದ್ದಿ

ಈ ಎಲ್ಲಾ ಬೆಳವಣಿಗೆಗಳಿಂದ ವಿಜಯ್ ಕುಮಾರ್ ಕುಪಿತಗೊಂಡು ಇಂದು ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರು ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಕುಮಾರ್ ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *