Aryan Khan Drug Case ಆರ್ಯನ್​​ ಖಾನ್​​ ಡ್ರಗ್ಸ್​​​ ಪ್ರಕರಣ: ಬಂಧನದಿಂದ ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಏನೇನಾಯ್ತು? | NCB given clean chit to Shah Rukh Khan’s son Aryan Khan here is the time line of Cordelia cruise drugs case


Aryan Khan Drug Case ಆರ್ಯನ್​​ ಖಾನ್​​ ಡ್ರಗ್ಸ್​​​ ಪ್ರಕರಣ: ಬಂಧನದಿಂದ ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಏನೇನಾಯ್ತು?

ಆರ್ಯನ್ ಖಾನ್

Cordelia cruise drugs case ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ ಆರಂಭದಲ್ಲಿ ಬಂಧಿಸಲಾಗಿತ್ತು

ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ(Cordelia cruise drugs case) ಆರ್ಯನ್ ಖಾನ್‌ಗೆ (Aryan Khan) ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಶುಕ್ರವಾರ ಕ್ಲೀನ್ ಚಿಟ್ ನೀಡಿದೆ. ಈ ಪ್ರಕರಣದಲ್ಲಿ ಇತರ ನಾಲ್ವರೊಂದಿಗೆ ಸಂಸ್ಥೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಅವರ ಹೆಸರಿಲ್ಲ. ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್(Shah Rukh Khan) ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ ಆರಂಭದಲ್ಲಿ ಬಂಧಿಸಲಾಗಿತ್ತು. ಅಕ್ಟೋಬರ್ 2021 ರಲ್ಲಿ ಆರ್ಯನ್ ಖಾನ್ ಬಂಧನ ನಡೆದಿದ್ದು, 20 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಆರ್ಯನ್ ಮತ್ತು ಕ್ರೂಸ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ದ್ರವ್ಯಗಳನ್ನು ಹೊಂದಿದ್ದರು ಎಂದು ಹೇಳಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದಿಂದ ಹಿಡಿದು ಎನ್​​ಸಿಬಿ ಕ್ಲೀನ್ ಚಿಟ್​​ವರೆಗೆ ಪ್ರಕರಣದ ಟೈಮ್ ಲೈನ್ ಇಲ್ಲಿದೆ

ಅಕ್ಟೋಬರ್ 2, 2021: ಕ್ರೂಸ್ ಪಾರ್ಟಿಯ ಮೇಲೆ ದಾಳಿ ಮಾಡಿದ ನಂತರ ಆರ್ಯನ್ ಖಾನ್ ಅವರನ್ನು ಎನ್‌ಸಿಬಿ ಬಂಧಿಸಿತು.

ಅಕ್ಟೋಬರ್ 3: ಆರ್ಯನ್ ಖಾನ್ ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್, ಮುನ್‌ಮುನ್ ಧಮೇಚಾ ಅವರನ್ನು ಎನ್‌ಸಿಬಿ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಮಂದಿಯನ್ನು ಬಂಧಿಸಲಾಗಿತ್ತು.

ಅಕ್ಟೋಬರ್ 3ಅಕ್ಟೋಬರ್ 28 ರವರೆಗೆ: ಆರ್ಯನ್ ಖಾನ್ ಡ್ರಗ್ಸ್ ಹೊಂದಿರಲಿಲ್ಲ ಎಂದು ಆರ್ಯನ್ ಖಾನ್ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ನಡುವಿನ ವಾಟ್ಸಾಪ್ ಚಾಟ್‌ಗಳು ಅರ್ಬಾಜ್ ಮರ್ಚೆಂಟ್ ಸಾಗಿಸುತ್ತಿದ್ದ ಡ್ರಗ್ಸ್ ಇಬ್ಬರಿಗಾಗಿ ಇದ್ದದ್ದು ಎಂದು ಬಹಿರಂಗಪಡಿಸಿದೆ ಎಂದು ಎನ್‌ಸಿಬಿ ವಕೀಲರು ವಾದಿಸಿದರು.

ಅಕ್ಟೋಬರ್ 28: ಹಲವಾರು ದಿನಗಳ ವಿಚಾರಣೆ ಮತ್ತು ಪ್ರಕರಣದಲ್ಲಿ ಹಲವಾರು ತಿರುವುಗಳ ನಂತರ, ಬಾಂಬೆ ಹೈಕೋರ್ಟ್ ಕೆಲವು ಷರತ್ತುಗಳ ಮೇಲೆ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರಿಗೆ ಜಾಮೀನು ನೀಡಿತು.

ನವೆಂಬರ್ 2021: ನವೆಂಬರ್ ವರೆಗೆ ಪ್ರಕರಣವನ್ನು ಮುಂಬೈ ವಲಯದ ಎನ್‌ಸಿಬಿ ತನಿಖೆ ನಡೆಸಿತ್ತು . ಸಮೀರ್ ವಾಂಖೆಡೆ ವಲಯ ಮುಖ್ಯಸ್ಥರಾಗಿದ್ದರು. ನವೆಂಬರ್‌ನಲ್ಲಿ ದೆಹಲಿಯ ಎನ್ ಸಿಬಿ ಪ್ರಧಾನ ಕಚೇರಿಯ ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಅವರ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡವು ಪ್ರಕರಣವನ್ನು ವಹಿಸಿಕೊಂಡಿತು.

ಡಿಸೆಂಬರ್ 2021: ಬಾಲಿವುಡ್ ವಿರುದ್ಧದ ‘ಉದ್ದೇಶಿತ’ ಡ್ರಗ್ಸ್ ಡ್ರೈವ್‌ನಿಂದಾಗಿ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರೊಂದಿಗೆ ಜಗಳವಾಡಿದ ಸಮೀರ್ ವಾಂಖೆಡೆ ಅವರ ಅವಧಿ ಕೊನೆಗೊಂಡಿತು. ಪ್ರಕರಣವು ಎಸ್ಐಟಿಗೆ ವಹಿಸಿದ ಕಾರಣ ಪ್ರತಿ ವಾರ ಮುಂಬೈ ಎನ್ ಸಿಬಿ ಮುಂದೆ ಹಾಜರಾಗುವುದರಿಂದ ಆರ್ಯನ್ ಖಾನ್ ಗೆ ರಿಲೀಫ್ ನೀಡಲಾಯಿತು.

ಮಾರ್ಚ್ 2022: ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಎಸ್‌ಐಟಿ ಸ್ವಲ್ಪ ಸಮಯ ಕೋರಿದ್ದು ಎನ್‌ಡಿಪಿಎಸ್ ನ್ಯಾಯಾಲಯವು 60 ದಿನಗಳನ್ನು ನೀಡಿತು.

ಏಪ್ರಿಲ್ 2022: ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ನಿಧನರಾದರು. ಶಾರುಖ್ ಖಾನ್ ಪುತ್ರನನ್ನು ಬಂಧಿಸಲು ಎನ್‌ಸಿಬಿಯಲ್ಲಿ ಹಣದ ವ್ಯವಹಾರ ನಡೆದಿದೆ ಎಂದು ಅವರು ಹೇಳಿದ್ದರು. ಸೈಲ್ ಅವರು ಎನ್‌ಸಿಬಿ ಸಾಕ್ಷಿ ಕೆಪಿ ಗೋಸಾವಿಯ ಅಂಗರಕ್ಷಕ ಎಂದು ಹೇಳಿಕೊಂಡಿದ್ದರು ಮತ್ತು ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ ಗೋಸಾವಿ ₹ 25 ಕೋಟಿ ಪಾವತಿ ಒಪ್ಪಂದವನ್ನು ಚರ್ಚಿಸಿದ್ದಾರೆ ಎಂದು ಆರೋಪಿಸಿದ್ದರು.

ಮೇ 27  2022: ಎನ್‌ಸಿಬಿಯಿಂದ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ಇದರಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಯಿತು.

TV9 Kannada


Leave a Reply

Your email address will not be published. Required fields are marked *