Aryavardhan Guruji: ಜಯಶ್ರೀ ಮಾಂಗಲ್ಯ ಸರಕ್ಕೆ ಆರ್ಯವರ್ಧನ್ ಸ್ಪಾನ್ಸರ್​; ಇದು ಜೋಕ್ ಅಲ್ಲ | Aryavardhan Guruji will sponsor to Mangalya Chain Amount for Jayashree Aradhya rmd


Jayashree Aradhya: ಗುರೂಜಿ ಹಾಗೂ ಜಯಶ್ರೀ ನಡುವೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇದಕ್ಕೆ ಕಾರಣವೂ ಇದೆ. ಆರಂಭದಲ್ಲಿ ಜಯಶ್ರೀ ಹಾಗೂ ಚೈತ್ರಾ ಹಳ್ಳಿಕೇರಿ ಕ್ಲೋಸ್ ಆಗಿದ್ದರು. ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋದ ನಂತರದಲ್ಲಿ ಗುರೂಜಿ ಜತೆ ಜಯಶ್ರೀಗೆ ಬಾಂಧವ್ಯ ಬೆಳೆಯಿತು.

Aryavardhan Guruji: ಜಯಶ್ರೀ ಮಾಂಗಲ್ಯ ಸರಕ್ಕೆ ಆರ್ಯವರ್ಧನ್ ಸ್ಪಾನ್ಸರ್​; ಇದು ಜೋಕ್ ಅಲ್ಲ

ಜಯಶ್ರೀ-ಆರ್ಯವರ್ಧನ್

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಅಂತ್ಯವಾಗಿದೆ. ಸೆಪ್ಟೆಂಬರ್​ 16ರ ರಾತ್ರಿ ಅದ್ದೂರಿಯಾಗಿ ಫಿನಾಲೆ ಕಾರ್ಯಕ್ರಮ ನಡೆದಿದೆ. ಸೆಪ್ಟೆಂಬರ್ 24ರಿಂದ ಬಿಗ್ ಬಾಸ್ ಟಿವಿ ಸೀಸನ್ ಆರಂಭ ಆಗಲಿದೆ. ಪ್ರತಿ ಬಾರಿ ಬಿಗ್ ಬಾಸ್ ಕೊನೆಯಾಗುವಾಗ ಎಲ್ಲಾ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗುತ್ತದೆ. ಈ ಟಾಸ್ಕ್​ನ ಅನುಸಾರ ಮನೆಯ ಉಳಿದ ಸ್ಪರ್ಧಿಗಳಿಗೆ ಕ್ಷಮೆ ಕೇಳಬಹುದು, ಧನ್ಯವಾದ ಹೇಳಬಹುದು, ತಮ್ಮಿಷ್ಟದ ಸ್ಪರ್ಧಿಗೆ ಗಿಫ್ಟ್ ಕೂಡ ನೀಡಬಹುದು. ಈ ಸಂದರ್ಭದಲ್ಲಿ ಆರ್ಯವರ್ಧನ್ ಗುರೂಜಿ (Aryavardhan) ಅವರು ಒಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಸ್ಪರ್ಧಿಗಳಲ್ಲಿ ಒಂದಷ್ಟು ಬದಲಾವಣೆ ಆಗುತ್ತದೆ. ಸಣ್ಣ ವಿಚಾರಕ್ಕೆ ದೊಡ್ಡ ಜಗಳ ನಡೆಯುತ್ತದೆ. ಕೆಲವರು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಕ್ಲೊಸ್ ಆಗುತ್ತಾರೆ. ಇನ್ನೂ ಕೆಲವರು ಗೊತ್ತಿಲ್ಲದೆಯೇ ಮತ್ತೊಬ್ಬರ ಮನಸ್ಸನ್ನು ನೋಯಿಸಿರುತ್ತಾರೆ. ಆ ಕ್ಷಣಗಳನ್ನು ನೆನಪು ಮಾಡಿಕೊಳ್ಳಲು, ತಪ್ಪಿದ್ದರೆ ಕ್ಷಮೆ ಕೇಳಲು ಬಿಗ್ ಬಾಸ್ ಈ ಬಾರಿ ಅವಕಾಶ ನೀಡಿದ್ದರು. ಆಗ ಮಾಂಗಲ್ಯ ಸರ ಮಾಡಿಸಿಕೊಡುವ ಭರವಸೆಯನ್ನು ಜಯಶ್ರೀಗೆ ಗುರೂಜಿ ನೀಡಿದ್ದಾರೆ.

ಗುರೂಜಿ ಹಾಗೂ ಜಯಶ್ರೀ ನಡುವೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಇದಕ್ಕೆ ಕಾರಣವೂ ಇದೆ. ಆರಂಭದಲ್ಲಿ ಜಯಶ್ರೀ ಹಾಗೂ ಚೈತ್ರಾ ಹಳ್ಳಿಕೇರಿ ಕ್ಲೋಸ್ ಆಗಿದ್ದರು. ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಹೋದ ನಂತರದಲ್ಲಿ ಗುರೂಜಿ ಜತೆ ಜಯಶ್ರೀಗೆ ಬಾಂಧವ್ಯ ಬೆಳೆಯಿತು. ಅದನ್ನು ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಅನೇಕ ಬಾರಿ ಮಾತನಾಡಿಕೊಂಡಿದ್ದಿದೆ.

ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ ವಸ್ತುವನ್ನು ಗಿಫ್ಟ್ ಆಗಿ ಮತ್ತೊಂದು ಸ್ಪರ್ಧಿಗೆ ನೀಡಬೇಕು. ಜಯಶ್ರೀ ಅವರು ತಮ್ಮ ಹೇರ್​ಬ್ಯಾಂಡ್​ಅನ್ನು ಗುರೂಜಿಗೆ ನೀಡಿದರು. ಇದನ್ನು ಮಗಳಿಗೆ ನೀಡುವಂತೆ ಜಯಶ್ರೀ ಕೋರಿದರು. ಮಗಳು ನೆನಪಾಗುತ್ತಿದ್ದಂತೆ ಗುರೂಜಿ ಕಣ್ಣೀರು ಹಾಕಿದ್ದಾರೆ.

TV9 Kannada


Leave a Reply

Your email address will not be published.