Bigg Boss OTT kannada: ‘ಜಿಂಗಲಕಾ ಲಕಾ ಲಕಾ..’ ಈ ವಾಕ್ಯ ಕೇಳಿದ ತಕ್ಷಣ ನೆನಪಿಗೆ ಬರೋದು ಆರ್ಯವರ್ಧನ್ ಹೆಸರು. ಈ ಡೈಲಾಗ್ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ದೊಡ್ಡ ಸಂಖ್ಯೆಯ ಮಂದಿ ಹಿಂಬಾಲಿಸುತ್ತಾರೆ.
Bigg Boss OTT Kannada Season 1: ‘ಬಿಗ್ ಬಾಸ್ ಒಟಿಟಿ’ಗೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರ ಎಂಟ್ರಿ ಆಗಿದೆ. ಮೊದಲ ಸ್ಪರ್ಧಿಯಾಗಿ ಅವರು ದೊಡ್ಮನೆ ಸೇರಿದ್ದಾರೆ. ಆರ್ಯವರ್ಧನ್ ಅವರು ಸದಾ ಟ್ರೋಲ್ ಆಗುವ ಮೂಲಕವೇ ಹೆಚ್ಚು ಸುದ್ದಿ ಆಗಿದ್ದಾರೆ. ಅವರು ಜ್ಯೋತಿಷ್ಯ ಶಾಸ್ತ್ರವನ್ನೂ ಹೇಳುತ್ತಾರೆ. ಐಪಿಎಲ್ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಪ್ರಿಡಿಕ್ಷನ್ ಸಾಕಷ್ಟು ಸುದ್ದಿ ಆಗುತ್ತಿತ್ತು. ಈ ವಿಚಾರದಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಆರ್ಯವರ್ಧನ್ ಅವರು ಬಿಗ್ ಬಾಸ್ ಮನೆ ಸೇರಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
‘ಜಿಂಗಲಕಾ ಲಕಾ ಲಕಾ..’ ಈ ವಾಕ್ಯ ಕೇಳಿದ ತಕ್ಷಣ ನೆನಪಿಗೆ ಬರೋದು ಆರ್ಯವರ್ಧನ್ ಹೆಸರು. ಈ ಡೈಲಾಗ್ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ದೊಡ್ಡ ಸಂಖ್ಯೆಯ ಮಂದಿ ಹಿಂಬಾಲಿಸುತ್ತಾರೆ. ಈಗ ‘ಬಿಗ್ ಬಾಸ್ ಒಟಿಟಿ’ ಮೂಲಕ ಅವರ ಅಭಿಮಾನಿ ಬಳಗ ಮತ್ತಷ್ಟು ಹಿರಿದಾಗಲಿದೆ.
ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನ ನಡೆಸಿಕೊಡುವ ಶೋಗೆ ಅವರು ತೆರಳುತ್ತಿದ್ದರು. ಐಪಿಎಲ್ನಲ್ಲಿ ಯಾವ ತಂಡ ಗೆಲ್ಲುತ್ತದೆ, ಯಾರು ಹೆಚ್ಚು ರನ್ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್ ಪಡೆಯುತ್ತಾರೆ ಎಂಬಿತ್ಯಾದಿ ವಿಚಾರಗಳನ್ನು ಪ್ರಿಡಿಕ್ಟ್ ಮಾಡುತ್ತಿದ್ದರು. ಆಟಗಾರನ ಜರ್ಸಿ ಸಂಖ್ಯೆ ಆಧಾರದ ಮೇಲೂ ಆ ಆಟಗಾರ ಎಷ್ಟು ರನ್ ಹೊಡೆಯುತ್ತಾನೆ ಎಂಬಿತ್ಯಾದಿ ವಿಚಾರಗಳಲ್ಲಿ ಅವರು ಭವಿಷ್ಯ ನುಡಿಯುತ್ತಿದ್ದರು. ಆದರೆ, ಈ ಭವಿಷ್ಯ ತಪ್ಪಾಗಿದ್ದೇ ಹೆಚ್ಚು. ಈ ಕಾರಣದಿಂದ ಅವರು ಸಾಕಷ್ಟು ಟ್ರೋಲ್ ಆಗುತ್ತಿದ್ದರು.