ನವದೆಹಲಿ: ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ASEAN(Association of Southeast Asian Nations) ಡಿಫೆನ್ಸ್​ ಮಿನಿಸ್ಟರ್ಸ್​ ಮೀಟಿಂಗ್ ಪ್ಲಸ್​​(ಎಡಿಎಂಎಂ-ಪ್ಲಸ್) ಸಭೆಯಲ್ಲಿ ಭಾಗಿಯಾಗಲಿದ್ದಾರೆ ಅಂತ ಭಾರತೀಯ ರಕ್ಷಣಾ ಸಚಿವಾಲಯ ತಿಳಿಸಿದೆ.

ಎಡಿಎಂಎಂ ಪ್ಲಸ್ ಅನ್ನೋದು 10 ASEAN ಸದಸ್ಯ ರಾಷ್ಟ್ರಗಳು ಮತ್ತು ಎಂಟು ಸಂವಾದ ಪಾಲುದಾರಾದ ಆಸ್ಟ್ರೇಲಿಯಾ, ಚೀನಾ, ಭಾರತ, ಜಪಾನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ಒಳಗೊಂಡ ಮಹತ್ವದ ವೇದಿಕೆಯಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ಅಧಿಕಾರಿಗಳು, ಇಂದು ರಾಜನಾಥ್ ಸಿಂಗ್ ಎಡಿಎಂಎಂ-ಪ್ಲಸ್ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಲಿದ್ದಾರೆ. ಈ ಸಭೆಯಲ್ಲಿ ದೇಶದ ರಕ್ಷಣೆ ಸಂಬಂಧ ವಿಚಾರವನ್ನು ಚರ್ಚೆ ಮಾಡುವುದರ ಜೊತೆಗೆ, ಕೊರೊನಾ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ.

The post ASEAN ರಕ್ಷಣಾ ಸಚಿವರ ಸಭೆಯಲ್ಲಿ ಇಂದು ರಾಜನಾಥ್ ಸಿಂಗ್ ಭಾಗಿ appeared first on News First Kannada.

Source: newsfirstlive.com

Source link