1/8
ಬ್ರಿಸ್ಬೇನ್ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಶುರುವಾಗಿರುವ ಪ್ರತಿಷ್ಠಿತ 2021-22ನೇ ಸಾಲಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತತ್ತರಿಸಿ ಹೋಗಿದೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಬಿರುಗಾಳಿಗೆ ತರಗೆಲೆಯಂತೆ ಉರುಳಿದ ಆಂಗ್ಲ ಬ್ಯಾಟರ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 147 ರನ್ಗೆ ಆಲೌಟ್ ಆಗಿದೆ. ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಒಂದು ವಿಕೆಟ್ ಕಳೆದುಕೊಂಡಿದೆಯಾದರೂ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.
2/8
ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹಸಿರು ತುಂಬಿದ ಪಿಚ್ನಲ್ಲಿ ಪುಟಿದೇಳುತ್ತಿದ್ದ ಚೆಂಡಿನ ಗತಿಯನ್ನು ಗಮನಿಸಲು ವಿಫಲರಾದ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. 50.1 ಓವರ್ಗಳಲ್ಲಿ ಇನಿಂಗ್ಸ್ಗೆ ತೆರೆ ಎಳೆಯಲು ಆಸ್ಟ್ರೇಲಿಯಾ ಬೌಲರ್ಗಳು ಯಶಸ್ವಿಯಾದರು.
3/8
ಮೊದಲ ಪಂದ್ಯದಲ್ಲೇ ರೋರಿ ಬರ್ನ್ಸ್ ಅವರನ್ನು ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದರು. ತಂಡದ ಮೊತ್ತ 11 ರನ್ ಆಗುವಷ್ಟರಲ್ಲಿ ಡೇವಿಡ್ ಮಲಾನ್ ಅವರನ್ನು ಜೋಶ್ ಹ್ಯಾಜಲ್ವುಡ್ ವಾಪಸ್ ಕಳುಹಿಸಿದರು. ಅದೇ ಮೊತ್ತಕ್ಕೆ ರೂಟ್ ಕೂಡ ಮರಳಿದರು.
4/8
ಬೆನ್ ಸ್ಟೋಕ್ಸ್ (5ರನ್,1 ಬೌಂಡರಿ), ಹಮೀದ್ (25 ರನ್, 3 ಬೌಂಡರಿ) ಕೂಡ ಕಮ್ಮಿನ್ಸ್ ಹಾಗೂ ಹೇಜಲ್ವುಡ್ರ ವೇಗದ ಬಲೆಗೆ ಬಿದ್ದು ಮೈದಾನ ತೊರೆದರು.
5/8
60 ರನ್ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ಗೆ 6ನೆ ವಿಕೆಟ್ ಜೊತೆಗೂಡಿದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಹಾಗೂ ಪೋಪೆ 52 ರನ್ಗಳ ಕಾಣಿಕೆ ನೀಡಿ ಆಸರೆಯಾಗುತ್ತಿದ್ದಂತೆ ದಾಳಿಗೆ ಬಂದ ಸ್ಟ್ರಾಕ್ ಬಟ್ಲರ್ (39 ರನ್, 5 ಬೌಂಡರಿ)ರ ವಿಕೆಟ್ಗಳನ್ನು ಎಗರಿಸುವ ಮೂಲಕ ಇಂಗ್ಲೆಂಡ್ಗೆ ಶಾಕ್ ನೀಡಿದರು.
6/8
ಪೋಪೆ ಕೂಡ (35 ರನ್, 2 ಬೌಂಡರಿ) ಕೂಡ ಗ್ರೀನ್ಗೆ ವಿಕೆಟ್ ಒಪ್ಪಿಸಿದರೂ ಕ್ರೀಸ್ವೋಕ್ರ ಆಕ್ರಣಕಾರಿ ಆಟ (21 ರನ್, 4 ಬೌಂಡರಿ) ನೆರವಿನಿಂದ ಇಂಗ್ಲೆಂಡ್ 50.1 ಓವರ್ಗಳಲ್ಲಿ 147 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಕಮ್ಮಿನ್ಸ್ 5, ಸ್ಟ್ರಾಕ್, ಹೆಜೇಲ್ವುಡ್ ತಲಾ 2, ಗ್ರೀನ್ 1 ವಿಕೆಟ್ ಕೆಡವಿದರು.
7/8
ಪ್ಯಾಟ್ ಕಮ್ಮಿನ್ಸ್ ದಾಖಲೆ: ಟೆಸ್ಟ್ ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ವೇಗಿ ಪ್ಯಾಟ್ ಕಮ್ಮಿನ್ಸ್ ಅವರು 59 ವರ್ಷಗಳ ಹಿಂದಿನ ದಾಖಲೆಯನ್ನು ಸಮಗೊಳಿಸಿದ್ದಾರೆ. 38 ರನ್ಗಳನ್ನು ನೀಡಿ 5 ವಿಕೆಟ್ ಕಬಳಿಸುವ ಮೂಲಕ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಈ ಸಾಧನೆ ಮಾಡಿದ ಎರಡನೇ ಆಸ್ಟ್ರೇಲಿಯಾ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
8/8
ಸ್ಟಾರ್ಕ್ ದಾಖಲೆ: ಆ್ಯಶಸ್ನ ಮೊದಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಪ್ರಥಮ ಎಸೆತದಲ್ಲೇ ವಿಕೆಟ್ ಕಬಳಿಸುವ ಮೂಲಕ ಮಿಚಲ್ ಸ್ಟ್ರಾಕ್ ನೂತನ ದಾಖಲೆ ಬರೆದಿದ್ದಾರೆ. ರೋರೆ ಬ್ರುನ್ಸ್ರ ವಿಕೆಟ್ ಎಗರಿಸುವ ಮೂಲಕ 1936ರಲ್ಲಿ ನಡೆದ ಆ್ಯಶಸ್ ಸರಣಿಯ ಮೊದಲ ಎಸೆತದಲ್ಲೇ ಆಸ್ಟ್ರೇಲಿಯಾದ ಎರ್ನಿ ಮೆಕ್ಕಾರ್ಮಿಕ್ ಅವರು ಇಂಗ್ಲೆಂಡ್ನ ಸ್ಟಾನ್ ವರ್ತಿಂಗ್ಟನ್ರ ವಿಕೆಟ್ ಕಬಳಿಸುವ ಮೂಲಕ ದಾಖಲೆ ನಿರ್ಮಿಸಿದ್ದರು.