Asia Cup 2022: ಏಷ್ಯಾಕಪ್​ ಆರಂಭಕ್ಕೆ 2 ವಾರ ಮುಂಚೆಯೇ ಸಮರಾಭ್ಯಾಸ ಶುರು ಮಾಡಿದ ಕಿಂಗ್ ಕೊಹ್ಲಿ | Virat Kohli to start practice this week in Mumbai for Asia Cup Cricket


Virat Kohli: ಈ ಹೈವೊಲ್ಟೇಜ್ ಪಂದ್ಯ ಟೀಂ ಇಂಡಿಯಾಕ್ಕಷ್ಟೇ ಅಲ್ಲ.. ಕೊಹ್ಲಿಗೂ ಪ್ರತಿಷ್ಟೆಯ ಸಮರವಾಗಿದೆ. ಇದೇ ಕಾರಣಕ್ಕೆ ವಿರಾಟ್ 2 ವಾರ ಮುಂಚಿತವಾಗಿಯೇ ಪಾಕ್ ವಿರುದ್ಧದ ಪಂದ್ಯಕ್ಕೆ ಸಮರಾಭ್ಯಾಸ ನಡೆಸೋಕೆ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ಪ್ರತಿಷ್ಟಿತ ಏಷ್ಯಾಕಪ್ (Asia Cup 2022) ಸಮರಕ್ಕೆ ಟೀಂ ಇಂಡಿಯಾ ಆಯ್ಕೆಯಾಗಿದೆ. ಅದ್ರೆ ಕ್ರಿಕೆಟ್ ಜಗತ್ತಿನ ಮಾತ್ರ ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಮೇಲೆ ನೆಟ್ಟಿದೆ. ಅರಬ್ಬರ ನಾಡಿನಲ್ಲಾದ್ರೂ ಕೊಹ್ಲಿ ಬ್ಯಾಟ್ ರನ್ ಮಳೆ ಹರಿಸುತ್ತಾ ಅನ್ನೋ ಚರ್ಚೆ ಶುರುವಾಗಿರುವಾಗಲೇ ಕಿಂಗ್ ಕೊಹ್ಲಿ ಮೈಗೊಡವಿ ಎದ್ದು ನಿಂತಿದ್ದಾರೆ. ಸಾಕಷ್ಟು ವಿಶ್ರಾಂತಿ ಬಳಿಕ ಈಗ ಕೆಲಸಕ್ಕೆ ಮರಳುವ ಸಮಯ ಬಂದಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ವಿಶ್ರಾಂತಿಯ ನಂತರ ನಿರೀಕ್ಷೆಯಂತೆ ತಂಡಕ್ಕೆ ಮರಳಿದ್ದಾರೆ.

ಕಳದೆರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್ ಕೊಹ್ಲಿಗೆ, ವಿಶ್ರಾಂತಿ ನೀಡಬೇಕು ಅನ್ನೋ ಕೂಗು ಜೋರಾಗಿತ್ತು. ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್, ಮತ್ತು ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡದೇ ರೆಸ್ಟ್ ನೀಡಲಾಗಿತ್ತು. ಆದ್ರೀಗ ಏಷ್ಯಾಕಪ್ ಟಿಟ್ವೆಂಟಿ ಸಮರಕ್ಕೆ ಆಯ್ಕೆಯಾಗಿರುವ ವಿರಾಟ್, ಹಳೆ ಫಾರ್ಮ್​ಗೆ ಮರಳ್ತಾರೆ ಅನ್ನೋ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಹೀಗೆ ಬಿಸಿ ಬಿಸಿ ಚರ್ಚೆ ಶುರುವಾಗಿರುವಾಗಲೇ ವಿರಾಟ್, ಸಮರಾಭ್ಯಾಸಕ್ಕೆ ಸಜ್ಜಾಗುತ್ತಿದ್ದಾರೆ.

ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಸಿಎ ಒಳಾಂಗಣದಲ್ಲಿ ಇದೇ ವಾರ ಏಷ್ಯಾಕಪ್​ಗಾಗಿ ಅಭ್ಯಾಸ ನಡೆಸಲಿದ್ದಾರೆ. ಸದ್ಯ ಕೊಹ್ಲಿ ವೊರ್ಲಿ ಓಂಕಾರ್ ಬಿಲ್ಡಿಂಗ್‌ನಲ್ಲಿ ವಾಸವಿದ್ದು, ಇಲ್ಲಿಗೆ ಕುರ್ಲಾ ಕಾಂಪ್ಲೆಕ್ಸ್‌ ಇಪ್ಪತ್ತು ನಿಮಿಷಗಳ ಪ್ರಯಾಣವಾಗಿದೆ. ಇದೇ ಕಾರಣಕ್ಕೆ ವಿರಾಟ್ ಇಲ್ಲಿ ಅಭ್ಯಾಸ ನಡೆಸಲು ಮುಂದಾಗಿದ್ದಾರೆ.

ಇನ್ನು ಆಗಸ್ಟ್ 27ರಂದು ಏಷ್ಯಾಕಪ್ ಆರಂಭವಾಗಲಿದ್ದು, ಆಗಸ್ಟ್ 28ರಂದು ಟೀಂ ಇಂಡಿಯಾ ಅಭಿಯಾನ ಆರಂಭವಾಗಲಿದೆ. ಅದ್ರಲ್ಲೂ ಟೀಂ ಇಂಡಿಯಾ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧವೇ ಮುಖಾಮುಖಿಯಾಗ್ತಿದೆ. ಹೀಗಾಗಿ ಈ ಹೈವೊಲ್ಟೇಜ್ ಪಂದ್ಯ ಟೀಂ ಇಂಡಿಯಾಕ್ಕಷ್ಟೇ ಅಲ್ಲ.. ಕೊಹ್ಲಿಗೂ ಪ್ರತಿಷ್ಟೆಯ ಸಮರವಾಗಿದೆ. ಇದೇ ಕಾರಣಕ್ಕೆ ವಿರಾಟ್ 2 ವಾರ ಮುಂಚಿತವಾಗಿಯೇ ಪಾಕ್ ವಿರುದ್ಧದ ಪಂದ್ಯಕ್ಕೆ ಸಮರಾಭ್ಯಾಸ ನಡೆಸೋಕೆ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

TV9 Kannada


Leave a Reply

Your email address will not be published. Required fields are marked *