Asia Cup 2022: ಜಸ್ಪ್ರೀತ್ ಬುಮ್ರಾ ಬಳಿಕ ಮತ್ತೊಬ್ಬ ಸ್ಟಾರ್ ಬೌಲರ್ ಏಷ್ಯಾಕಪ್​ನಿಂದ ಔಟ್..! | Injured Nurul Hasan out of Asia Cup BCB likely to announce squad by Thursday


Asia Cup 2022: ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಬಾಂಗ್ಲಾದೇಶದ ನೂರುಲ್ ಹಸನ್ ಏಷ್ಯಾಕಪ್‌ನಿಂದ ಹೊರಗುಳಿಯುವುದರ ನಡುವೆ ಒಂದು ಸಾಮ್ಯತೆ ಇದೆ. ಇವರಿಬ್ಬರೂ ಏಷ್ಯಾಕಪ್​ನಿಂದ ಹೊರಬಿದ್ದಿರುವ ಸುದ್ದಿ ಅವರವರ ದೇಶದ ತಂಡದ ಆಯ್ಕೆಗೂ ಮುನ್ನವೇ ಬಂದಿದೆ.

ಜಸ್ಪ್ರೀತ್ ಬುಮ್ರಾ (Jasprit Bumrah) ನಂತರ, ಏಷ್ಯಾಕಪ್‌ನಿಂದ (Asia Cup) ಹೊರಗುಳಿಯುವ ಆಟಗಾರರ ಪಟ್ಟಿಯಲ್ಲಿ ಮತ್ತೊಂದು ಹೆಸರು ನೋಂದಾಯಿಸಲಾಗಿದೆ. ಇದು ಬಾಂಗ್ಲಾದೇಶದ ನೂರುಲ್ ಹಸನ್ (Nurul Hasan) ಹೆಸರು. ನೂರುಲ್ ಹಸನ್ ಅವರ ಬೆರಳಿನಲ್ಲಿ ಮೂಳೆ ಮುರಿತವಾಗಿದ್ದು, ಸೋಮವಾರ ಸಿಂಗಾಪುರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯ ನಂತರ, ನೂರುಲ್ ಹಸನ್ ಅವರ ಗಾಯದಿಂದ ಚೇತರಿಸಿಕೊಳ್ಳಲು 4 ವಾರಗಳು ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಅವರಿಗೆ ಏಷ್ಯಾಕಪ್‌ ಆಡಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಅವರು ಈ ಬಹುರಾಷ್ಟ್ರೀಯ ಟೂರ್ನಿಯಿಂದ ಹೊರಗುಳಿಯಬೇಕಾಯಿತು.

ಜುಲೈ 31 ರಂದು ಜಿಂಬಾಬ್ವೆ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದ ವೇಳೆ ನೂರುಲ್ ಹಸನ್ ಗಾಯಗೊಂಡಿದ್ದರು. ಆ ಗಾಯದ ನಂತರ, ಜಿಂಬಾಬ್ವೆ ಪ್ರವಾಸದಿಂದ ನೂರುಲ್ ಹೊರಗುಳಿದಿದ್ದರು, ಈಗ ಅವರು ಏಷ್ಯಾಕಪ್‌ನಿಂದಲೂ ಹೊರಗುಳಿಯಬೇಕಾಗಿದೆ. ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಬಹುಶಃ ಬಾಂಗ್ಲಾ ಕ್ರಿಕೆಟ್ ಮಂಡಳಿ ಗುರುವಾರ ಏಷ್ಯಾಕಪ್‌ಗೆ ತಮ್ಮ ತಂಡವನ್ನು ಪ್ರಕಟಿಸಬಹುದು.

ಬುಮ್ರಾ ನಂತರ ಏಷ್ಯಾಕಪ್‌ನಿಂದ ನೂರುಲ್ ಹಸನ್ ಔಟ್

ಭಾರತದ ಜಸ್ಪ್ರೀತ್ ಬುಮ್ರಾ ಮತ್ತು ಬಾಂಗ್ಲಾದೇಶದ ನೂರುಲ್ ಹಸನ್ ಏಷ್ಯಾಕಪ್‌ನಿಂದ ಹೊರಗುಳಿಯುವುದರ ನಡುವೆ ಒಂದು ಸಾಮ್ಯತೆ ಇದೆ. ಇವರಿಬ್ಬರೂ ಏಷ್ಯಾಕಪ್​ನಿಂದ ಹೊರಬಿದ್ದಿರುವ ಸುದ್ದಿ ಅವರವರ ದೇಶದ ತಂಡದ ಆಯ್ಕೆಗೂ ಮುನ್ನವೇ ಬಂದಿದೆ. ಅಲ್ಲದೆ, ಬುಮ್ರಾ ನಿರ್ಗಮನವು ಟೀಮ್ ಇಂಡಿಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ. ನೂರುಲ್ ಹಸನ್ ಅನುಪಸ್ಥಿತಿಯಿಂದ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ಎದುರಾಗಿದೆ.

ಶಸ್ತ್ರಚಿಕಿತ್ಸೆಯ ನಂತರ 4 ವಾರಗಳ ರೆಸ್ಟ್

ಬೆರಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ನೂರುಲ್ ಹಸನ್ ಈಗ ನಾಲ್ಕು ವಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯ ದೇಬಾಶಿಶ್ ಚೌಧರಿ ಹೇಳಿದ್ದಾರೆ. ನೂರುಲ್ ಹಸನ್ ಅವರು ಆಟಗಾರರಲ್ಲದೆ ಬಾಂಗ್ಲಾದೇಶದ ಟಿ20 ತಂಡದ ನಾಯಕರೂ ಆಗಿದ್ದರು ಎಂಬುದನ್ನು ಇಲ್ಲಿ ಗಮನಿಸಿಬೇಕಾದ ಸಂಗತಿಯಾಗಿದೆ.

ಅಂದಹಾಗೆ,ಇಂಜುರಿಗೆ ತುತ್ತಾಗಿರುವ ಬಾಂಗ್ಲಾದೇಶದ ಏಕೈಕ ಆಟಗಾರ ನೂರುಲ್ ಹಸನ್ ಅಲ್ಲ. ಬದಲಿಗೆ, ಇದು ತಂಡದ ಅರ್ಧದಷ್ಟು ಆಟಗಾರರ ಸ್ಥಿತಿಯಾಗಿದೆ. ಇದಕ್ಕೂ ಮೊದಲು, ಮುಸ್ತಫಿಜುರ್ ರೆಹಮಾನ್ ಮಂಡಿರಜ್ಜು, ಸೈಫುದ್ದೀನ್ ಬೆನ್ನಿನ ಗಾಯ, ಮುಸ್ತಾಫಿಕುರ್ ರಹೀಮ್ ಹೆಬ್ಬೆರಳು ಗಾಯ ಮತ್ತು ಶೋರಿಫುಲ್ ಇಸ್ಲಾಂ ಮೊಣಕಾಲು ಗಾಯದಿಂದ ಬಳಲುತ್ತಿದ್ದರು.

TV9 Kannada


Leave a Reply

Your email address will not be published. Required fields are marked *