Asia Cup 2022 Prize Money: ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಸೋತವರಿಗೆ ಸಿಕ್ಕಿದ್ದೆಷ್ಟು? | Asia Cup 2022 Prize Money: How Much Do Winners and Runners up Make?


Asia Cup 2022 Prize Money: 171 ರನ್​ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವನ್ನು ಲಂಕಾ ಬೌಲರ್​ಗಳು 147 ರನ್​ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 23 ರನ್​ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

Asia Cup 2022 Prize Money: ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಸಿಕ್ಕ ಮೊತ್ತವೆಷ್ಟು? ಸೋತವರಿಗೆ ಸಿಕ್ಕಿದ್ದೆಷ್ಟು?

Asia Cup 2022 Prize Money

ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸಿ ಶ್ರೀಲಂಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಏಷ್ಯಾಕಪ್​ನಲ್ಲಿ 6 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹೆಗ್ಗಳಿಕೆಗೆ ತಂಡ ಪಾತ್ರವಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್​ ಕಲೆಹಾಕಿತು.

171 ರನ್​ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವನ್ನು ಲಂಕಾ ಬೌಲರ್​ಗಳು 147 ರನ್​ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 23 ರನ್​ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೆ ಟ್ರೋಫಿಯೊಂದಿಗೆ ಪ್ರಶಸ್ತಿ ಮೊತ್ತವನ್ನು ಕೂಡ ತನ್ನದಾಗಿಸಿಕೊಂಡಿತು.

ಪ್ರಶಸ್ತಿ ಮೊತ್ತ ಎಷ್ಟು?

ಪ್ರಶಸ್ತಿ ಮೊತ್ತ ಎಷ್ಟು?
ಏಷ್ಯಾಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶ್ರೀಲಂಕಾ ತಂಡವು ಬಹುಮಾನ ಮೊತ್ತವಾಗಿ 150,000 ಡಾಲರ್​ (ಸುಮಾರು 1,19,44,920 ರೂ.) ಅನ್ನು ಸ್ವೀಕರಿಸಿದೆ. ಹಾಗೆಯೇ ರನ್ನರ್ ಅಪ್ ಆಗಿರುವ ಪಾಕಿಸ್ತಾನ್ ತಂಡಕ್ಕೆ ಬಹುಮಾನ ಮೊತ್ತವಾಗಿ 75,000 ಡಾಲರ್ (ಸುಮಾರು 59,72,460 ರೂ.) ಲಭಿಸಿದೆ. ಇದಾಗ್ಯೂ ಸೂಪರ್-4 ಹಂತಕ್ಕೇರಿದ ಉಳಿದ ತಂಡಗಳಿಗೆ ಯಾವುದೇ ಪ್ರಶಸ್ತಿ ಮೊತ್ತ ನೀಡಲಾಗುತ್ತಿಲ್ಲ.

ಅದರಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಏಷ್ಯಾಕಪ್​ ಮೂಲಕ 1 ಕೋಟಿ 19 ಲಕ್ಷಕ್ಕೂ ಅಧಿಕ ಮೊತ್ತವನ್ನು ತನ್ನದಾಗಿಸಿಕೊಂಡಿದೆ.

6 ತಂಡಗಳ ಹಣಾಹಣಿ:

ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿದಿದ್ದವು. ಇದರಲ್ಲಿ ಐದು ತಂಡಗಳು ನೇರವಾಗಿ ಅರ್ಹತೆ ಪಡೆದಿದ್ದರೆ, ಒಂದು ತಂಡವು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಟ್ಟಿತ್ತು. ಅದರಂತೆ ಮೊದಲ ಸುತ್ತಿನಲ್ಲಿ ಭಾರತ, ಪಾಕಿಸ್ತಾನ್, ಹಾಂಗ್​ಕಾಂಗ್ ತಂಡಗಳು ಗ್ರೂಪ್​-ಎ ನಲ್ಲಿ ಸೆಣಸಿದ್ದವು. ಇನ್ನು ಗ್ರೂಪ್​-ಬಿ ನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ್​ ತಂಡಗಳು ಮುಖಾಮುಖಿಯಾಗಿದ್ದವು.

ಗ್ರೂಪ್ ಹಂತದ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿದ್ದ ನಾಲ್ಕು ತಂಡಗಳು ಸೂಪರ್-4 ಹಂತಕ್ಕೇರಿದ್ದವು. ಅದರಂತೆ ಸೂಪರ್​-4 ಸುತ್ತಿನಲ್ಲಿ ಭಾರತ, ಪಾಕಿಸ್ತಾನ್ , ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಸೂಪರ್-4 ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಗಳನ್ನು ಪಡೆದ 2 ತಂಡಗಳು ಫೈನಲ್ ಪ್ರವೇಶಿಸಿದ್ದವು. ಅದರಂತೆ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ್ ಹಾ್ಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಪಾಕ್ ತಂಡವನ್ನು ಬಗ್ಗು ಬಡಿದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.