ಬಾಗಲಕೋಟೆ, ಶಿವಮೊಗ್ಗಕ್ಕೆ ಯಾಕೆ ಎರಡು ಸಚಿವ ಸ್ಥಾನ?: ಯತ್ನಾಳ್

– ನಮ್ಮವರೇನು ವೋಟ್ ಕೊಟ್ಟಿಲ್ವಾ?

ವಿಜಯಪುರ: ಬಾಗಲಕೋಟೆ ಮತ್ತು ಶಿವಮೊಗ್ಗಕ್ಕೆ ಎರಡು ಸಚಿವ ಸ್ಥಾನ ನೀಡಿರೋದು ಯಾಕೆ? ಕಲಬುರಗಿ, ಚಾಮರಾಜನಗರ ಮತ್ತು ಮೈಸೂರಿನವರು ಮತ ನೀಡಿಲ್ಲವಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಪಕ್ಷದ ವಿರುದ್ಧವೇ ಗುಡುಗಿದ್ದಾರೆ.

ನ್ಯಾಯಯುತವಾಗಿ ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು. ಸಿಂದಗಿ ಉಪಚುನಾವಣೆಗೂ ಮೊದಲೇ ಸಚಿವ ಸ್ಥಾನ ನೀಡುವ ಕುರಿತು ಪಕ್ಷ ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲ ಜಿಲ್ಲೆಗೆ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಅನ್ನೋದಿದೆ. ಹಣೆ ಬರಹದಲ್ಲದ್ದರೆ ಯಾರಿಂದಲೂ ತಪ್ಪಿಸಲು ಆಗಲ್ಲ. ಈ ಬಾರಿ ವಿಜಯಪುರಕ್ಕೆ ಅನ್ಯಾಯ ಆಗಲ್ಲ. ನಮ್ಮ ಹೈಕಮಾಂಡ್ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ನಂಬಿಕೆ ಇದೆ. ಜಿಲ್ಲೆಯಲ್ಲಿ ಮೂಲ ಬಿಜೆಪಿಗರು ಮಂತ್ರಿ ಆಗ್ತಾರೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ: ಯತ್ನಾಳ್

ಸಿಎಂ ಕುರ್ಚಿ ಮೇಲೆ ಯತ್ನಾಳ್ ಕಣ್ಣು ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಕಾಲ ಕೂಡಿ ಬಂದರೆ ಯಾರು ತಪ್ಪಿಸೋಕೆ ಆಗಲ್ಲ. ಕಾಲ ಯಾರನ್ನು ಕೇಳಿ ಬರಲ್ಲ. ಸಿಎಂ ಸ್ಥಾನದ ರೇಸ್ ನಲ್ಲಿ ಬೊಮ್ಮಾಯಿ ಅವರ ಹೆದರು ಇರಲಿಲ್ಲ, ಆದ್ರೂ ಸಿಎಂ ಆದರಲ್ಲ. ಕಾಲಕ್ರಮೇಣ ಬದಲಾವಣೆ ನಡದೆ ನಡೆಯುತ್ತೆ. ಒಳ್ಳೆಕಾಲ ಬಂದೇ ಬರುತ್ತೆ ನಾವೇಕೆ ನಿರೀಕ್ಷೆ ಮಾಡಬಾರದು ಎಂದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುವ ನೈತಕತೆ ಇಲ್ಲ: ಸಿ.ಟಿ.ರವಿ

Source: publictv.in Source link