ಸಿಎಂ ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ ರಾಜ್ಯ ಮುನ್ನಡೆಸಲಿದ್ದಾರೆ: ಕೋಡಿಮಠ ಶ್ರೀ ಭವಿಷ್ಯ

ಶಿವಮೊಗ್ಗ: ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ, ಯಾವುದೇ ವಿವಾದಕ್ಕೆ ಆಸ್ಪದೇ ನೀಡದೇ ರಾಜ್ಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುನ್ನಡೆಸಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಜಿಲ್ಲೆಯ ಸೊರಬದ ಜಡೆ ಸಂಸ್ಥಾನ ಮಠದ ಶ್ರೀ ಸಿದ್ದವೃಷಭೇಂದ್ರ ಸ್ವಾಮೀಜಿ ಅವರ ಕರ್ತೃ ಗದ್ದುಗೆಯ ದರ್ಶನ ಪಡೆದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀಗಳು, ಬೊಮ್ಮಾಯಿ ಅವರು ಸರಳ, ಸಜ್ಜನಿಕೆಯ ಚಾಣಕ್ಷ್ಯ ಬುದ್ದಿಯಿಂದ ಮುಖ್ಯಮಂತ್ರಿ ಆಗಿ ಅವರ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದರು.

ಜಗತ್ತಿನ ಭೂಪಟದಲ್ಲಿ ಒಂದು ದೇಶ ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು ತಾನು ಮೊದಲೇ ಭವಿಷ್ಯ ನುಡಿದಿದ್ದೆ. ಈಗ ನೋಡಿ ಅಫ್ಘಾನಿಸ್ತಾನದ ಸ್ಥಿತಿ, ತಾಲಿಬಾನಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ ಎಂದು ತಿಳಿಸಿದರು.

ರಾಜಾಡಳಿತದ ಕಾಲದಿಂದಲೂ ಮಠಾಧೀಶರು ಹಾಗೂ ಗುರುಗಳು ರಾಜರಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಕೊರೊನಾ ಮತ್ತು ನೆರೆ ಪರಿಸ್ಥಿತಿಯಂತಹ ಸಂಕಷ್ಟದ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಮರ್ಥವಾಗಿ ಆಡಳಿತ ನಡೆಸಿದ್ದರು. ಇಂತಹ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಲ್ಲದು ಎಂದು ಮಠಾಧೀಶರು ಒಗ್ಗೂಡಿ ಅವರ ಬೆಂಬಲಕ್ಕೆ ನಿಂತಿದ್ದರು ಹೊರತು ಇದರಲ್ಲಿ ಸ್ವಾಮೀಜಿಗಳ ಯಾವುದೇ ಸ್ವಾರ್ಥ ಇರಲಿಲ್ಲ ಎಂದರು. ಇದನ್ನೂ ಓದಿ: ಮತ್ತೆ ಏರಿಕೆಯಾದ ಕೊರೊನಾ – ಇಂದು 1,217 ಹೊಸ ಪ್ರಕರಣ

blank

ರಾಜ್ಯದ ಆಡಳಿತ ಸಮರ್ಥವಾಗಿ ನಡೆಯಲು ಗುರುಗಳಾದವರು ಮಾರ್ಗದರ್ಶನ ನೀಡುವುದು ಕರ್ತವ್ಯ. ಆದರೆ ಇಂತಹ ಸಂದರ್ಭದಲ್ಲಿ ಸಾಧು – ಸಂತರು ಧ್ವನಿ ಎತ್ತಿದರೂ ಸಹ ಮನ್ನಣೆ ಸಿಗಲಿಲ್ಲ ಎಂಬುದು ಬೇಸರ ತರಿಸಿದೆ ಎಂದರು. ಇದನ್ನೂ ಓದಿ: ಮೈಸೂರು ಗ್ಯಾಂಗ್‍ರೇಪ್‍ನ 6ನೇ ಕಾಮುಕನ ಅರೆಸ್ಟ್ – ಆರೋಪಿಗಳ ಮಂಪರು ಪರೀಕ್ಷೆಗೆ ಚಿಂತನೆ

ಮುಂದಿನ ಐದು ವರ್ಷದವರೆಗೆ ಕೊರೋನಾ ಸೋಂಕು ಸಂಪೂರ್ಣ ನಾಶವಾಗುವುದಿಲ್ಲ. ಆದರೆ ಜನತೆ ಕೊರೊನಾ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮಕ್ಕಳ ಬಗ್ಗೆಯೂ ಆತಂಕಪಡುವ ಅಗತ್ಯವಿಲ್ಲ. ಸ್ವಚ್ಛತೆ ಬಗ್ಗೆ ಗಮನಹರಿಸಿ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತವಾದುದು ಎಂದು ಕೋಡಿಮಠದ ಶ್ರೀಗಳು ಹೇಳಿದರು. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್​​ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು

Source: publictv.in Source link