ಜಾತ್ಯಾತೀತ ಶಕ್ತಿಗಳು ಒಂದಾದ್ರೆ ಕೋಮುವಾದಿ ಶಕ್ತಿಗಳು ಸೋಲುತ್ತವೆ: ಎಚ್.ಕೆ ಪಾಟೀಲ್

ಗದಗ: ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಅನ್ನೋ ತತ್ವ, ಚಿಂತನೆಗೆ ಗೆಲುವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಮಹಾನಗರ ಪಾಲಿಕೆಯೇ ಇರಲಿ, ಮತ್ತೊಂದೇ ಇರಲಿ ಕೋಮುವಾದಿ ಶಕ್ತಿಗಳು ಸೋಲಬೇಕಾದರೆ ಜಾತ್ಯಾತೀತ ಶಕ್ತಿಗಳು ಕಾಂಗ್ರೆಸ್ ಜೊತೆ ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್

ಕೋಡಿಮಠದ ಶ್ರೀಗಳ ಹತ್ತಿರ ಭವಿಷ್ಯ ಕೇಳಲು ಸಿದ್ದರಾಮಯ್ಯ ಭೇಟಿ ಎಂಬ ಸಚಿವ ಗೋವಿಂದ ಕಾರಜೋಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಅವರು ಅನೇಕ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ. ಮಠ-ಮಾನ್ಯಗಳಿಗೆ ಹೋಗುತ್ತಾರೆ. ಗದುಗಿನ ಸ್ವಾಮೀಜಿಗಳ ಜೊತೆಯೂ ಸಿದ್ದರಾಮಯ್ಯ ಉತ್ತಮ ಸಂಬಂಧಗಳನ್ನು ಹೊಂದಿದ್ದಾರೆ ಎಂದರು.  ಇದನ್ನೂ ಓದಿ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ

blank

ಕೋಡಿಮಠದ ಶ್ರೀಗಳ ಹತ್ತಿರ ಬರೀ ಭವಿಷ್ಯ ಕೇಳಲು ಹೋಗಬೇಕು ಅಂತೇನಿಲ್ಲ. ಭಕ್ತಿಯಿಂದಲೂ ಹೋಗಬಹುದು. ಶ್ರೀಗಳು ಭವಿಷ್ಯ ಹೇಳುವುದಲ್ಲಿ ಪ್ರಖ್ಯಾತರು. ಸಿದ್ದರಾಮಯ್ಯ ಭವಿಷ್ಯ ಕೇಳಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

 

Source: publictv.in Source link