ಕೋಮುವಾದಿ ಶಕ್ತಿ ಸೋಲಿಸಬೇಕೆಂಬ ತತ್ವ ಸಿದ್ಧಾಂತಕ್ಕೆ ಗೆಲುವಾಗಲಿದೆ: ಎಚ್.ಕೆ.ಪಾಟೀಲ್

– ಜಾತ್ಯಾತೀತ ಶಕ್ತಿಗಳು ಒಂದಾಗಬೇಕು

ಗದಗ: ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕು ಎಂಬ ತತ್ವ ಸಿದ್ಧಾಂತಕ್ಕೆ ಗೆಲುವಾಗಲಿದೆ. ಜಾತ್ಯಾತೀತ ಶಕ್ತಿಗಳು ಒಂದಾಗಬೇಕು ಎಂದು ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಪಾಲಿಕೆ ಕಾಂಗ್ರೆಸ್ ಪಾಲಾಗುವ ವಿಶ್ವಾಸ ವ್ಯಕ್ತಪಡಿಸಿದರು. ಕಲಬುರಗಿ ಆಗಿರಲಿ ಮತ್ತೊಂದೆಡೆ ಇರಲಿ, ಜಾತ್ಯಾತೀತ ಶಕ್ತಿಗಳು ಒಂದಾಗಬೇಕು. ಜೆಡಿಎಸ್ ಕಾಂಗ್ರೆಸ್ ನೊಂದಿಗೆ ಒಂದಾಗುತ್ತಾರೆ ಎಂಬ ಆಶಯ ಹಾಗೂ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ – ಶಿಗ್ಗಾಂವಿ ಅಜ್ಜಿ ಮನೆಗೆ ಡಿಸಿ ಭೇಟಿ, 3 ತಿಂಗಳಲ್ಲಿ ಮನೆ ಭರವಸೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಡಿಮಠದ ಶ್ರೀಗಳನ್ನು ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಕೊಡಿಮಠದ ಸ್ವಾಮೀಜಿಯವರನ್ನು ಭೇಟಿಯಾಗಿರುವುದು ಹೊಸತಲ್ಲ. ಅನೇಕ ಮಠ ಮಾನ್ಯಗಳಿಗೂ ಹೋಗುತ್ತಾರೆ. ಗದಗಿನ ಸ್ವಾಮೀಜಿಗಳ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದರು. ಕೋಡಿಮಠದ ಸ್ವಾಮೀಜಿ ಬಳಿ ಭಕ್ತಿಯಿಂದ ಹೋಗಿರಬಹುದು. ಭವಿಷ್ಯ ಕೇಳಿದರೂ ತಪ್ಪೇನಿಲ್ಲ.

ಕೊಡಿಮಠದ ಸ್ವಾಮೀಜಿ ಭವಿಷ್ಯ ಕೇಳುವುದರಲ್ಲಿ ಪ್ರಖ್ಯಾತರು. ಅವರು ಭವಿಷ್ಯ ಕೇಳಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಬರುತ್ತದೆ ಎಂದರೆ ನಾವೆಲ್ಲ ಹೆಮ್ಮೆ ಪಡೋಣ ಎಂದರು.

Source: publictv.in Source link