Atal Bihari Vajpayee: ಕಾಂಗ್ರೆಸ್ ಪಕ್ಷ ಸಾವರ್ಕರ್ ರನ್ನು ವಿರೋಧಿಸಿದರೆ ತನ್ನದೇ ಹಿರಿಯ ನಾಯಕರ ವಿರೋಧಿಸಿದಂತೆ – ಪ್ರಲ್ಹಾದ್ ಜೋಶಿ ತಿರುಗೇಟು | If Congress party opposing Veer Savarkar it will be as opposing its own party stalwarts says Union Minister Pralhad Joshi


Siddaramaiah: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆದು ಹಾಕಿದ ಪ್ರಕರಣ ಕುರಿತು, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ನಾಯಕರ ನಿಲುವನ್ನ ಪ್ರಶ್ನಿಸಿದ್ದಾರೆ. ಸಾವರ್ಕರ್ ಅವರ ಭಾವಚಿತ್ರವನ್ನ ಮುಸ್ಲಿಮರ ಏರಿಯಾದಲ್ಲೇ ಏಕೆ ಹಾಕಬೇಕಿತ್ತು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು.

Atal Bihari Vajpayee: ಕಾಂಗ್ರೆಸ್ ಪಕ್ಷ ಸಾವರ್ಕರ್ ರನ್ನು ವಿರೋಧಿಸಿದರೆ ತನ್ನದೇ ಹಿರಿಯ ನಾಯಕರ ವಿರೋಧಿಸಿದಂತೆ - ಪ್ರಲ್ಹಾದ್ ಜೋಶಿ ತಿರುಗೇಟು

ಕಾಂಗ್ರೆಸ್ ಪಕ್ಷ ಸಾವರ್ಕರ್ ರನ್ನು ವಿರೋಧಿಸಿದರೆ ತನ್ನದೇ ಹಿರಿಯ ನಾಯಕರ ವಿರೋಧಿಸಿದಂತೆ – ಪ್ರಲ್ಹಾದ್ ಜೋಶಿ ತಿರುಗೇಟು

ಪ್ರಖರ ರಾಷ್ಟ್ರವಾದಿಗಳ ವಿರೋಧಿಸುವುದು ಇಂದಿನ ಕಾಂಗ್ರೆಸ್ ನ ಸಹಜ ಗುಣ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದು ಹೋರಾಟದ ಕಿಚ್ಚು ಹತ್ತಿಸಿದ್ದ ವೀರ ಸಾವರ್ಕರ್ (Veer Savarkar) ಬಗ್ಗೆ ಕಾಂಗ್ರೆಸ್ (Congress) ನಾಯಕರ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಖಂಡಿಸಿದ್ದಾರೆ.

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರ ತೆಗೆದು ಹಾಕಿದ ಪ್ರಕರಣ ಕುರಿತು, ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿರುವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ನಾಯಕರ ನಿಲುವನ್ನ ಪ್ರಶ್ನಿಸಿದ್ದಾರೆ. ಸಾವರ್ಕರ್ ಅವರ ಭಾವಚಿತ್ರವನ್ನ ಮುಸ್ಲಿಮರ ಏರಿಯಾದಲ್ಲೇ ಏಕೆ ಹಾಕಬೇಕಿತ್ತು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಈ ಕುರಿತಂತೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಲ್ಜಾದ್ ಜೋಶಿ ಅವರು, ಈ ರೀತಿ ಮಾತನಾಡುವವರು ನಕಲಿ ಕಾಂಗ್ರೆಸಿಗರು. ಸಾವರ್ಕರ್ ಒಬ್ಬ ಸೇನಾನಿ. ವಿನಾಯಕ ದಾಮೋದರ ಸಾವರ್ಕರ್ ಅವರ ರಾಷ್ಟ್ರಾಭಿಮಾನ, ಹೋರಾಟದ ಕಿಚ್ಚು ಕಂಡು ಸ್ವತಃ ಕಾಂಗ್ರೆಸ್‌ನ ಅಂದಿನ ನಾಯಕರು, ಅವರಿಗೆ ಗೌರವ ಸಲ್ಲಿಸಿ ನಮಿಸಿದ್ದರು. ಆದರೆ ಇಂದಿನ ನಕಲಿ ಕಾಂಗ್ರೆಸಿಗರು ಸ್ವಾತಂತ್ರ್ಯ ಹೋರಾಟದ ವೀರನಿಗೆ ಅವಮಾನಿಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಅಂದಿನ ನಾಯಕರಿಗೆ ಇಂದಿನ ಕೈ ನಾಯಕರು ಮಾಡುತ್ತಿರುವ ಅವಮಾನ ಎಂಬುದು ನೆನಪಿರಲಿ. ಇತಿಹಾಸ ತಿಳಿಯದೆ, ಮನಬಂದಂತೆ ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಜೋಶಿಯವರು ವಾಗ್ದಾಳಿ ನಡೆಸಿದ್ದಾರೆ.

ಕವಿ ಹೃದಯಿ, ಸಂವೇದನಾಶೀಲ ವ್ಯಕ್ತಿ, ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರು (Atal Bihari Vajpayee) ಸಾವರ್ಕರ್ ಅವರ ಬಗ್ಗೆ ಆಡಿದ ಮಾತುಗಳನ್ನ ಜೋಶಿ ಅವರು ತಮ್ಮ ಟ್ವೀಟ್ ಜೊತೆ ಟ್ಯಾಗ್ ಮಾಡಿದ್ದಾರೆ. ಇಂದು ಅಟಲ್ ಜೀ ಅವರ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಅಟಲ್ ಜೀ ಅವರ ಭಾಷಣದ ತುಣುಕನ್ನ ಟ್ಯಾಗ್ ಮಾಡಿರುವ ಪ್ರಲ್ಹಾದ್ ಜೋಶಿಯವರು, ಅಟಲ್ ಜೀ, ಇಂದಿರಾ ಗಾಂಧಿಯಂತಹ ನಾಯಕರು, ಸಾವರ್ಕರ್ ಬಗ್ಗೆ ಹೊಂದಿದ್ದ ಗೌರವದ ಬಗ್ಗೆ ಕೈ ನಾಯಕರಿಗೆ ಈ ಮೂಲಕ ಜೋಶಿಯವರು ನೆನಪಿಸಿದ್ದಾರೆ.

ಸಾವರ್ಕರ್ ಕುರಿತು ಪ್ರಖರ ಭಾಷಣ ಮಾಡಿದ್ದ ಅಟಲ್ ಜೀ, ಸಾವರ್ಕರ್ ಅಂದ್ರೆ ಒಂದು ತತ್ವ, ಸಾವರ್ಕರ್ ಅಂದ್ರೆ ತರ್ಕ ಹೀಗೆ ಸಾವರ್ಕರ್ ಅವರಿಗೆ ನೀಡಬಹುದಾದ ಎಲ್ಲಾ ಉಪಮೆಗಳನ್ನೂ ನೀಡಿ ಗೌರವ ಸೂಚಿಸಿದ್ದರು. ಅದೇ ಸಂಧರ್ಭದಲ್ಲಿ ಅಟಲ್ ಜೀ, “ಕವಿತೆ ಮತ್ತು ಕ್ರಾಂತಿ‌ ಒಟ್ಟಿಗೆ ಹೋಗಲಾರವು. ಆದರೆ ಸಾವರ್ಕರ್ ಅವರಲ್ಲಿದ್ದ ಕವಿ ಅತ್ಯಂತ ಉತ್ತುಂಗದಲ್ಲಿದ್ದ ಕಾರಣ ಅವರಿಂದ ಕವಿತೆ ಸೃಷ್ಟಿಸುವುದಕ್ಕೂ ಕ್ರಾಂತಿ ಹುಟ್ಟುಹಾಕುವುದಕ್ಕೂ ಸಾಧ್ಯವಾಗಿತ್ತು ಎಂದು ಅಟಲ್ ಜೀ ಅಭಿಪ್ರಾಯ ವ್ಯಕ್ತಪಡಿಸಿದ್ದ ವೀಡಿಯೋವನ್ನು ಪ್ರಲ್ಹಾದ ಜೋಶಿಯವರು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.