ಮುಂಬೈ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಳಿ ಮಹಾನ್ ಕಳ್ಳರು ಎಟಿಎಂನ್ನೇ ಬ್ಲಾಸ್ಟ್​ ಮಾಡಿ ಬರೋಬ್ಬರಿ 28 ಲಕ್ಷ ಹಣ ಹೊತ್ತೊಯ್ದ ಘಟನೆ ನಡೆದಿದೆ. ಎಟಿಎಂ ಬ್ಲಾಸ್ಟ್ ಮಾಡಲು IED ಸುಧಾರಿತ ಸ್ಫೋಟಕವನ್ನ ಬಳಸಿದ್ದಾರೆ ಎಂದು ತಿಳಿದುಬಂದಿದೆ. ಪುಣೆಯಿಂದ 25 ಕಿಮೀ ದೂರದಲ್ಲಿ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ. ಕಳ್ಳರನ್ನ ಹಿಡಿಯಲು ಮಹಾರಾಷ್ಟ್ರ ಪೊಲೀಸರು ವಿಶೇಷ ತಂಡಗಳನ್ನ ರಚಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರವಾಗಿ ಹೇಳಿಕೆ ನೀಡಿರುವ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್.. ನಮಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಇಬ್ಬರು ಎಟಿಎಂ ಬಳಿಗೆ ಬಂದಿದ್ದಾರೆ.. ಎಟಿಎಂನ ಕ್ಯಾಶ್ ಡಿಸ್ಪೆನ್ಸರ್ ಬಳಿ ಐಇಡಿ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ. ಬ್ಲಾಸ್ಟ್ ಆದಾಗ ಎಟಿಎಂ ಮಷಿನ್ ಓಪನ್ ಆಗಿದೆ. ಸ್ಫೋಟದ ತೀವ್ರತೆಯಿಂದ ಒಂದಷ್ಟು ಹಣ ಚೆಲ್ಲಾಪಿಲ್ಲಿಯಾಗಿದೆ. ಕಳ್ಳರು ಕ್ಯಾಶ್ ಇದ್ದ ಟ್ರೇ ಎತ್ತಿಕೊಂಡು ಪರಾರಿಯಾಗಿದ್ದಾರೆ. ಖದೀಮರು ಆತುರದಲ್ಲಿ ಒಂದಷ್ಟು ಹಣವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಬ್ಯಾಂಕ್ ಅಧಿಕಾರಿಗಳ ಪ್ರಕಾರ ಎಟಿಎಂನಲ್ಲಿ 40 ಲಕ್ಷ ಹಣವಿತ್ತು. ಕಳ್ಳರು 28 ರಿಂದ 30 ಲಕ್ಷ ಹಣ ಹೊತ್ತೊಯ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ ರಂಜನ್ ಗಾಂವ್​ನಲ್ಲೂ ಇಂಥದ್ದೇ ಪ್ರಯತ್ನಗಳು ನಡೆದಿದ್ದವು.. ಈ ಕೇಸ್​ಗೆ ಸಂಬಂಧಪಟ್ಟ ಲಿಂಕ್​ಗಳನ್ನ ವಿಚಾರಣೆಗೊಳಪಡಿಸಿದ್ದೇವೆ ಎಂದಿದ್ದಾರೆ.

The post ATM ಬ್ಲಾಸ್ಟ್ ಮಾಡಿ 28 ಲಕ್ಷ ಹಣ ಕದ್ದ ಕಳ್ಳರು.. ಒಂದಷ್ಟು ಹಣವನ್ನ ಅಲ್ಲೇ ಬಿಟ್ಟು ಹೋದ್ರು appeared first on News First Kannada.

Source: newsfirstlive.com

Source link