ಚಿರು ಸರ್ಜಾ ಕನಸು ನನಸು ಮಾಡಲು ಮುಂದಾದ ನಟಿ ಮೇಘನಾ ರಾಜ್..!

ಸರ್ಜಾ ಕುಟುಂಬಕ್ಕೆ ನಿನ್ನೆ ಮರೆಯಲಾಗದ ದಿನ.. ಚಿರು ಅವರ ಜನ್ಮದಿನದ ನೆನಪಿನಲ್ಲಿ ಸಮಸ್ತ ಚಿರು ಕುಟುಂಬ ನಿಂತಿದೆ.. ಈ ಸುದಿನದಂದು ಮೇಘನಾ ರಾಜ್ ಸರ್ಜಾ ತನ್ನ ಪತಿ ದೇವರ ಕನಸನ್ನ ಈಡೇರಿಸೋ ಪಣ ತೊಟ್ಟಿದ್ದಾರೆ.. ಚಿರು ಕನಸನ್ನ ನನಸು ಮಾಡೋದೆ ನನ್ನ ಪಾಲಿಗೆ ಸಂಭ್ರಮ ಎಂದಿದ್ದಾರೆ.. ತನ್ನ ಪತಿದೇವರ ಫೋಟೋವನ್ನ ಚಿತ್ರವಾಗಿ ಬಿಡಿಸುತ್ತಿರೋ ಮೇಘನಾ.. ಬರಿ ತನ್ನ ಅಂತಾರಳದಲ್ಲಿ ಜೀವದ ಗೆಳೆಯನ ಫೋಟೋ ಮಾತ್ರ ಬಿಡಿಸ್ತಿಲಿ ಮೇಘನಾ.. ತನ್ನ ಗಂಡನ ಜೀವನ ಕನಸನ್ನು ಈಡೇರಿಸೋ ಪಣ ತೊಟ್ಟಿದ್ದಾರೆ,… Continue reading ಚಿರು ಸರ್ಜಾ ಕನಸು ನನಸು ಮಾಡಲು ಮುಂದಾದ ನಟಿ ಮೇಘನಾ ರಾಜ್..!

Published
Categorized as News

ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?

ಕಳೆದ ವಾರವಷ್ಟೇ ದೆಹಲಿ ಯಾತ್ರೆ ಮಾಡಿದ್ದ ಸಿಎಂ ಮತ್ತೆ ಮುಂದಿನ ವಾರ ಡೆಲ್ಲಿಗೆ ಹೋಗೋ ಪ್ಲ್ಯಾನ್ ಹಾಕೊಂಡಿದ್ದಾರೆ. ಸವಾಲುಗಳಿವೆ ಕೇಂದ್ರದ ಜೊತೆ ಉತ್ತಮ ಸಂಬಂಧ ಇರ್ಬೇಕು, ಅದಕ್ಕಾಗಿ ಹೋಗಿ ಬರ್ಲಿ. ಆದ್ರೆ ಪದೇ ಪದೇ ರಾಷ್ಟ್ರ ರಾಜಧಾನಿಗೆ ಹೋಗೋ ಸಿಎಂ ಇತ್ತ ರಾಜ್ಯ ರಾಜಧಾನಿ ಪ್ರವಾಸ ಮಾಡದೇ ಬೆಂಗಳೂರನ್ನ ನಿರ್ಲಕ್ಷಿಸಿದ್ರೆ ಹೇಗೆ? ಹೀಗೊಂದು ಪ್ರಶ್ನೆ ಇದೀಗ ಹುಟ್ಕೊಂಡಿದೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿ ಅಸಮಾಧಾನ ಭುಗಿಲೇಳಬಾರದು. ದೆಹಲಿ ನಾಯಕರಿಗೆ ಕಾಲಕಾಲಕ್ಕೆ ರಾಜ್ಯದ ಪರಿಸ್ಥಿತಿಯನ್ನ ತಿಳಿಸುತ್ತಿರಬೇಕು. ಉಸ್ತುವಾರಿ ನೇಮಕ,… Continue reading ಸಿಎಂ ಆದ್ಮೇಲೆ 7 ಬಾರಿ ದೆಹಲಿ ಪ್ರವಾಸ; ಬೆಂಗಳೂರು ಸಮಸ್ಯೆ ಮರೆತೇ ಬಿಟ್ರಾ ಬೊಮ್ಮಾಯಿ..?

Published
Categorized as News

ಬೆಂಗಳೂರಿನಲ್ಲಿ ಮತ್ತೊಂದು ಫ್ಯಾಮಿಲಿ ಸೂಸೈಡ್​​​​ -ಹೆಂಡ್ತಿಯನ್ನ ಕೊಂದು ನೇಣಿಗೆ ಶರಣಾದ ಪತಿ

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ನಡೆದಿದೆ. ಮಂಜುನಾಥ್ (32) ಹಾಗೂ ರೋಜಾ (28) ಮೃತರು. ಪತ್ನಿಯನ್ನ ಚಾಕುವಿನಿಂದ ಇರಿದು ಹತ್ಯೆಗೈದು ಪತಿ ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕನಕಪುರ ಮೂಲದ ಮಂಜುನಾಥ್ ಹಾಗೂ ಮಾವಳ್ಳಿಯ ರೋಜಾಗೆ 4 ವರ್ಷದ ಹಿಂದೆ ವಿವಾಹವಾಗಿತ್ತು, ಆದರೆ ಮಕ್ಕಳಿರಲಿಲ್ಲವಂತೆ. ಪತಿ ಲೇತ್ ಮಿಷನ್ ಕೆಲಸ ಮಾಡುತ್ತಿದ್ದನಂತೆ. ಇಂದು ಮಧ್ಯಾಹ್ನ ಇಬ್ಬರ… Continue reading ಬೆಂಗಳೂರಿನಲ್ಲಿ ಮತ್ತೊಂದು ಫ್ಯಾಮಿಲಿ ಸೂಸೈಡ್​​​​ -ಹೆಂಡ್ತಿಯನ್ನ ಕೊಂದು ನೇಣಿಗೆ ಶರಣಾದ ಪತಿ

Published
Categorized as News

‘ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?

ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ದುರ್ಗೆ ಹಾಗೂ ಬಿಜೆಪಿ ಸರ್ಕಾರ ಭಸ್ಮಾಸುರ ಇದ್ದಂತೆ. ಕರಾವಳಿ ರಾಜ್ಯದಿಂದ ಭಸ್ಮಾಸುರನ ನಿರ್ಮೂಲನೆ ಮಾಡುವುದು ಖಚಿತ ಅಂತ ಗೋವಾ ಫಾರ್ವರ್ಡ್ ಪಾರ್ಟಿ ನಾಯಕ ಕಿರಣ್‌ ಖಂಡೋಲ್ಕರ್‌ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಲು ಪಶ್ಚಿಮ ಬಂಗಾಳದಿಂದ ದುರ್ಗೆಯನ್ನು ಕರೆತರುವುದು ಅನಿವಾರ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಎಂಸಿ ಜೊತೆಗೆ ಮೈತ್ರಿ ಹೊಂದುವ ಬಗ್ಗೆ ಮಾತುಕತೆ ನಡೆದಿದೆ ಅಂತ ಅವರು ಹೇಳಿದರು. ಈ ಮಾತಿಗೆ ಸಿಎಂ ಪ್ರಮೋದ್‌ ಸಾವಂತ್‌ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ನೀವು ಶಾಂತದುರ್ಗೆಯನ್ನು… Continue reading ‘ಬಿಜೆಪಿ ಭಸ್ಮಾಸುರ ಆದರೆ, ಮಮತಾ ಬ್ಯಾನರ್ಜಿ ದುರ್ಗೆ ಇದ್ದಂತೆ’- ಹೀಗಂದಿದ್ಯಾರು?

Published
Categorized as News

ಹೆಡ್​​ಕೋಚ್​​ ಆಗಿ ದ್ರಾವಿಡ್​ ನೇಮಕದ ಕುರಿತು ಸ್ಪಷ್ಟ ಮಾಹಿತಿಯಿಲ್ಲ ಎಂದ ಕೊಹ್ಲಿ

ಐಸಿಸಿ ಟಿ-20 ವಿಶ್ವಕಪ್​ ಬಳಿಕ ಕನ್ನಡಿಗ, ರಾಹುಲ್​​ ದ್ರಾವಿಡ್​ ಟೀಮ್​ ಇಂಡಿಯಾದ ಕೋಚ್​​ ಆಗಲಿದ್ದಾರೆಂಬ ಸುದ್ಧಿ ಬಹಿರಂಗಗೊಂಡಿದೆ. ಈ ವಿಚಾರವಾಗಿ ಇದೇ ಮೊದಲ ಸಲ ಟೀಮ್​ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ವಿರಾಟ್​​ ಕೊಹ್ಲಿಗೆ, ರಾಹುಲ್​ ದ್ರಾವಿಡ್​ ಟೀಮ್​ ಇಂಡಿಯಾ ಕೋಚ್​​ ಆಗಲಿದ್ದಾರೆಯೇ ಎಂಬ ಪ್ರಶ್ನೆ ಎದುರಾಯ್ತು. ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ, ಸದ್ಯಕ್ಕೆ ಏನು ನಡೆಯುತ್ತಿದೆ ಎಂದು ನಿಖರವಾಗಿ ತಿಳಿದಿಲ್ಲ. ಹೆಚ್ಚಾಗಿ… Continue reading ಹೆಡ್​​ಕೋಚ್​​ ಆಗಿ ದ್ರಾವಿಡ್​ ನೇಮಕದ ಕುರಿತು ಸ್ಪಷ್ಟ ಮಾಹಿತಿಯಿಲ್ಲ ಎಂದ ಕೊಹ್ಲಿ

Published
Categorized as News

ರಸ್ತೆಗಿಳಿದು ಟ್ರಾಫಿಕ್​​ ಕ್ಲಿಯರ್​ ಮಾಡಿದ ಮಾಜಿ ಸಚಿವ ಸುರೇಶ್​ ಕುಮಾರ್

ಬೆಂಗಳೂರು: ಮಾಜಿ ಸಚಿವ, ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್​ ಕುಮಾರ್​ ಅವರು ಒಕಳಿಪುರಂ ಜಂಕ್ಷನ್​​ನಲ್ಲಿ ಟ್ರಾಫಿಕ್ ಜಾಮ್ ಕ್ಲಿಯರ್​ ಮಾಡಿದ್ದಾರೆ. ಇತ್ತೀಚೆಗೆ ಒಕಳಿಪುರಂ ಮಾರ್ಗದಲ್ಲಿ ಹೊಸದಾಗಿ ಲುಲು ಹೈಪರ್ ಮಾರ್ಕೆಟ್ ಆರಂಭಗೊಂಡಿದೆ. ಹೊಸದಾಗಿ ಆರಂಭಗೊಂಡಿರುವ ಮಾಲ್ ನಿಂದಾಗಿ ಜನದಟ್ಟಣೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರಿಗೆ ಕಿರಿಕಿರಿ ಅನುಭವಿಸುತ್ತಿದ್ದರು. ಒಕಳಿಪುರಂ ಸಿಗ್ನಲ್​​​ನಿಂದ ರಾಜಾಜಿನಗರ ಎಂಟ್ರಸ್ ವರೆಗೂ ನಿಧಾನವಾಗಿ ಸಂಚರಿಸುತ್ತಿದ್ದವು. ಈ ವೇಳೆ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಸುರೇಶ್​ ಕುಮಾರ್ ಅವರು ಟ್ರಾಫಿಕ್ ಕ್ಲಿಯರ್… Continue reading ರಸ್ತೆಗಿಳಿದು ಟ್ರಾಫಿಕ್​​ ಕ್ಲಿಯರ್​ ಮಾಡಿದ ಮಾಜಿ ಸಚಿವ ಸುರೇಶ್​ ಕುಮಾರ್

Published
Categorized as News

ಅಬ್ಬರಿಸಿ ಒಮನ್​​ಗೆ ಗೆಲುವು ತಂದಿಟ್ಟ ಭಾರತದ ಜತೀಂದರ್ ಸಿಂಗ್; ಈತ ಯಾರು?

ಟಿ20 ವಿಶ್ವಕಪ್​​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಪುವಾ ನ್ಯೂಗಿನಿ ತಂಡದ ವಿರುದ್ಧ 10 ವಿಕೆಟ್​ಗಳ ಜಯ ಸಾಧಿಸಿ ಶುಭಾರಂಭ ಮಾಡಿದೆ. ಆದರೆ ಈ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಅರ್ಧಶತಕ ಸಿಡಿಸಿದ ಜತೀಂದರ್​ ಸಿಂಗ್​. ಕೇವಲ 42 ಎಸೆತಗಳಲ್ಲಿ 73ರನ್​ ಕಲೆ ಹಾಕಿದ ಜತೀಂದರ್​ ಅಜೇಯವಾಗಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಆದರೆ ಅದ್ಭುತ ಇನ್ನಿಂಗ್ಸ್​ ಕಟ್ಟಿದ ಈ ಪ್ರತಿಭೆ ಭಾರತದ ಪಂಜಾಬ್​ ಮೂಲದವರು. ಪಂಜಾಬ್​ನ ಲೂಧಿಯಾನದಲ್ಲಿ ಜನಿಸಿದ ಜತೀಂದರ್​​, ಒಮನ್​​​ನಲ್ಲಿ ನೆಲೆಯೂರಿದ್ದಾರೆ. ಜತೀಂದರ್​​ ಮಾರ್ಚ್​ 5,… Continue reading ಅಬ್ಬರಿಸಿ ಒಮನ್​​ಗೆ ಗೆಲುವು ತಂದಿಟ್ಟ ಭಾರತದ ಜತೀಂದರ್ ಸಿಂಗ್; ಈತ ಯಾರು?

Published
Categorized as News

ಹಾನಗಲ್​​​​​ ಚುನಾವಣೆ ಗೆಲ್ಲಲು CM ಮಾಸ್ಟರ್ ಪ್ಲಾನ್; ಓಲೇಕಾರ ನಿವಾಸಕ್ಕೆ ಬೊಮ್ಮಾಯಿ ಭೇಟಿ

ಹಾವೇರಿ: ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲ ಬೇಕಾಗಿರುವ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಉಪಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದು, ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರದ ವೈಭವ ಲಕ್ಷ್ಮೀ ಪಾರ್ಕ್ ನಲ್ಲಿರೋ ಶಾಸಕ ಓಲೇಕಾರ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು, ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಓಲೇಕಾರ‌ ನಡುವಿನ‌ ಮುನಿಸು ಶಮನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನದ… Continue reading ಹಾನಗಲ್​​​​​ ಚುನಾವಣೆ ಗೆಲ್ಲಲು CM ಮಾಸ್ಟರ್ ಪ್ಲಾನ್; ಓಲೇಕಾರ ನಿವಾಸಕ್ಕೆ ಬೊಮ್ಮಾಯಿ ಭೇಟಿ

Published
Categorized as News

ಅಬ್ಬಬ್ಬಾ! ಒಟ್ಟಿಗೆ 92 ಹಾವುಗಳನ್ನು ಹಿಡಿದು ರಕ್ಷಿಸಿದ ಉರಗತಜ್ಞ; ಹೇಗೆ ಗೊತ್ತಾ?

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸೊನೊಮಾ ಕೌಂಟಿಯಲ್ಲಿರುವ ಮನೆಯೊಂದರಲ್ಲಿ ಉರಗತಜ್ಞ ಬರೋಬ್ಬರಿ 92 ಱಟಲ್ ಸರ್ಪಗಳನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾನೆ. ಮನೆಯ ಕೆಳಗೆ ಹಾವು ಕಾಣಿಸಿಕೊಂಡಿದ್ದರಿಂದ ಸೊನೊಮಾ ಕೌಂಟಿ ಸರೀಸೃಪ ಪಾರುಗಾಣಿಕಾ ಸಂಸ್ಥೆಯ ಅಲ್ ವುಲ್ಫ್ ಅವರನ್ನು ಮನೆಗೆ ಕರೆಸಲಾಯಿತು. ಈತ ಕಳೆದ 32 ವರ್ಷಗಳಿಂದ ಹಾವುಗಳನ್ನು ಹಿಡಿದು ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ, ಈ ಮನೆಯ ಅಡಿಯಲ್ಲಿ ಇಷ್ಟೊಂದು ಹಾವುಗಳನ್ನು ಕಂಡು ಅವರು ಗೊಂದಲಕ್ಕೊಳಗಾದರಂತೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಇಷ್ಟೊಂದು ಹಾವನ್ನು ಒಂದೇ… Continue reading ಅಬ್ಬಬ್ಬಾ! ಒಟ್ಟಿಗೆ 92 ಹಾವುಗಳನ್ನು ಹಿಡಿದು ರಕ್ಷಿಸಿದ ಉರಗತಜ್ಞ; ಹೇಗೆ ಗೊತ್ತಾ?

Published
Categorized as News

ಪಾಕ್​​ ವಿರುದ್ಧ ಭಾರತ ಸುಲಭ ಗೆಲುವು ದಾಖಲಿಸಲಿದೆ; ಮ್ಯಾಚ್​​ಗೆ ಮುನ್ನ ಭವಿಷ್ಯ ನುಡಿದ ಸ್ಟಾರ್​​ ಕ್ರಿಕೆಟಿಗ

ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಕುರಿತು ಮಾಜಿ ವೇಗಿ ಅಜಿತ್​ ಅಗರ್ಕರ್​ ಮಾತನಾಡಿದ್ದು, ಪಾಕಿಸ್ತಾನ ಅಷ್ಟೊಂದು ಬಲಿಷ್ಠವಾಗಿಲ್ಲ ಎಂದು ಹೇಳಿದ್ದಾರೆ. ಭಾರತದ ಪ್ರಸ್ತುತ ಗೆಲುವಿನ ಅಂಕಿ-ಅಂಶ ಮತ್ತು ತಂಡದ ಫಾರ್ಮ್ ಅನ್ನು ಗಮನಿಸಿದರೆ ಪಾಕಿಸ್ತಾನ, ಭಾರತಕ್ಕೆ ತಕ್ಕ ಸವಾಲು ನೀಡುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ಪಂದ್ಯದಲ್ಲಿ ಭಾರತ ಸುಲಭ ಗೆಲುವು ದಾಖಲಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಜಿತ್ ಅಗರ್ಕರ್​, ಭಾರತ – ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಯಾವಾಗಲೂ ಕುತೂಹಲ ಹೆಚ್ಚಿರುತ್ತದೆ.… Continue reading ಪಾಕ್​​ ವಿರುದ್ಧ ಭಾರತ ಸುಲಭ ಗೆಲುವು ದಾಖಲಿಸಲಿದೆ; ಮ್ಯಾಚ್​​ಗೆ ಮುನ್ನ ಭವಿಷ್ಯ ನುಡಿದ ಸ್ಟಾರ್​​ ಕ್ರಿಕೆಟಿಗ

Published
Categorized as News