
ಬಿಎಸ್ಎ ಬ್ರಾಂಡ್
ಹೊಸ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು BSA ಬ್ರಾಂಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾದ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಹೇಳಿದ್ದಾರೆ.
ಹೊಸ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು BSA (Birmingham Small Arms) ಬ್ರಾಂಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. 2016 ರಲ್ಲಿ BSA ಬ್ರಾಂಡ್ ಅನ್ನು ಸ್ವಾಧೀನಪಡಿಸಿಕೊಂಡ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ (CLPL), BSA ಬ್ರಾಂಡ್ ಹೆಸರಿನಲ್ಲಿ ಹೊಸ ಎಲೆಕ್ಟ್ರಿಕ್ ಮೋಟಾರ್ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಗ್ಗೆ ಮಹೀಂದ್ರಾ ಮತ್ತು ಮಹೀಂದ್ರಾದ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ಖಚಿತಪಡಿಸಿದ್ದಾರೆ.
ಬಿಎಸ್ಎ ಕಂಪನಿ ಅಥವಾ ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿಯನ್ನು 2016 ರಲ್ಲಿ ಸ್ವಾಧೀನಪಡಿಸಿಕೊಂಡ ಕ್ಲಾಸಿಕ್ ಲೆಜೆಂಡ್ಸ್ ಅನ್ನು ಮಹೀಂದ್ರಾ ಗ್ರೂಪ್ ಹೊಂದಿದೆ. ಕ್ಲಾಸಿಕ್ ಲೆಜೆಂಡ್ಸ್ ಈಗಾಗಲೇ ಯುನೈಟೆಡ್ ಕಿಂಗ್ಡಂನ ಕೋವೆಂಟ್ರಿಯಲ್ಲಿ ತಾಂತ್ರಿಕ ಕೇಂದ್ರವನ್ನು ಸ್ಥಾಪಿಸಿದೆ. ಇದು BSA ಮೋಟಾರ್ಸೈಕಲ್ಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿದೆ.